ಬಾಡಿ ವಾರಂಟ್ ಇದ್ದರೂ ಜೈಲಿನಿಂದ ಮುರುಘಾಶ್ರೀ ಬಿಡುಗಡೆ; ಕಾರಾಗೃಹ ಇಲಾಖೆಯಿಂದ ತನಿಖೆಗೆ ಸೂಚಿಸಿದ ನ್ಯಾಯಾಲಯ
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ 1ನೇ ಫೋಕ್ಸೋ ಕೇಸ್ನಲ್ಲಿ ಜಾಮೀನು ಹಿನ್ನಲೆ ಹೈಕೋರ್ಟ್ ಆದೇಶದನ್ವಯ ಬಿಡುಗಡೆಗೆ ಸೂಚನೆ ನೀಡಿತ್ತು. ಆದರೆ, 2ನೇ ಫೋಕ್ಸೋ ಪ್ರಕರಣದಲ್ಲಿ ಬಾಡಿ ವಾರೆಂಟ್ ಹಿನ್ನೆಲೆ ಬಂಧನ ವಾರೆಂಟ್ಗೆ ಸರ್ಕಾರಿ ವಕೀಲ ಜಗದೀಶ್ ಮನವಿ ಮಾಡಿದ್ದರು. ಈ ಬಗ್ಗೆ ಕೋರ್ಟ್ನಲ್ಲಿ ಸರ್ಕಾರಿ ವಕೀಲ ಜಗದೀಶ್ ಪ್ರಶ್ನಿಸಿರುವ ಬೆನ್ನಲ್ಲೇ ಕಾರಾಗೃಹ ಇಲಾಖೆಗೆ ತನಿಖೆ ನಡೆಸಿ ವರದಿ ನೀಡಲು 2ನೇ ಅಪರ ಜಿಲ್ಲಾ& ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ ಕೆ ಕೋಮಲಾರಿಂದ ಆದೇಶಿಸಿದೆ.
ಚಿತ್ರದುರ್ಗ, ನ.18: ಬಾಡಿ ವಾರಂಟ್ ಇದ್ದರೂ ಜೈಲಿನಿಂದ ಮುರುಘಾಶ್ರೀ (Murugha Math Swamiji) ಬಿಡುಗಡೆ ಹಿನ್ನೆಲೆ ಚಿತ್ರದುರ್ಗ (Chitradurga) ಕಾರಾಗೃಹ ಇಲಾಖೆಯ ಎಡಿಜಿಪಿ ಅವರಿಗೆ ತನಿಖೆ ನಡೆಸಲು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಆದೇಶಿಸಿದೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾ ಕಾರಾಗೃಹದ ಜೈಲರ್ ಆಗಿರುವ ಶ್ರೀಮಂತ್ ಗೌಡ ಪಾಟೀಲ್ ವಿರುದ್ಧ ತನಿಖೆಗೆ ಆದೇಶಿಸಿದೆ.
ಘಟನೆ ವಿವರ
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ 1ನೇ ಫೋಕ್ಸೋ ಕೇಸ್ನಲ್ಲಿ ಜಾಮೀನು ಹಿನ್ನಲೆ ಹೈಕೋರ್ಟ್ ಆದೇಶದನ್ವಯ ಬಿಡುಗಡೆಗೆ ಸೂಚನೆ ನೀಡಿತ್ತು. ಆದರೆ, 2ನೇ ಫೋಕ್ಸೋ ಪ್ರಕರಣದಲ್ಲಿ ಬಾಡಿ ವಾರೆಂಟ್ ಹಿನ್ನೆಲೆ ಬಂಧನ ವಾರೆಂಟ್ಗೆ ಸರ್ಕಾರಿ ವಕೀಲ ಜಗದೀಶ್ ಮನವಿ ಮಾಡಿದ್ದರು. ಇದಾದ ಬಳಿಕ ವಿಸಿ ಮೂಲಕ ಕೋರ್ಟ್ಗೆ ಹಾಜರು ಪಡಿಸಲು ನ್ಯಾಯಾಲಯ ಸೂಚಿಸಿತ್ತು. 1ನೇ ಕೇಸಲ್ಲಿ ಬಿಡುಗಡೆ ಆದೇಶ, 2ನೇ ಕೇಸಲ್ಲಿ ಬಾಡಿ ವಾರೆಂಟ್ ಬಗ್ಗೆಯೂ ಸೂಚನೆ ನೀಡಿತ್ತು. ನವೆಂಬರ್ 16ರ ಬೆಳಗ್ಗೆ 11ಕ್ಕೆ ಜಿಲ್ಲಾ ಕಾರಾಗೃಹ ಸಿಬ್ಬಂದಿ ಅವರು ವಿಸಿ ಮೂಲಕ ಮುರುಘಾಶ್ರೀಯನ್ನು ಹಾಜರು ಪಡಿಸಿದ್ದರು.
ಇದನ್ನೂ ಓದಿ:ಜೈಲಿನಿಂದ ಹೊರಬಂದ ಮುರುಘಾಶ್ರೀ ಭಾವುಕ: ಪ್ರಕರಣದ ಬಗ್ಗೆ ಶರಣರು ಹೇಳಿದ್ದಿಷ್ಟು
2ನೇ ಕೇಸಲ್ಲಿ ಬಾಡಿ ವಾರೆಂಟ್ ಇದ್ದರೂ ಬಿಡಬಹುದೆಂದು ಬಿಡುಗಡೆ
ನಂತರ ಮಧ್ಯಾಹ್ನಕ್ಕೆ ವಿಚಾರಣೆ ನಡೆಸುವುದಾಗಿ ಕೋರ್ಟ್ ಸೂಚಿಸಿತ್ತು. ಆದರೆ, ನವೆಂಬರ್ 16ರ 11:45ಕ್ಕೆ ಮುರುಘಾಶ್ರೀಯನ್ನು ಬಿಡುಗಡೆ ಮಾಡಲಾಗಿದೆ. 1ನೇ ಫೋಕ್ಸೋ ಕೇಸ್ನಲ್ಲಿ ಜಾಮೀನು, ಬಿಡುಗಡೆ ಆದೇಶ ಹಿನ್ನೆಲೆ ರಿಲೀಸ್ ಮಾಡಲಾಗಿದೆ. ಹೌದು, 2ನೇ ಕೇಸಲ್ಲಿ ಬಾಡಿ ವಾರೆಂಟ್ ಇದ್ದರೂ ಬಿಡಬಹುದೆಂದು ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ಕೋರ್ಟ್ನಲ್ಲಿ ಸರ್ಕಾರಿ ವಕೀಲ ಜಗದೀಶ್ ಪ್ರಶ್ನಿಸಿರುವ ಬೆನ್ನಲ್ಲೇ ಕಾರಾಗೃಹ ಇಲಾಖೆಗೆ ತನಿಖೆ ನಡೆಸಿ ವರದಿ ನೀಡಲು 2ನೇ ಅಪರ ಜಿಲ್ಲಾ& ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ ಕೆ ಕೋಮಲಾರಿಂದ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ