ಸಿಎಂ ಯಡಿಯೂರಪ್ಪ ಶಕ್ತಿ ಕಳೆದುಕೊಂಡಿದ್ದಾರೆ, ಆರೋಗ್ಯ ಸಚಿವರು ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ; ಡಿ ಕೆ ಶಿವಕುಮಾರ್

DK Shivakumar: ಸರ್ಕಾರ ಆಕ್ಸಿಜನ್ ಕೊಡದೇ ಇದ್ರೆ ಹೇಗೆ? ಚಾಮರಾಜನಗರ ದುರಂತದ ಜವಾಬ್ದಾರಿ ಹೊತ್ತು ಆರೋಗ್ಯ ಸಚಿವ ಡಾ. ಸುಧಾಕರ್ ರಾಜೀನಾಮೆ ಕೊಡಲಿ. ಸರ್ಕಾರ ಕೊವಿಡ್ ತಡೆಯಲು ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು. 

ಸಿಎಂ ಯಡಿಯೂರಪ್ಪ ಶಕ್ತಿ ಕಳೆದುಕೊಂಡಿದ್ದಾರೆ, ಆರೋಗ್ಯ ಸಚಿವರು ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ; ಡಿ ಕೆ ಶಿವಕುಮಾರ್
ಡಿ.ಕೆ.ಶಿವಕುಮಾರ್

Updated on: May 03, 2021 | 8:14 PM

ಬೆಂಗಳೂರು: ಚಾಮರಾಜನಗರ ದುರಂತ ಪ್ರಕರಣದಲ್ಲಿ ಸಚಿವರು ತಪ್ಪು ಮಾಹಿತಿ ಕೊಡ್ತಾ ಇದ್ದಾರೆ. ಸರ್ಕಾರ ಜನರ ಕೊಲೆ ಮಾಡಿದೆ. ಮೃತಪಟ್ಟವರಿಗೆ ಪರಿಹಾರ ಕೊಡಲೇಬೇಕು. ಸಿಎಂ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಇನ್ನೂ ಅವರು ಎಷ್ಟೂ ಅಂತ ಸುಳ್ಳು ಹೇಳುತ್ತಾರೆ. ಸಿಎಂ ಯಡಿಯೂರಪ್ಪ ಶಕ್ತಿ ಕಳೆದುಕೊಂಡಿದ್ದಾರೆ. ಆರೋಗ್ಯ ಸಚಿವರು ಇಡೀ ಸರ್ಕಾರವನ್ನೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರಿಗೆ ಎರಡನೇ ಡೋಸ್ ಲಸಿಕೆ ಸಿಗುತ್ತಿಲ್ಲ. ಲಸಿಕೆಯ ನೋಂದಣಿ ಪದ್ಧತಿ ಬದಲಾಯಿಸಲು ತಿಳಿಸಿದ್ದೇವೆ. ಪ್ರತಿ ಊರಿನಲ್ಲೂ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆಯನ್ನು ಕೊಡಬೇಕು. ನಮ್ಮ ಶಾಸಕರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಲು ಅವಕಾಶ ಕೇಳಿದ್ದರು. ಆದರೆ ಸಿಎಂ ಅನುಮತಿ ಕೊಟ್ಟಿಲ್ಲ. ಹಾಗಾಗಿ ನಾವು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದೆವು ಎಂದರು.

ಸಂಸದ ಜಾಧವ್ ರೆಮ್​ಡಿಸಿವಿರ್ ಕೊಂಡೊಯ್ದ ವಿಚಾರವಾಗಿಯೂ ಪ್ರತಿಕ್ರಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಸ್​ ಪಿ.ರವಿಕುಮಾರ್​ ಕೊಟ್ಟ ಉತ್ತರ ಸಮಂಜಸವಾಗಿಲ್ಲ. ನಮಗೂ ರೆಮ್​ಡಿಸಿವಿರ್ ಕೊಡಿ, ತೆಗೆದುಕೊಂಡು ಹೋಗುತ್ತೇವೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರದ ಸಿಎಂ ಯಡಿಯೂರಪ್ಪ, ಸಚಿವರ ಮೇಲೆ ನಂಬಿಕೆಯೇ ಇಲ್ಲ. ಮೆಡಿಕಲ್ ಆಕ್ಸಿಜನ್ ಕೊರತೆ ಬಗ್ಗೆ ಸಿಎಸ್ ಒಪ್ಪಿಕೊಂಡಿದ್ದಾರೆ. ಆಕ್ಸಿಜನ್ ಬೇಡಿಕೆಯನ್ನು ನಿಭಾಯಿಸಲು ಆಗ್ತಿಲ್ಲ ಎಂದು ಸಿಎಸ್ ಹೇಳಿದ್ದಾರೆ. ಶೇ.50ರಷ್ಟು ಮಾತ್ರ ಕೇಂದ್ರ ಸರ್ಕಾರ ಆಕ್ಸಿಜನ್ ಕೊಟ್ಟಿದೆ. ರಾಜ್ಯ ಸರ್ಕಾರ ಹೊಸ ಬೆಡ್​ಗಳಿಗೆ ಪ್ರಯತ್ನ ಮಾಡುತ್ತಿಲ್ಲ. ನನ್ನ ಹಾಸ್ಟೆಲ್ ಕೂಡ ಕೊಡಲು ನಾನು ತಯಾರಿದ್ದೇನೆ. ನೋಡೋಣ ಅಂತ ಮಾತ್ರ ರಾಜ್ಯ ಸರ್ಕಾರ ಹೇಳಿದೆ. ಕೊವಿಡ್ ತಡೆಯಲು ಕಳೆದ 8 ತಿಂಗಳಿಂದ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಅವರು ಟೀಕಿಸಿದರು.

ಆರೋಗ್ಯ ಸಚಿವರು ರಾಜೀನಾಮೆ ಕೊಡಲಿ; ಸಂಸದ ಡಿ. ಕೆ. ಸುರೇಶ್
ಸರ್ಕಾರ ಆಕ್ಸಿಜನ್ ಕೊಡದೇ ಇದ್ರೆ ಹೇಗೆ? ಚಾಮರಾಜನಗರ ದುರಂತದ ಜವಾಬ್ದಾರಿ ಹೊತ್ತು ಆರೋಗ್ಯ ಸಚಿವ ಡಾ. ಸುಧಾಕರ್ ರಾಜೀನಾಮೆ ಕೊಡಲಿ. ಸರ್ಕಾರ ಕೊವಿಡ್ ತಡೆಯಲು ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.

CM BS Yediyurappa lost his power he should resign urges KPCC President D K Shivakumar

ಇದನ್ನೂ ಓದಿ:
K Sudhakar Press Meet: ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ; ಸಚಿವ ಸುಧಾಕರ್ ಸ್ಪಷ್ಟನೆ

ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು ಮೂವರಲ್ಲ, ಮೂವತ್ನಾಲ್ಕು: ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಗಂಭೀರ ಆರೋಪ

(CM BS Yediyurappa lost control over govt he should resign demands KPCC President D K Shivakumar)

Published On - 8:07 pm, Mon, 3 May 21