ಕಾಂಗ್ರೆಸ್ ಗೆದ್ದಿದ್ದಕ್ಕೆ ರಣರಂಗವಾಯ್ತು ಮಸ್ಕಿ; ಪ್ರತಾಪ್ ಗೌಡ ಪಾಟೀಲರ ಮಕ್ಕಳಿಂದ ಗಲಾಟೆ, ಮಹಿಳೆಯ ಮಾನಭಂಗಕ್ಕೂ ಯತ್ನ !
ಪ್ರತಾಪ್ ಗೌಡ ಪಾಟೀಲರ ಮಕ್ಕಳಾದ ಪ್ರಸನ್ನ ಪಾಟೀಲ್, ಚೇತನ್ ಪಾಟೀಲ್ ಹಾಗೂ ಮತ್ತಿತರ ಬಿಜೆಪಿ ಕಾರ್ಯಕರ್ತರು ಸೇರಿ ಗಲಾಟೆ ನಡೆಸಿದ್ದು, ಕಾಂಗ್ರೆಸ್ನ್ನು ಬೆಂಬಲಿಸಿದ್ದ ಮಹಿಳೆಯೊಬ್ಬಳ ಮಾನಭಂಗಕ್ಕೂ ಪ್ರಯತ್ನಿಸಿದ್ದಾರೆ.
ರಾಯಚೂರು: ಇಲ್ಲಿನ ಮಸ್ಕಿ ಉಪಚುನಾವಣೆಯಲ್ಲಿ ನಿನ್ನೆ ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪರಾಜಿತ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್ರ ಮಕ್ಕಳು, ಬಿಜೆಪಿ ಕಾರ್ಯಕರ್ತರು ಸಿಕ್ಕಾಪಟೆ ಗಲಾಟೆ ಮಾಡುತ್ತಿದ್ದು, ಮಸ್ಕಿ ಎಂಬುದು ರಣರಂಗವಾದಂತಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕಂಡಲ್ಲಿ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ.
ಪ್ರತಾಪ್ ಗೌಡ ಪಾಟೀಲರ ಮಕ್ಕಳಾದ ಪ್ರಸನ್ನ ಪಾಟೀಲ್, ಚೇತನ್ ಪಾಟೀಲ್ ಹಾಗೂ ಮತ್ತಿತರ ಬಿಜೆಪಿ ಕಾರ್ಯಕರ್ತರು ಸೇರಿ ಗಲಾಟೆ ನಡೆಸಿದ್ದು, ಕಾಂಗ್ರೆಸ್ನ್ನು ಬೆಂಬಲಿಸಿದ್ದ ಮಹಿಳೆಯೊಬ್ಬಳ ಮಾನಭಂಗಕ್ಕೂ ಪ್ರಯತ್ನಿಸಿದ್ದಾರೆ. ಈ ಸಂಬಂಧ ಮಹಿಳೆ ಮಸ್ಕಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಲಾಟೆಗೆ ಸಂಬಂಧಪಟ್ಟಂತೆ, ಪ್ರತಾಪ್ ಗೌಡ ಪಾಟೀಲ್ರ ಇಬ್ಬರು ಮಕ್ಕಳು ಸೇರಿ ಒಟ್ಟು 13 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಮಸ್ಕಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಎಸ್ಪಿಗೆ ಕರೆ ಮಾಡಿದ ಸಿದ್ದರಾಮಯ್ಯ ಇನ್ನು ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಾಳ್ ಅವರು ಸಿದ್ದರಾಮಯ್ಯನವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಪ್ರತಾಪ್ ಗೌಡ ಪಾಟೀಲರ ಮಕ್ಕಳು ಮನೆಮನೆಗೆ ನುಗ್ಗಿ ದಾಂಧಲೆ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ನೀವೇ ಇಲ್ಲಿನ ಎಸ್ಪಿ ಜತೆ ಮಾತನಾಡಿ ಎಂದೂ ಮನವಿ ಮಾಡಿದ್ದಾರೆ. ಅದಾದ ಬಳಿಕ ರಾಯಚೂರು ಎಸ್ಪಿಗೆ ಕರೆ ಮಾಡಿದ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಜನರ ತೀರ್ಪು. ಆದಾಗ್ಯೂ ಅವರೇಕೆ ಗೂಂಡಾಗಿರಿ ಮಾಡುತ್ತಿದ್ದಾರೆ? ಸುಮ್ಮನೆ ಮನೆಯಲ್ಲಿ ಇರಲು ಹೇಳಿ, ಕ್ರಮ ಕೈಗೊಳ್ಳಿ ಎಂದು ಎಸ್ಪಿಗೆ ಸಿದ್ದರಾಮಯ್ಯನವರು ಹೇಳಿದ್ದಾರೆ.
ಇದನ್ನೂ ಓದಿ: ಅರ್ಜುನ್ ಜನ್ಯ ಅಣ್ಣ ಕೊರೊನಾದಿಂದ ನಿಧನ; ನೋವು ತೋಡಿಕೊಂಡ ಸಂಗೀತ ನಿರ್ದೇಶಕ
ಸಿಟಿ ಸ್ಕ್ಯಾನ್, ರಕ್ತ ತಪಾಸಣೆ, ಸ್ಟೀರಾಯ್ಡ್ ಯಾವಾಗ ಅಗತ್ಯ?-ಅಪಾಯದ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ ಏಮ್ಸ್ ನಿರ್ದೇಶಕ
Published On - 7:37 pm, Mon, 3 May 21