ಮಂಗಳೂರು: ಸಮುದ್ರಪಾಲಾಗ್ತಿದ್ದ ಯುವತಿಯನ್ನ ಕರಾವಳಿ ಕಾವಲು ಪಡೆ ರಕ್ಷಿಸಿರುವ ಘಟನೆ ನಗರದ ಹೊರವಲಯದ ಸೋಮೇಶ್ವರ ಬೀಚ್ ಬಳಿ ನಡೆದಿದೆ. ಸೋಮೇಶ್ವರ ಸಮುದ್ರ ತೀರದಲ್ಲಿ ಅಲೆಗಳಲ್ಲಿ ಸಿಲುಕಿ ಸಮುದ್ರಪಾಲಾಗ್ತಿದ್ದ ಯುವತಿ ಕೀರ್ತಿಯನ್ನು ರಕ್ಷಿಸಲಾಯಿತು.
23 ವರ್ಷದ ಕೀರ್ತಿ ಮೂಲತಃ ಬೆಂಗಳೂರಿನ ಬೊಮ್ಮಸಂದ್ರದ ನಿವಾಸಿ. ಯುವತಿ ತನ್ನ ಗೆಳತಿಯರಾದ ಜಯಶ್ರೀ, ಕ್ರಿಯಾ ಜೊತೆ ನಗರಕ್ಕೆ ಪ್ರವಾಸಕ್ಕೆಂದು ಬಂದಿದ್ದರು.
ಕ್ಯಾಬ್ ಮೂಲಕ ವಿಹಾರಕ್ಕೆಂದು ಬಂದಿದ್ದ ತಂಡ ಸಮುದ್ರದಲ್ಲಿ ಆಟವಾಡುವಾಗ ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸಿದೆ. ಈ ವೇಳೆ, ಅಲೆಗಳಲ್ಲಿ ಸಿಲುಕಿದ ಕಿರ್ತಿ ಹಾಗೇ ಕೊಚ್ಚಿ ಹೋಗುತ್ತಿದ್ದಳು. ಇದನ್ನು ಗಮನಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಅಶೋಕ್ ಸೋಮೇಶ್ವರ್, ಕಿರಣ್, ಌಂಟನಿ ಮತ್ತು ಶಿವಪ್ರಸಾದ್ ಕೂಡಲೇ ಕಾರ್ಯಪ್ರವೃತರಾಗಿ ಕೀರ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ 250 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ, ಯಾವೂರಲ್ಲಿ?