
ಬೆಂಗಳೂರು: ನವೆಂಬರ್ 3ರಂದು ನಡೆಯಲಿರುವ ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರದ ಬೈಎಲೆಕ್ಷನಗೆ ಮೂವರು ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ.
ಈಗಾಗಲೇ ಪ್ರತ್ಯೇಕ ಸಮಿತಿ ಮೂಲಕವೂ ಮುಖಂಡರನ್ನು ತಮ್ಮತ್ತ ಸೆಳೆಯಲು ಸಿದ್ಧತೆ ನಡೆಯುತ್ತಿದ್ದು ಇವರೆಲ್ಲರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ಕಸರತ್ತು ನಡೆಸಲಾಗುತ್ತಿದೆಯಂತೆ. ಉಪಚುನಾವಣೆಗೆ ಮುನ್ನ ಕ್ಷೇತ್ರದ ಪ್ರಮುಖ ನಾಯಕರು ತಮ್ಮ ಪಕ್ಷ ಸೇರಿದರೆ ಕಾಂಗ್ರೆಸ್ ಬಗ್ಗೆ ಮತದಾರರಲ್ಲಿ ಒಲವು ಮೂಡಬಹುದು. ಜೊತೆಗೆ, ಇದರಿಂದ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವರ್ಚಸ್ಸು ಹೆಚ್ಚುವ ನಿರೀಕ್ಷೆಯಿದೆ. ಹಾಗಾಗಿ, ಈ ಕಾರಣಕ್ಕೆ ಬೃಹತ್ ಕಾರ್ಯಕ್ರಮವೊಂದರ ಆಯೋಜನೆಗೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.