ಈ ಲೇಡಿ ಡಾನ್ ಕಂಡ್ರೇ ಏರಿಯಾದ ಜನ ಗಡಗಡ.. ಹಾಗಿದೆ ಈಕೆಯ ಹವಾ!
ಬೆಂಗಳೂರು: ಹೆಣ್ಣು ಅಂದ್ರೆ ಎಲ್ಲರಿಗೂ ಮೊದಲು ನೆನಪಾಗುವುದು ಆಕೆಯ ಮಮತೆ, ಮೃದು ಸ್ವಭಾವ. ಯಾಕಂದ್ರೆ ಹೆಣ್ಣಿಗೆ ಮಾತ್ರ ಮೃದು ಮನಸ್ಸು, ಸಂಕೋಚ, ಸೌಮ್ಯತೆಯನ್ನು ದೇವರು ನೀಡಿರುತ್ತಾನಂತೆ. ಆದರೆ ಈ ಏರಿಯಾದಲ್ಲಿರುವ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧ. ಏರಿಯಾದಲ್ಲಿ ಪೂರ್ತಿ ಆಕೆಯದ್ದೇ ದರ್ಬಾರ್. ಆಕೆಯ ಪರ್ಮಿಷನ್ ಇಲ್ದೇ ಏರಿಯಾಗೆ ಯಾರೂ ಎಂಟ್ರಿ ಕೊಡೋ ಹಾಗಿಲ್ಲವಂತೆ. ಈ ರೀತಿ ಆ ಮಹಿಳೆ ಏರಿಯಾದ ಜನರದಲ್ಲಿ ತನ್ನ ಹವಾ ಮೇಂಟೇನ್ ಮಾಡಿದ್ದಾಳೆ . ಆಕೆಯ ವರ್ತನೆಗೆ ಬೇಸತ್ತು ಸ್ಥಳೀಯರು ದೂರು ನೀಡಿದ್ರೂ ಏನೂ […]
ಬೆಂಗಳೂರು: ಹೆಣ್ಣು ಅಂದ್ರೆ ಎಲ್ಲರಿಗೂ ಮೊದಲು ನೆನಪಾಗುವುದು ಆಕೆಯ ಮಮತೆ, ಮೃದು ಸ್ವಭಾವ. ಯಾಕಂದ್ರೆ ಹೆಣ್ಣಿಗೆ ಮಾತ್ರ ಮೃದು ಮನಸ್ಸು, ಸಂಕೋಚ, ಸೌಮ್ಯತೆಯನ್ನು ದೇವರು ನೀಡಿರುತ್ತಾನಂತೆ. ಆದರೆ ಈ ಏರಿಯಾದಲ್ಲಿರುವ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧ. ಏರಿಯಾದಲ್ಲಿ ಪೂರ್ತಿ ಆಕೆಯದ್ದೇ ದರ್ಬಾರ್. ಆಕೆಯ ಪರ್ಮಿಷನ್ ಇಲ್ದೇ ಏರಿಯಾಗೆ ಯಾರೂ ಎಂಟ್ರಿ ಕೊಡೋ ಹಾಗಿಲ್ಲವಂತೆ. ಈ ರೀತಿ ಆ ಮಹಿಳೆ ಏರಿಯಾದ ಜನರದಲ್ಲಿ ತನ್ನ ಹವಾ ಮೇಂಟೇನ್ ಮಾಡಿದ್ದಾಳೆ . ಆಕೆಯ ವರ್ತನೆಗೆ ಬೇಸತ್ತು ಸ್ಥಳೀಯರು ದೂರು ನೀಡಿದ್ರೂ ಏನೂ ಪ್ರಯೋಜನವಾಗಿಲ್ಲ. ಇಂತಹ ಲೇಡಿ ಡಾನ್ ಇರೋದು ಬೆಂಗಳೂರಿನ ಥಣಿಸಂದ್ರದ ಸಾರಾಯಿಪಾಳ್ಯದಲ್ಲಿ.
ಮೇರಿಗೀತಾ ಎಂಬ ಮಹಿಳೆ ಏರಿಯಾ ಮಂದಿಗೆ ಭಾರಿ ಕಾಟಕೊಡ್ತಿದ್ದಾಳಂತೆ. ಏರಿಯಾ ಒಳಗೆ ದ್ವಿಚಕ್ರ ವಾಹನ ಬಿಟ್ಟು ಬೇರೆ ಯಾವುದೇ ವಾಹನ ತರುವಂತಿಲ್ಲ. ಕಾರು ತಂದು ರಸ್ತೆ ಬದಿ ನಿಲ್ಲಿಸಿದ್ರೆ ಬೆಳಗಾಗೋದ್ರೊಳಗೆ ಸಂಪೂರ್ಣ ಜಖಂ ಆಗಿರುತ್ತೆ. ಮೇರಿಗೀತಾ ಗೂಂಡಗಳನ್ನ ಕರೆಸಿ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದಾಳೆ. ಅಕ್ಕಪಕ್ಕದ ಮನೆಗಳ ಮೇಲೆ ಕಲ್ಲು ಹಾಗೂ ರಾಡ್ಗಳನ್ನ ಎಸೆದು ರಂಪಾಟ ಮಾಡುತ್ತಾಳಂತೆ. ಪ್ರತಿರೋಧ ವ್ಯಕ್ತಪಡಿಸಿದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಾಳಂತೆ. ಹೀಗಾಗಿ ಈಕೆಯ ವಿರುದ್ಧ ಸ್ಥಳೀಯರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.