ಮಹಾಮಾರಿ ಕೊರೊನಾ 2ನೇ ಅಲೆ ಜುಲೈನಲ್ಲಿ ಕಡಿಮೆಯಾಗಲಿದೆ; ಆದರೆ 3ನೇ ಅಲೆ ಯಾವಾಗ ಶುರುವಾಗಲಿದೆ ಗೊತ್ತಾ?

|

Updated on: May 20, 2021 | 10:39 AM

Corona 3rd Wave 6ರಿಂದ 8 ತಿಂಗಳ ಬಳಿಕ ಮತ್ತೆ 3ನೇ ಅಲೆ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಸಚಿವಾಲಯದಿಂದ ನೇಮಿಸಿದ್ದ ವಿಜ್ಞಾನಿಗಳ ಸಮಿತಿ ವರದಿ ಮಾಡಿದೆ.

ಮಹಾಮಾರಿ ಕೊರೊನಾ 2ನೇ ಅಲೆ ಜುಲೈನಲ್ಲಿ ಕಡಿಮೆಯಾಗಲಿದೆ; ಆದರೆ 3ನೇ ಅಲೆ ಯಾವಾಗ ಶುರುವಾಗಲಿದೆ ಗೊತ್ತಾ?
ಸಂಗ್ರಹ ಚಿತ್ರ
Follow us on

ದೆಹಲಿ: ಕೇಂದ್ರ ಸರ್ಕಾರದ ವಿಜ್ಞಾನ ಸಚಿವಾಲಯದಿಂದ ನೇಮಿಸಿದ್ದ ವಿಜ್ಞಾನಿಗಳ ಸಮಿತಿ ಒಂದು ಕಡೆ ಸಮಧಾನಕರ ಸುದ್ದಿ ನೀಡಿದ್ದರೆ ಅದರ ಬೆನ್ನಿಗೇ ಆತಂಕದ ಸಂಗತಿಯನ್ನೂ ಹೊರಹಾಕಿದೆ. ಪ್ರಸ್ತುತ ಎಲ್ಲರನ್ನೂ ಕಂಗೆಡಿಸಿರುವ ಕೊರೊನಾ 2ನೇ ಅಲೆ ಜುಲೈನಲ್ಲಿ ನಿಯಂತ್ರಣಕ್ಕೆ ಬರಲಿದೆಯಂತೆ. ಆದರೆ ಮಹಾಮಾರಿ 3ನೇ ಅಲೆ 6ರಿಂದ 8 ತಿಂಗಳ ಬಳಿಕ ಮತ್ತೆ ಆರಂಭವಾಗಲಿದೆ ಎಂದೂ ಎಚ್ಚರಿಕೆಯ ವರದಿ ನೀಡಿದೆ

ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಜಾರ್ಖಂಡ್, ರಾಜಸ್ಥಾನ, ಕೇರಳ, ಸಿಕ್ಕಿಂ, ಉತ್ತರಾಖಂಡ್, ಗುಜರಾತ್, ಹರಿಯಾಣ, ದೆಹಲಿ, ಗೋವಾದಲ್ಲಿ ಕೊರೊನಾ ಸೋಂಕು ಪೀಕ್‌ಗೆ ಹೋಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಹಾಗೂ ತಮಿಳುನಾಡು, ಈಶಾನ್ಯ ಭಾಗದಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗಲಿದೆ. ಮೇ 20-21ರೊಳಗೆ ಅಸ್ಸಾಂನಲ್ಲಿ ಗರಿಷ್ಟ ಕೇಸ್ ದಾಖಲಾಗುತ್ತೆ. ಮೇ 30ಕ್ಕೆ ಮೇಘಾಲಯದಲ್ಲೂ ಗರಿಷ್ಟ ಕೇಸ್ ದಾಖಲು‌. ಹಾಗೂ ತ್ರಿಪುರದಲ್ಲಿ ಮೇ 27ರ ವೇಳೆಗೆ ಗರಿಷ್ಟ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳ ಸಮಿತಿ ವರದಿ ಮಾಡಿದೆ.

ಮೂರನೇ ಅಲೆ‌ ಅಷ್ಟಪಂದು ತೀವ್ರವಲ್ಲ; ಅದೇ ಸದ್ಯಕ್ಕೆ ಸಮಾಧಾನ

ವಿಜ್ಞಾನಿಗಳ ಪ್ರಕಾರ ಮೇ ತಿಂಗಳ ಅಂತ್ಯದ ವೇಳೆಗೆ ಭಾರತವು ಪ್ರತಿದಿನ 1.5 ಲಕ್ಷ ಪ್ರಕರಣಗಳನ್ನು ವರದಿ ಮಾಡುವ ನಿರೀಕ್ಷೆಯಿದೆ ಮತ್ತು ಜುಲೈ ಅಂತ್ಯದ ವೇಳೆಗೆ ಪ್ರಕರಣಗಳು ದಿನಕ್ಕೆ 20,000 ಸಾವಿರಕ್ಕೆ ಇಳಿಯುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕೊರೊನಾ ಮೂರನೇ ಅಲೆ 6ರಿಂದ 8 ತಿಂಗಳಲ್ಲಿ ಬರಲಿದೆ. ಮೂರನೇ ಅಲೆ ಎರಡನೇ ಅಲೆಯಷ್ಟು ತೀವ್ರವಾಗುವ ಸಾಧ್ಯತೆ ಕಡಿಮೆ ಇದ್ದು ಮೂರನೇ ಅಲೆ‌ ಬಂದರೂ ಸ್ಥಳೀಯವಾಗಿ ಹರಡಲಿದೆ ಎಂದು ವಿಜ್ಞಾನಿಗಳ ಸಮಿತಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದೆ.

ಇದನ್ನೂ ಓದಿ: ಕೊರೊನಾ 3ನೇ ಅಲೆ ಮುಂಜಾಗ್ರತೆ; 30 ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಕೊವಿಡ್ ಕೇರ್ ಸೆಂಟರ್ ಆರಂಭ: ಶಶಿಕಲಾ ಜೊಲ್ಲೆ

Published On - 10:38 am, Thu, 20 May 21