ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಗ್ರಾಮಕ್ಕೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿದ ರೇಣುಕಾಚಾರ್ಯ

ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಭೇಟಿ ನೀಡಲು ಬಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ನಂತರ ತಾವೇ ಸ್ವತಃ ಸ್ಯಾನಿಟೈಸ್ ಸಿಂಪಡಣೆಗೆ ಮುಂದಾಗಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಗ್ರಾಮಕ್ಕೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿದ ರೇಣುಕಾಚಾರ್ಯ
ರಸ್ತೆಗಳಲ್ಲಿ ನಡೆದುಕೊಂಡೇ ತೆರಳಿ ಸ್ಯಾನಿಟೈಸ್ ಸಿಂಪಡಣೆ
Skanda

|

May 20, 2021 | 10:13 AM

ದಾವಣಗೆರೆ: ಕೊರೊನಾ ಸಂದರ್ಭದಲ್ಲಿ ಹಗಲಿರುಳೆನ್ನದೆ ಜನರ ಸಹಾಯಕ್ಕೆ ಧಾವಿಸುವ ಮೂಲಕ ಭಾರೀ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿರುವ ರೇಣುಕಾಚಾರ್ಯ, ಇದೀಗ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಿರುವ ಗ್ರಾಮವೊಂದಕ್ಕೆ ತೆರಳಿ ಸ್ಯಾಮಿಟೈಸರ್ ಸಿಂಪಡಿಸುವ ಮೂಲಕ ಮತ್ತೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಕಾರಣ ಅಲ್ಲಿಗೆ ತೆರಳಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಇಡೀ ಗ್ರಾಮವನ್ನು ಸ್ಯಾನಿಟೈಸ್ ಮಾಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.

ಸುರಹೊನ್ನೆ ಗ್ರಾಮದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದ್ದು, ಇಡೀ ಗ್ರಾಮವೇ ಹಾಟ್​ಸ್ಪಾಟ್​ ಆದಂತಾಗಿದೆ. 60ಕ್ಕೂ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ನಾಲ್ವರು ಸೋಂಕಿತರು ಸಾವಿಗೀಡಾಗಿದ್ದಾರೆ. ಯಾವುದೇ ಟೆಸ್ಟ ಮಾಡಿಸಿಕೊಳ್ಳದೇ ಇದ್ದ ಹತ್ತಕ್ಕೂ ಹೆಚ್ಚು ಜನರೂ ಕೊನೆಯುಸಿರೆಳೆದಿದ್ದಾರೆ. ಇದು ಸುತ್ತಮುತ್ತಲಿನ ಗ್ರಾಮಸ್ಥರಿಗೂ ಭಯ ಮೂಡಿಸಿದೆ. ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಭೇಟಿ ನೀಡಲು ಬಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ನಂತರ ತಾವೇ ಸ್ವತಃ ಸ್ಯಾನಿಟೈಸ್ ಸಿಂಪಡಣೆಗೆ ಮುಂದಾಗಿದ್ದಾರೆ.

MP RENUKACHARYA

ಗ್ರಾಮವಿಡೀ ಸುತ್ತಾಡಿ ಸ್ಯಾನಿಟೈಸರ್ ಸಿಂಪಡಿಸಿದ ಶಾಸಕ ರೇಣುಕಾಚಾರ್ಯ

ಸದ್ಯ ಪಾಸಿಟಿವ್ ವರದಿ ಬಂದವರನ್ನು ನ್ಯಾಮತಿ ತಾಲೂಕಿನ ಮಾದನಬಾವಿ ಕೊವಿಡ್ ಕೇರ್ ಸೆಂಟರ್​ಗೆ ಕಳುಹಿಸಲಾಗುತ್ತಿದೆ. ಪ್ರಸ್ತುತ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿರುವ ಕಾರಣ, ಗ್ರಾಮಸ್ಥರೆಲ್ಲರಿಗೂ ಮೆಡಿಕಲ್ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಕೊವಿಡ್ ಗುಣ ಲಕ್ಷಣ ಇರುವ ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ

ಇಂದಿನಿಂದ ದಾವಣಗೆರೆ ಜಿಲ್ಲೆಯಲ್ಲಿ ಮೆಡಿಕಲ್ ಕಿಟ್ ವಿತರಣೆ ಇಂದಿನಿಂದ (ಮೇ 20) ದಾವಣಗೆರೆ ಜಿಲ್ಲೆಯ 194 ಗ್ರಾಪಂ‌ಗಳ ವ್ಯಾಪ್ತಿಯಲ್ಲಿ ಮೆಡಿಕಲ್ ಕಿಟ್ ವಿತರಣೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿನ ಗುಣಲಕ್ಷಣ ಇರುವ ಪ್ರತಿಯೊಬ್ಬರಿಗೂ ಕೊರೊನಾ ಟೆಸ್ಟ್ ನಡೆಸಲು ವೈದ್ಯರು, ನರ್ಸ್​ ಹಾಗೂ ಆಶಾ ಕಾರ್ಯಕರ್ತೆಯರು ಇರುವ 194 ತಂಡಗಳನ್ನು ರಚಿಸಿರುವ ಜಿಲ್ಲಾಡಳಿತ ಸೋಂಕು ತಡೆಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈಗ ದಾವಣಗೆರೆ ಜಿಲ್ಲೆಯ ಬರುತ್ತಿರುವ ಪಾಸಿಟಿವ್ ಪ್ರಕರಣಗಳಲ್ಲಿ ಶೇಕಡಾ 60ರಷ್ಟು ಗ್ರಾಮೀಣ ಪ್ರದೇಶದ ಪ್ರಕರಣವಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಜಿಲ್ಲಾಡಳಿತ ಮುಂದಾಗಿದೆ.

MP RENUKACHARYA

ಸ್ಯಾನಿಟೈಸರ್​ ಸಿಂಪಡಿಸಿದ ರೇಣುಕಾಚಾರ್ಯ

ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದವರಿಗೆ ಸಿಹಿ ಹಂಚಿ, ಪುಷ್ಪವೃಷ್ಟಿ ಮಾಡಿದ ಶಾಸಕ ರೇಣುಕಾಚಾರ್ಯ 

ಮತ್ತೆ ಸಮಯಪ್ರಜ್ಞೆ ಮೆರೆದ ರೇಣುಕಾಚಾರ್ಯ; ರಾತ್ರೋರಾತ್ರಿ 25 ಆಕ್ಸಿಜನ್ ಸಿಲಿಂಡರ್​ ತಂದುಕೊಟ್ಟು 45 ಜನರನ್ನು ಉಳಿಸಿದ ಶಾಸಕ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada