ಮತ್ತೆ ಸಮಯಪ್ರಜ್ಞೆ ಮೆರೆದ ರೇಣುಕಾಚಾರ್ಯ; ರಾತ್ರೋರಾತ್ರಿ 25 ಆಕ್ಸಿಜನ್ ಸಿಲಿಂಡರ್​ ತಂದುಕೊಟ್ಟು 45 ಜನರನ್ನು ಉಳಿಸಿದ ಶಾಸಕ

ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ (ಮೇ 18) ಮತ್ತೆ ಆಕ್ಸಿಜನ್ ಅಭಾವ ಉಂಟಾಗಿದೆ. ಕೂಡಲೇ ಎಚ್ಚೆತ್ತ ವೈದ್ಯರು ಮೆಡಿಕಲ್ ಆಕ್ಸಿಜನ್ ಕೊರತೆ ಬಗ್ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಶಾಸಕರು ರಾತ್ರೋರಾತ್ರಿ ಭದ್ರಾವತಿ, ಹರಿಹರದಿಂದ ಮೆಡಿಕಲ್​ ಆಕ್ಸಿಜನ್​ ತರಲು ವ್ಯವಸ್ಥೆ ಮಾಡಿದ್ದಾರೆ.

ಮತ್ತೆ ಸಮಯಪ್ರಜ್ಞೆ ಮೆರೆದ ರೇಣುಕಾಚಾರ್ಯ; ರಾತ್ರೋರಾತ್ರಿ 25 ಆಕ್ಸಿಜನ್ ಸಿಲಿಂಡರ್​ ತಂದುಕೊಟ್ಟು 45 ಜನರನ್ನು ಉಳಿಸಿದ ಶಾಸಕ
ರೇಣುಕಾಚಾರ್ಯ
Follow us
Skanda
|

Updated on: May 19, 2021 | 7:33 AM

ದಾವಣಗೆರೆ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸಿದ ನಂತರ ಅನೇಕ ಸಾವು ನೋವುಗಳು ವೈದ್ಯಕೀಯ ಸೌಲಭ್ಯಗಳ ಕೊರತೆ ಕಾರಣದಿಂದ ಆಗಿವೆ. ಹಲವು ಸೋಂಕಿತರು ಆಕ್ಸಿಜನ್ ಕೊರತೆಯಿಂದಾಗಿ ಪ್ರಾಣಬಿಟ್ಟಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ತಲೆದೋರಿದಾಗ ಅಲ್ಲಿನ ಶಾಸಕ ಎಂ.ಪಿ.ರೇಣುಕಾಚಾರ್ಯ ನಡುರಾತ್ರಿ ಧಾವಿಸಿ ತಮ್ಮದೇ ಕಾರಿನಲ್ಲಿ ಆಕ್ಸಿಜನ್ ಪೂರೈಕೆ ಮಾಡಿದ್ದರು. ಶಾಸಕರ ಈ ಕಾರ್ಯ ಜನ ಸಾಮಾನ್ಯರಿಂದ ಭಾರೀ ಮೆಚ್ಚುಗೆ ಗಳಿಸಿತ್ತು. ಇದೀಗ ಮತ್ತೆ ಎಂ.ಪಿ.ರೇಣುಕಾಚಾರ್ಯ ಅವರ ಸಮಯಪ್ರಜ್ಞೆಯಿಂದ ಸುಮಾರು 45 ಜನರ ಪ್ರಾಣ ಉಳಿದಿದ್ದು, ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ರಾತ್ರೋರಾತ್ರಿ ಒಟ್ಟು 25 ಸಿಲಿಂಡರ್ ವ್ಯವಸ್ಥೆ ಮಾಡುವ ಮೂಲಕ ಜನಮನ ಗೆದ್ದಿದ್ದಾರೆ.

ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ (ಮೇ 18) ಮತ್ತೆ ಆಕ್ಸಿಜನ್ ಅಭಾವ ಉಂಟಾಗಿದೆ. ಕೂಡಲೇ ಎಚ್ಚೆತ್ತ ವೈದ್ಯರು ಮೆಡಿಕಲ್ ಆಕ್ಸಿಜನ್ ಕೊರತೆ ಬಗ್ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಶಾಸಕರು ರಾತ್ರೋರಾತ್ರಿ ಭದ್ರಾವತಿ, ಹರಿಹರದಿಂದ ಮೆಡಿಕಲ್​ ಆಕ್ಸಿಜನ್​ ತರಲು ವ್ಯವಸ್ಥೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 45 ಜನ ಆಕ್ಸಿಜನ್​ ಬೆಡ್​ನಲ್ಲಿದ್ದ ಕಾರಣ ತುಸು ಹೆಚ್ಚೇ ಪ್ರಮಾಣದ ಆಕ್ಸಿಜನ್​ ಬೇಕಾಗಿದ್ದು, ಅದಕ್ಕಾಗಿ ಮಾಹಿತಿ ಕಲೆಹಾಕಿದ್ದಾರೆ.

ನಂತರ ಶಿವಮೊಗ್ಗ ಜಿಲ್ಲೆ ಭದ್ರಾವತಿಯಿಂದ 20 ಆಕ್ಸಿಜನ್ ಸಿಲಿಂಡರ್ ಹಾಗೂ ದಾವಣಗೆರೆ ಜಿಲ್ಲೆ ಹರಿಹರದಿಂದ 5 ಸಿಲಿಂಡರ್ ವ್ಯವಸ್ಥೆ ಮಾಡಿದ್ದಾರೆ. ಆ ಮೂಲಕ ಒಟ್ಟು 25 ಆಕ್ಸಿಜನ್ ಸಿಲಿಂಡರ್ ಹೊನ್ನಾಳಿ ಆಸ್ಪತ್ರೆಗೆ ಬಂದು ತಲುಪಿದ್ದು, ಶಾಸಕರು ತುರ್ತಾಗಿ ಸ್ಪಂದಿಸಿದ ಕಾರಣ 45 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದುವೇಳೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೇ ಇದ್ದರೆ ಭಾರೀ ಅನಾಹುತ ಆಗುತ್ತಿತ್ತಾದ್ದರಿಂದ ಶಾಸಕರ ಕಾರ್ಯ ವೈಖರಿಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಇದೇ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆ ಎದುರಾದಾಗ ಆಕ್ಸಿಜನ್​ ವ್ಯವಸ್ಥೆ ಮಾಡಲು ಸಿಬ್ಬಂದಿಯ ಜತೆಗೆ ಸ್ವತಃ ಶಾಸಕರೇ ಹರಿಹರಕ್ಕೆ ತೆರಳಿ, ರಾತ್ರಿ 2 ಗಂಟೆ ಸುಮಾರಿಗೆ ತಮ್ಮ ವಾಹನದಲ್ಲೇ ಆಕ್ಸಿಜನ್ ಸಿಲಿಂಡರ್ ತಂದುಕೊಟ್ಟಿದ್ದರು. ಆ ಮೂಲಕ ಆಕ್ಸಿಜನ್​ ಬೆಡ್​ನಲ್ಲಿದ್ದ ಸುಮಾರು 20 ಜನರ ಜೀವವನ್ನು ಅಪಾಯದಿಂದ ಪಾರು ಮಾಡಿದ್ದರು. ಆಗಲೂ ಶಾಸಕರ ಸಮಯ ಪ್ರಜ್ಞೆಗೆ ಹಾಗೂ ತಾವೇ ಮುಂದೆ ನಿಂತು ತಮ್ಮ ವಾಹನದಲ್ಲೇ ಆಕ್ಸಿಜನ್ ಪೂರೈಕೆ ಮಾಡಿದ್ದಕ್ಕೆ ಜನರು ಭೇಷ್​ ಎಂದಿದ್ದರು.

(Honnali MLA MP Renukacharya provides 25 medical oxygen cylinders at midnight and saved 45 lives)

ಇದನ್ನೂ ಓದಿ: ಕೊರೊನಾ ಸೋಂಕಿತರಿಗಾಗಿ ಸ್ವತಃ ಇಡ್ಲಿ ತಯಾರಿಸಿದ ಎಂ.ಪಿ ರೇಣುಕಾಚಾರ್ಯ 

ತಾವೇ ಖುದ್ದಾಗಿ ತೆರಳಿ, ರಾತ್ರಿ 2 ಗಂಟೆಗೆ ಆಕ್ಸಿಜನ್​ ತಂದುಕೊಟ್ಟ ರೇಣುಕಾಚಾರ್ಯ; 20 ರೋಗಿಗಳು ಅಪಾಯದಿಂದ ಪಾರು

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ