ಕೊರೊನಾ ಸೋಂಕಿತರಿಗಾಗಿ ಸ್ವತಃ ಇಡ್ಲಿ ತಯಾರಿಸಿದ ಎಂ.ಪಿ ರೇಣುಕಾಚಾರ್ಯ

ಕೊರೊನಾ ಸೋಂಕಿತರಿಗೆ ಬೆಳಿಗ್ಗೆಯ ಉಪಹಾರಕ್ಕೆ ಇಡ್ಲಿ ವ್ಯವಸ್ಥೆ ಮಾಡಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಸೋಂಕಿತರಿಗಾಗಿ ಸ್ವತಃ ಇಡ್ಲಿ ತಯಾರಿಸಿದ ಎಂ.ಪಿ ರೇಣುಕಾಚಾರ್ಯ
ಶಾಸಕ ರೇಣುಕಾಚಾರ್ಯ
Follow us
shruti hegde
|

Updated on: May 16, 2021 | 10:38 AM

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ​ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಎಲ್ಲಾ ರೋಗಿಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬೆಳ್ಳಂಬೆಳಿಗ್ಗೆಯೇ ತಮ್ಮ ಸ್ವಗೃಹದ ಮುಂದೆ ಸೋಂಕಿತರಿಗಾಗಿ ಇಡ್ಲಿ ತಯಾರಿಸಿ ಉಪಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರೇಣುಕಾಚಾರ್ಯ ದಂಪತಿ ಜಿಲ್ಲೆಯ ಹೊನ್ನಾಳಿ‌ ಪಟ್ಟಣದ ತಮ್ಮ ಸ್ವಗೃಹದ ಮುಂದೆ ಇಡ್ಲಿ‌ ತಯಾರಿಸಿದ್ದಾರೆ. ಪ್ರತಿನಿತ್ಯವೂ ಕೂಡಾ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರಿಗೆ ಮತ್ತು ಲಸಿಕೆ ಪಡೆಯುವವರಿಗೆ ಜೊತೆಗೆ ಸೋಂಕಿತರ ಸಿಬ್ಬಂದಿಗೆ ಉಪಹಾರ ನೀಡುತ್ತಿದ್ದರು. ಇಂದು ಬೆಳಿಗ್ಗಿನ ಉಪಹಾರಕ್ಕೆ ಇಡ್ಲಿ ಜೊತೆಗೆ ಚಟ್ನಿ, ಸಂಬಾರ್​ ತಯಾರಿಸಿದ್ದಾರೆ.

ಬಸವ ಜಯಂತಿ ಪ್ರಯುಕ್ತ ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಹಾಕಿಸಿದ ಎಂ.ಪಿ.ರೇಣುಕಾಚಾರ್ಯ ಬಸವ ಜಯಂತಿ ಪ್ರಯುಕ್ತ ಕೊರೊನಾ ಸೋಂಕಿತರಿಗೆ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೋಳಿಗೆ ಊಟ ಹಾಕಿಸಿದ್ದರು. ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ಕೊವಿಡ್​ ಕೇರ್​ ಸೆಂಟರ್​ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ ನೀಡಿದ್ದರು. ಇದೇ ಸ್ಥಳದಲ್ಲಿ ಶಾಸಕ ರೇಣುಕಾಚಾರ್ಯ ಸಹ ಊಟ ಮಾಡಿದ್ದರು.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮಾದನಬಾವಿ ಗ್ರಾಮದ ಕೊವಿಡ್ ಕೇರ್​ ಸೆಂಟರ್​​ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾದನಬಾವಿ ಸಿಸಿಸಿಯಲ್ಲಿ 120ಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಅವರಿಗೆ ರೇಣುಕಾಚಾರ್ಯ ವತಿಯಿಂದ ಹೋಳಿಗೆ ಊಟ ವ್ಯವಸ್ಥೆ ಮಾಡಲಾಗಿತ್ತು.

ಇದಕ್ಕೂ ಮೊದಲು ಇಂದು ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಬಿಜೆಪಿ ಶಾಸಕ ಎಂ.ಪಿ‌. ರೇಣುಕಾಚಾರ್ಯ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಬದಲು ಎತ್ತುಗಳಿಗೆ ಪೂಜೆ ಮಾಡಿ ಸುದ್ದಿಯಾಗಿದ್ದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಎತ್ತುಗಳಿಗೆ ಪೂಜೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಿದ್ದರು. ಶಾಸಕ ಎಂ.ಪಿ.ರೇಣುಕಾಚಾರ್ಯ ಎತ್ತುಗಳ ಪೂಜೆ ನಡೆಸುವಾಗ ಅವರ ಪತ್ನಿ ಸುಮಾ ಸಹ ಭಾಗಿಯಾಗಿದ್ದರು.

ಇದನ್ನೂ ಓದಿ: ಬಸವ ಜಯಂತಿ ಪ್ರಯುಕ್ತ ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಹಾಕಿಸಿದ ಎಂ.ಪಿ.ರೇಣುಕಾಚಾರ್ಯ

(Renukacharya prepared Idli for corona patients in davangere)