AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿನ ಭಯಕ್ಕೆ ವೃದ್ಧೆ ಆತ್ಮಹತ್ಯೆ, ತುಮಕೂರಿನಲ್ಲಿ ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡಿ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಮುಸ್ಲಿಂ ಯುವಕರು

ಅನಾರೋಗ್ಯದ ನಿಮಿತ್ತ ಕ್ಲಿನಿಕ್‌ಗೆ ಹೋಗಿದ್ದ ಮಹದೇವಮ್ಮ ಮತ್ತೆ ಕ್ಲಿನಿಕ್‌ಗೆ ಬರುವಾಗ ಕೊವಿಡ್ ವರದಿ ತರುವಂತೆ ವೈದ್ಯರು ಹೇಳಿದ್ರು. ಇದರಿಂದ ತನಗೆ ಕೊರೊನಾ ಬಂದಿರಬಹುದೆಂಬ ಭಯದಿಂದ ಸೀಮೆಎಣ್ಣೆ ಸುರಿದುಕೊಂಡು ಮಹದೇವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಂಕಿನ ಭಯಕ್ಕೆ ವೃದ್ಧೆ ಆತ್ಮಹತ್ಯೆ, ತುಮಕೂರಿನಲ್ಲಿ ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡಿ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಮುಸ್ಲಿಂ ಯುವಕರು
ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಮುಸ್ಲಿಂ ಯುವಕರು
ಆಯೇಷಾ ಬಾನು
|

Updated on: May 16, 2021 | 10:00 AM

Share

ಮೈಸೂರು: ಕೊರೊನಾ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ವೃದ್ಧೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಮುನೇಶ್ವರ ನಗರದಲ್ಲಿ ನಡೆದಿದೆ. ಮಹದೇವಮ್ಮ(75) ಆತ್ಮಹತ್ಯೆ ಮಾಡಿಕೊಂಡ ವೃದ್ಧೆ. ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನಾರೋಗ್ಯದ ನಿಮಿತ್ತ ಕ್ಲಿನಿಕ್‌ಗೆ ಹೋಗಿದ್ದ ಮಹದೇವಮ್ಮ ಮತ್ತೆ ಕ್ಲಿನಿಕ್‌ಗೆ ಬರುವಾಗ ಕೊವಿಡ್ ವರದಿ ತರುವಂತೆ ವೈದ್ಯರು ಹೇಳಿದ್ರು. ಇದರಿಂದ ತನಗೆ ಕೊರೊನಾ ಬಂದಿರಬಹುದೆಂಬ ಭಯದಿಂದ ಸೀಮೆಎಣ್ಣೆ ಸುರಿದುಕೊಂಡು ಮಹದೇವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಂಕಿತ ಶವಗಳ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು ಇನ್ನು ಮತ್ತೊಂದು ಕಡೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಟಿ.ಹೊಸಹಳ್ಳಿ ಗ್ರಾಮದಲ್ಲಿ ಕೊರೊನಾ ಸೋಂಕಿನಿಂದ ಬಲಿಯಾದ 32 ವರ್ಷದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಯುವಕರು ಮಣ್ಣು ಮಾಡಿದ್ದಾರೆ.

ತೀವ್ರ ಜ್ವರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ವೇಳೆ ಮುಸ್ಲಿಂ ಕೊರೊನಾ ವಾರಿಯರ್ಸ್‌ ತಂಡ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಮುಸ್ಲಿಂ ಯುವಕರ ತಂಡ ಇದುವರೆಗೂ ಸುಮಾರು 15 ಕ್ಕೂ ಹೆಚ್ಚು ಕೊರೊನಾಗೆ ಬಲಿಯಾದವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆಯಾ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿಕೊಡುತ್ತಾರೆ. ಈ ಯುವಕರು ಸೋಂಕಿತ ಶವಗಳ ಅಂತ್ಯಸಂಸ್ಕಾರ ಮಾಡಿ ಭಾವೈಕ್ಯತೆಯ ಪ್ರತೀಕದ ಸಂದೇಶ ಸಾರಿದ್ದಾರೆ.

ಇದನ್ನೂ ಓದಿ: ‘ಗಂಡನ ಪ್ರಾಣ ಉಳಿಸಿದ್ರು ಸುದೀಪಣ್ಣ’; ಕಣ್ಣೀರು ಹಾಕುತ್ತ ಕಿಚ್ಚನಿಗೆ ಧನ್ಯವಾದ ತಿಳಿಸಿದ ಅಭಿಮಾನಿ ಸೌಮ್ಯ