ಮಂಗಳೂರು ದೋಣಿ ದುರಂತ ಪ್ರಕರಣ; ಈಜಿ ದಡ ಸೇರಿದ ಮತ್ತೊಬ್ಬ ಯುವಕ

ಚಂಡಮಾರುತದ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದ ದೋಣಿ ನಿನ್ನೆ ಮುಳುಗಡೆಯಾಗಿತ್ತು. ಈ ಅಲಾಯನ್ಸ್ ಎಂಬ ಹೆಸರಿನ ವಿಗ್ಗ್ ಬೋಟ್​​​ ಎಂಆರ್​ಪಿಎಲ್​ ಕಚ್ಚಾತೈಲ ಹಡಗಿನ ಪೈಪ್​ಲೈನ್​ ನಿರ್ವಹಣೆ ಮಾಡುತ್ತಿದ್ದ ದೋಣಿಯಾಗಿತ್ತು. ಒಟ್ಟು 9 ಜನರು ಸಮುದ್ರಕ್ಕೆ ಇಳಿದಿದ್ದರು.

ಮಂಗಳೂರು ದೋಣಿ ದುರಂತ ಪ್ರಕರಣ; ಈಜಿ ದಡ ಸೇರಿದ ಮತ್ತೊಬ್ಬ ಯುವಕ
ಈಜಿ ದಡ ಸೇರಿದ ನಸೀಮ್
Follow us
sandhya thejappa
|

Updated on:May 16, 2021 | 12:00 PM

ಉಡುಪಿ: ಮಂಗಳೂರು ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿ ಸಮುದ್ರದಲ್ಲಿ ಈಜಿ ಮತ್ತೊಬ್ಬ ಯುವಕ ದಡ ಸೇರಿದ್ದಾನೆ. ಹರಿಯಾಣ ಮೂಲದ ನಸೀಮ್ ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ಬಂದಿದ್ದಾನೆ. ಮಂಗಳೂರಿನ ಎಂಆರ್​ಪಿಎಲ್​ ಕಂಪನಿಯ ನೌಕರ ಟ್ಯೂಬ್ ಸಹಾಯದಿಂದ ಸತತವಾಗಿ ಈಜಿ ದಡ ಸೇರಿದ್ದಾನೆ. ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭದಲ್ಲಿ ನಸೀಮ್ ನೀರುಪಾಲಾಗಿದ್ದ. ಈತನ ಜೊತೆಗೆ ನೀರುಪಾಲಾಗಿದ್ದ ಇನ್ನಿಬ್ಬರು ಮಟ್ಟು ಕೊಪ್ಪ ಬಳಿ ದಡ ಸೇರಿದ್ದರು. ಈಗ ನಸೀಮ್ ಕೂಡಾ ಅಪಾಯದಿಂದ ಪಾರಾಗಿದ್ದು, ಮಲ್ಪೆ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಂಡಮಾರುತದ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದ ದೋಣಿ ನಿನ್ನೆ ಮುಳುಗಡೆಯಾಗಿತ್ತು. ಈ ಅಲಾಯನ್ಸ್ ಎಂಬ ಹೆಸರಿನ ವಿಗ್ಗ್ ಬೋಟ್​​​ ಎಂಆರ್​ಪಿಎಲ್​ ಕಚ್ಚಾತೈಲ ಹಡಗಿನ ಪೈಪ್​ಲೈನ್​ ನಿರ್ವಹಣೆ ಮಾಡುತ್ತಿದ್ದ ದೋಣಿಯಾಗಿತ್ತು. ಒಟ್ಟು 9 ಜನರು ಸಮುದ್ರಕ್ಕೆ ಇಳಿದಿದ್ದರು.  7 ಮಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ ಇಬ್ಬರು ಮೊಮಿರುಲ್ ಮುಲ್ಲಾ( 34), ಕರೀಮುಲ್ಲಾ ಶೇಕ್ (24) ಎಂಬುವರು ಟ್ಯೂಬ್​ನಲ್ಲಿ ಈಜಿಕೊಂಡು ಬಂದು ಜೀವ ಉಳಿಸಿಕೊಂಡಿದ್ದು, ಇಂದು ಮತ್ತೊಬ್ಬ ಯುವಕ ನಸೀಮ್ ಈಜಿ ದಡ ಸೇರಿದ್ದಾನೆ .

8 ಗಂಟೆ ಕಾಲ ಟ್ಯೂಬ್ ಬಳಸಿ ಈಜಿ ದಡ ಸೇರಿದ ಇಬ್ಬರು ಮಂಗಳೂರು ಎಂಆರ್​ಪಿಎಲ್​ನ ಎರಡು ಟಗ್ ಮುಳುಗಡೆ ಪ್ರಕರಣದಲ್ಲಿ ಈಜಿ ದಡ ಸೇರಿದ್ದ ಇಬ್ಬರು ನೌಕರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಡುಪಿ ಹೊರವಲಯದ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೊಮಿರುಲ್ ಮುಲ್ಲಾ (34) ಹಾಗೂ ಕರೀಮುಲ್ಲಾ ಶೇಖ್ (24) ಸತತ 8 ಗಂಟೆ ಕಾಲ ಟ್ಯೂಬ್ ಬಳಸಿ ಈಜಿ ದಡ ಸೇರಿದ್ದರು. ಉಡುಪಿ ಜಿಲ್ಲೆಯ ಮಟ್ಟು ಕೊಪ್ಲ ಬಳಿ ದಡ ಸೇರಿದ್ದರು. ಸ್ಥಳೀಯರು ಅವರ ರಕ್ಷಣೆ ಮಾಡಿದ್ದರು. ಸುರತ್ಕಲ್​ನ 17 ನಾಟಿಕಲ್ ದೂರದಲ್ಲಿ ದುರಂತ ನಡೆದಿತ್ತು. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತದೇಹಗಳು ಪತ್ತೆ ಟಗ್ ಬೋಟ್ ದುರಂತದಲ್ಲಿ ಮೂರು ಮೃತದೇಹಗಳು ಪತ್ತೆಯಾಗಿದ್ದು, ಅದರಲ್ಲಿ ಒಂದು ಶವ ಮಾತ್ರ ಬೋಟ್​ನಲ್ಲಿದ್ದವರದ್ದು ಎನ್ನಲಾಗಿದೆ. ಉಡುಪಿ-ಮಂಗಳೂರು ಗಡಿಭಾಗದಲ್ಲಿ ಸಿಕ್ಕಿದ್ದ ಮೃತದೇಹಗಳಲ್ಲಿ ಎರಡು ಮೃತದೇಹಗಳು ಬೇರೆಯದ್ದು ಎಂದು ತಿಳಿದುಬಂದಿದೆ. 8 ಜನರ ಪೈಕಿ ಓರ್ವ ಸಾವನ್ನಪ್ಪಿದ್ದು, ಮೂವರು ಬಚಾವ್ ಆಗಿದ್ದಾರೆ. ನಾಪತ್ತೆಯಾದ ಇನ್ನುಳಿದ 4 ಜನರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ

ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ; ನಾಳೆ ಮುಂಜಾನೆವರೆಗೆ ಸಮುದ್ರದಲ್ಲೇ ಇರುವ ಅನಿವಾರ್ಯತೆ

ರೋಗಿಗೆ ಹಾಕಿದ್ದ ಗ್ಲೂಕೋಸ್ ಮುಗಿದಿದ್ದರೂ ಡ್ರಿಪ್ಸ್ ತೆಗೆಯದೆ ರಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ; ಸಂಬಂಧಿಕರ ಆಕ್ರೋಶ

young man who had fallen into the water in a boat disaster has come out of water at udupi

Published On - 11:04 am, Sun, 16 May 21

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ