ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ; ನಾಳೆ ಮುಂಜಾನೆವರೆಗೆ ಸಮುದ್ರದಲ್ಲೇ ಇರುವ ಅನಿವಾರ್ಯತೆ

ಜೋರಾಗಿ ಸುರಿಯುತ್ತಿರುವ ಗಾಳಿ, ಮಳೆಯ ಕಾರಣದಿಂದ ಕೋಸ್ಟ್ ಗಾರ್ಡ್ಸ್​ಗೆ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯವರೆಗೂ ಲಂಗರು ಹಾಕಿದ ಸ್ಥಳದಲ್ಲೇ ಇರುವಂತೆ ಟಗ್​ನಲ್ಲಿ ಇದ್ದವರಿಗೆ ಸೂಚನೆ ಕೊಡಲಾಗಿದೆ.

ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ; ನಾಳೆ ಮುಂಜಾನೆವರೆಗೆ ಸಮುದ್ರದಲ್ಲೇ ಇರುವ ಅನಿವಾರ್ಯತೆ
ತೌಕ್ತೆ ಚಂಡಮಾರುತ
TV9kannada Web Team

| Edited By: ganapathi bhat

Aug 23, 2021 | 12:30 PM

ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ನಾಪತ್ತೆಯಾಗಿದ್ದ ಎಮ್​ಆರ್​ಪಿಎಲ್​ನ ಒಂದು ಟಗ್ ಪತ್ತೆಯಾಗಿದೆ. ಆದರೆ ದುರಾದೃಷ್ಟವಷಾತ್ ಟಗ್ ಪತ್ತೆಯಾದರೂ ಭಾರೀ ಗಾಳಿ, ಮಳೆಯ ಕಾರಣದಿಂದ ಅದರ ರಕ್ಷಣಾ ಕಾರ್ಯ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪತ್ತೆಯಾಗಿರುವ ಟಗ್ ಮತ್ತು 9 ಮಂದಿ ನೌಕರರನ್ನು ನಾಳೆ ಮುಂಜಾನೆ 5.30 ಸುಮಾರಿಗೆ ರಕ್ಷಣೆ ಮಾಡಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೂ ಲಂಗರು ಹಾಕಿದ ಸ್ಥಳದಲ್ಲಿ ನಿಲ್ಲುವಂತೆ 9 ಜನರಿಗೆ ಸೂಚನೆ ನೀಡಲಾಗಿದೆ.

ಜೋರಾಗಿ ಸುರಿಯುತ್ತಿರುವ ಗಾಳಿ, ಮಳೆಯ ಕಾರಣದಿಂದ ಕೋಸ್ಟ್ ಗಾರ್ಡ್ಸ್​ಗೆ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯವರೆಗೂ ಲಂಗರು ಹಾಕಿದ ಸ್ಥಳದಲ್ಲೇ ಇರುವಂತೆ ಟಗ್​ನಲ್ಲಿ ಇದ್ದವರಿಗೆ ಸೂಚನೆ ಕೊಡಲಾಗಿದೆ. ಟಗ್​ನಲ್ಲಿ ಇರುವ 9 ಮಂದಿ ನೌಕರರು ಪ್ರಾಣ ಕೈಯಲ್ಲಿ ಹಿಡಿದು ನಿಂತಿದ್ದಾರೆ. ಎಲ್ಲರಿಗೂ ಚಂಡಮಾರುತದ ಮಧ್ಯೆ ಸಮುದ್ರದಲ್ಲಿ ಇರುವ ಪರಿಸ್ಥಿತಿ ಎದುರಾಗಿದೆ. ಸುರತ್ಕಲ್​ನ 17 ನಾಟಿಕಲ್ ದೂರದಲ್ಲಿ ದುರಂತ ನಡೆದಿತ್ತು. ಇದೀಗ ರಾತ್ರಿ ಪೂರ್ತಿ ಸಮುದ್ರದ ನಡುವೆ ಕಳೆಯುವ ಅನಿವಾರ್ಯತೆ ಎದುರಾಗಿದೆ.

ಈಜಿ ದಡ ಸೇರಿದ್ದ ಇಬ್ಬರಿಗೆ ಚಿಕಿತ್ಸೆ ಮಂಗಳೂರು ಎಮ್​ಆರ್​ಪಿಎಲ್​ನ ಎರಡು ಟಗ್ ಮುಳುಗಡೆ ಪ್ರಕರಣದಲ್ಲಿ ಈಜಿ ದಡ ಸೇರಿದ್ದ ಇಬ್ಬರು ನೌಕರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಡುಪಿ ಹೊರವಲಯದ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೊಮಿರುಲ್ ಮುಲ್ಲಾ (34) ಹಾಗೂ ಕರೀಮುಲ್ಲಾ ಶೇಖ್ (24) ಸತತ 8 ಗಂಟೆ ಕಾಲ ಟ್ಯೂಬ್ ಬಳಸಿ ಈಜಿ ದಡ ಸೇರಿದ್ದರು. ಉಡುಪಿ ಜಿಲ್ಲೆಯ ಮಟ್ಟು ಕೊಪ್ಲ ಬಳಿ ದಡ ಸೇರಿದ್ದರು. ಸ್ಥಳೀಯರು ಅವರ ರಕ್ಷಣೆ ಮಾಡಿದ್ದರು. ಸುರತ್ಕಲ್​ನ 17 ನಾಟಿಕಲ್ ದೂರದಲ್ಲಿ ದುರಂತ ನಡೆದಿತ್ತು. ಇದೀಗ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Cyclone Tauktae Photos: ತೌಕ್ತೆ ಚಂಡಮಾರುತದ ಪ್ರತಾಪ; ಇಲ್ಲಿದೆ ಚಂಡಮಾರುತದ ಇಂದಿನ ಚಿತ್ರಣ

ತೌಕ್ತೆ ಚಂಡಮಾರುತ: ಮಗುಚಿದ ದೋಣಿಯಲ್ಲಿದ್ದ ಏಳು ಮಂದಿ ನಾಪತ್ತೆ; ನಾಳೆ ಬೆಳಗ್ಗೆವರೆಗೂ ಉಡುಪಿಯಲ್ಲಿ ರೆಡ್​ ಅಲರ್ಟ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada