ತೌಕ್ತೆ ಚಂಡಮಾರುತ: ಮಗುಚಿದ ದೋಣಿಯಲ್ಲಿದ್ದ ಏಳು ಮಂದಿ ನಾಪತ್ತೆ; ನಾಳೆ ಬೆಳಗ್ಗೆವರೆಗೂ ಉಡುಪಿಯಲ್ಲಿ ರೆಡ್​ ಅಲರ್ಟ್​

Cyclone Tauktae In Karnataka: ಚಂಡಮಾರುತದ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದ ದೋಣಿ ಮುಳುಗಡೆಯಾಗಿದೆ. ಈ ಅಲಾಯನ್ಸ್ ಎಂಬ ಹೆಸರಿನ ವಿಗ್ಗ್ ಬೋಟ್​​​ ಎಂಆರ್​ಪಿಎಲ್​ ಕಚ್ಚಾತೈಲ ಹಡಗಿನ ಪೈಪ್​ಲೈನ್​ ನಿರ್ವಹಣೆ ಮಾಡುತ್ತಿದ್ದ ದೋಣಿಯಾಗಿತ್ತು.

ತೌಕ್ತೆ ಚಂಡಮಾರುತ: ಮಗುಚಿದ ದೋಣಿಯಲ್ಲಿದ್ದ ಏಳು ಮಂದಿ ನಾಪತ್ತೆ; ನಾಳೆ ಬೆಳಗ್ಗೆವರೆಗೂ ಉಡುಪಿಯಲ್ಲಿ ರೆಡ್​ ಅಲರ್ಟ್​
ಉಡುಪಿಯಲ್ಲಿ ಅತಿಯಾದ ಗಾಳಿ-ಮಳೆ
Follow us
Lakshmi Hegde
|

Updated on:May 15, 2021 | 8:12 PM

ಉಡುಪಿ: ಈ ವರ್ಷದ ಮೊದಲ ಚಂಡಮಾರುತ ತೌಕ್ತೆಯ ಪ್ರಭಾವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಮೋಡಕವಿವ ವಾತಾವರಣ ಇದ್ದು, ಮಧ್ಯಾಹ್ನದಿಂದಲೇ ಮಳೆ ಶುರುವಾಗಿದೆ.

ಉಡುಪಿಯಲ್ಲಿ ನಾಳೆ ಬೆಳಗ್ಗೆವರೆಗೆ ರೆಡ್​ ಅಲರ್ಟ್​ ಇದ್ದು, ಮುಂದಿನ ಎರಡು ದಿನಗಳು ಅಂದರೆ ಮೇ 17ರವರೆಗೆ ಆರೆಂಜ್​ ಅಲರ್ಟ್ ಜಾರಿಯಲ್ಲಿರಲಿದೆ. ಇನ್ನೆರಡು ದಿನವೂ 65-115 ಮಿಮೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ತೆರಳದಂತೆ ಉಡುಪಿ ಜಿಲ್ಲಾಡಳಿತ ಖಡಕ್​ ಸೂಚನೆ ನೀಡಿದೆ. ಸಮುದ್ರ, ನದಿ ತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಗುಚಿದ ದೋಣಿ.. ಚಂಡಮಾರುತದ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದ ದೋಣಿ ಮುಳುಗಡೆಯಾಗಿದೆ. ಈ ಅಲಾಯನ್ಸ್ ಎಂಬ ಹೆಸರಿನ ವಿಗ್ಗ್ ಬೋಟ್​​​ ಎಂಆರ್​ಪಿಎಲ್​ ಕಚ್ಚಾತೈಲ ಹಡಗಿನ ಪೈಪ್​ಲೈನ್​ ನಿರ್ವಹಣೆ ಮಾಡುತ್ತಿದ್ದ ದೋಣಿಯಾಗಿತ್ತು. ಒಟ್ಟು 9 ಜನರು ಸಮುದ್ರಕ್ಕೆ ಇಳಿದಿದ್ದರು. ಇದೀಗ 7ಮಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ ಇಬ್ಬರು ಮೊಮಿರುಲ್ ಮುಲ್ಲಾ( 34), ಕರೀಮುಲ್ಲಾ ಶೇಕ್ (24) ಎಂಬುವರು ಟ್ಯೂಬ್​ನಲ್ಲಿ ಈಜಿಕೊಂಡು ಬಂದು ಜೀವ ಉಳಿಸಿಕೊಂಡಿದ್ದಾರೆ. ಇಬ್ಬರೂ ಉಡುಪಿಯ ಮಟ್ಟುಕೊಪ್ಲ ಎಂಬಲ್ಲಿ ದಡ ಸೇರಿದ್ದಾರೆ. ಇನ್ನುಳಿದ ಏಳು ಮಂದಿಗಾಗಿ ಸಮುದ್ರದಲ್ಲಿ ಕೋಸ್ಟಲ್​ ಗಾರ್ಡ್​ ಹುಡುಕಾಟ ನಡೆಸಿದೆ.

ಇಂದು ಮೊದಲ ಬಲಿ ಹಾಗೇ ಚಂಡಮಾರುತ ತಂದ ಮಳೆಯ ಅಬ್ಬರದ ಮಧ್ಯೆ ರೈತನೊಬ್ಬ ಇಂದು ಮೃತಪಟ್ಟಿದ್ದಾನೆ. ವಿದ್ಯುತ್​ ತಂತಿ ಸ್ಪರ್ಶಿಸಿದ ಕಾಪು ತಾಲೂಕಿನ ರೈತ ರಮೇಶ್ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ತೌಕ್ತೆ ಚಂಡಮಾರುತದ ಪ್ರಭಾವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ

Cyclone Tauktae: ತೌಕ್ತೆ ಚಂಡಮಾರುತ ಪರಿಣಾಮ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ

Tauktae cyclone Effect Red alert in Udupi till Tomorrow Morning

Published On - 8:06 pm, Sat, 15 May 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ