AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರಿಸಿದ ವರ; ಯಾವ ಸಿನಿಮಾಗೂ ಕಮ್ಮಿ ಇಲ್ಲಈ ಕಥೆ

ಮದುವೆಯಾದ ಫೋಟೋ ಹಾಗೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಈ ಮದುವೆ ನೋಡಿದ ಬಗ್ಗೆ ಸಾಕಷ್ಟು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೋಲಾರದಲ್ಲಿ ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರಿಸಿದ ವರ; ಯಾವ ಸಿನಿಮಾಗೂ ಕಮ್ಮಿ ಇಲ್ಲಈ ಕಥೆ
ಕೋಲಾರದಲ್ಲಿ ಅಕ್ಕ ತಂಗಿಯನ್ನು ಮದುವೆಯಾದ ಯುವಕ
ರಾಜೇಶ್ ದುಗ್ಗುಮನೆ
|

Updated on:May 16, 2021 | 7:54 PM

Share

ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ ಆಗುವ ದೃಶ್ಯಗಳು ಸಿನಿಮಾದಲ್ಲಿ ಬರುತ್ತವೆ. ಸಿನಿಮಾದಲ್ಲಿ ಇಂಥ ಸನ್ನಿವೇಶಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲವೂ ತಂತಾನೆ ಸೃಷ್ಟಿಯಾಗಿ ಅಪರೂಪದ‌ ಮದುವೆಯೊಂದು‌ ನಡೆದು ಹೋಗಿದೆ. ಈ ಮದುವೆ ನಡೆದಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ. ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅವರಿಗೆ ಮದುವೆಯಾಗದೆ ತಂಗಿ ಲಲಿತಾಗೆ ಮದುವೆಯಾಗೋದಿಲ್ಲ. ಅಕ್ಕನಿಗೆ ಎಲ್ಲಿ  ಮದುವೆಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುಯಾಗಬೇಕೆಂದರೆ ತಮ್ಮ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು. ಅದಕ್ಕೆ ಒಪ್ಪಿದ ಅವರು ಮೇ 7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ‌ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ, ಮದುವೆಯಾದ ಫೋಟೋ ಹಾಗೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಈ ಮದುವೆ ನೋಡಿದ ಬಗ್ಗೆ ಸಾಕಷ್ಟು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಂಶ ಪಾರಂಪರ್ಯವಾಗಿ ಮುಂದುವರೆದ ಎರಡು ಮದುವೆ

ಸುಪ್ರಿಯಾ ಹಾಗೂ ಲಲಿತಾ ಕುಟುಂಬದಲ್ಲಿ ಈ ರೀತಿ ಮದುವೆ ನಡೆದಿದ್ದು ಇದೇ ಮೊದಲಲ್ಲ. ಇವರ ತಂದೆ ಕೂಡಾ ಇದೆ ರೀತಿಯಲ್ಲಿ ಅಕ್ಕ ತಂಗಿಯರನ್ನು ಮದುವೆ ಮಾಡಿಕೊಂಡಿದ್ದರು. ಅಲ್ಲೂ ಒಬ್ಬರಿಗೆ‌ ಮಾತು ಬರುತ್ತಿರಲಿಲ್ಲ ಅನ್ನೋದು ವಿಶೇಷ. ರಾಣೆಮ್ಮ ಹಾಗೂ ಸುಬ್ಬಮ್ಮ ಎಂಬುವರನ್ನು ಇವರ ಸೋದರ ಸಂಬಂಧಿ ನಾಗರಾಜಪ್ಪ ಎಂಬುವರು ಮದುವೆಯಾಗಿದ್ದರು. ಈಗ ಅದೇ ರೀತಿಯಲ್ಲಿ ಮತ್ತೊಂದು ಮದುವೆ ಆಗಿದೆ.

ಇದನ್ನೂ ಓದಿ:ಅರವಿಂದ್​​-ದಿವ್ಯಾ ಉರುಡುಗ ಮದುವೆ ಆಗ್ತಾರಾ? ಚಂದನ್​-ನಿವೇದಿತಾ ಥರ ಇನ್ನೊಂದು ಜೋಡಿ! 

ಚಂದನ್ ಕುಮಾರ್ – ನಟಿ ಕವಿತಾ ಗೌಡ ಸಿಂಪಲ್ ಮದುವೆಯ ಫೋಟೋಗಳು ವೈರಲ್

Published On - 6:47 pm, Sat, 15 May 21