Cyclone Tauktae ಮೇ 18ರಂದು ಗುಜರಾತ್ ಕರಾವಳಿ ದಾಟಲಿದೆ ತೌಕ್ತೆ ಚಂಡಮಾರುತ

ಗುಜರಾತ್‌ನ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಐಎಂಡಿ ಪ್ರಕಾರ ಜುನಾಘಡ್ ಮತ್ತು ಗಿರ್ ಸೋಮನಾಥ್‌ನಲ್ಲಿ ಹೆಚ್ಚು ಮಳೆಯಾಗಲಿದೆ ಮತ್ತು ಸೌರಾಷ್ಟ್ರ, ಕಚ್ ಮತ್ತು ಡಿಯು, ಗಿರ್ ಸೋಮನಾಥ್, ಪೋರ್ಬಂದರ್, ದೇವ್ಭೂಮಿ ದ್ವಾರಕಾ, ಅಮ್ರೆಲಿ, ರಾಜ್‌ಕೋಟ್, ಮತ್ತು ಜಮ್ನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಂಭವವಿದೆ.

Cyclone Tauktae ಮೇ 18ರಂದು ಗುಜರಾತ್ ಕರಾವಳಿ ದಾಟಲಿದೆ ತೌಕ್ತೆ ಚಂಡಮಾರುತ
ತೌಕ್ತೆ ಚಂಡಮಾರುತ
Follow us
ಆಯೇಷಾ ಬಾನು
|

Updated on:May 16, 2021 | 7:38 AM

ದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಿನ್ನೆ ರಾಜ್ಯದ ಕೆಲವು ಕಡೆ ಮಳೆಯಾಗಿದ್ದು ಮೇ 17ರ ತನಕ ರಾಜ್ಯದ ಕರಾವಳಿ ಭಾಗ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ. ಇನ್ನು ತೌಕ್ತೆ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಮತ್ತು ಮೇ 18 ರ ಬೆಳಿಗ್ಗೆ ಗುಜರಾತ್ ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ತಿಳಿಸಿದೆ.

ಸಿಎಸ್ ತೌಕ್ತೆ ಮೇ 15 ರ 2330 ಐಎಸ್ಟಿ ಯಲ್ಲಿ ಅರೇಬಿಯನ್ ಸಮುದ್ರದ ಮೇಲೆ ಕೇಂದ್ರೀಕೃತವಾಗಿದೆ, ಇದು ಪಂಜಿಮ್-ಗೋವಾದ ನೈರುತ್ಯ ದಿಕ್ಕಿನಲ್ಲಿ 170 ಕಿ.ಮೀ ದೂರದಲ್ಲಿ, ಮುಂಬೈಗೆ 520 ಕಿ.ಮೀ ದಕ್ಷಿಣದಲ್ಲಿದೆ. ಇದು ವಿಎಸ್ಸಿಎಸ್ ಆಗಿ ತೀವ್ರಗೊಳ್ಳುವ ಸಾಧ್ಯತೆಯಿದೆ, ಪೊರ್ಬಂದರ್ ಮತ್ತು ಮಹುವ (ಭವನಗರ) ನಡುವೆ ಗುಜರಾತ್ ಕರಾವಳಿಯನ್ನು ದಾಟಲಿದೆ ಎಂದು ಐಎಂಡಿ ಟ್ವೀಟ್ ಮಾಡಿದೆ.

ಗುಜರಾತ್ನಲ್ಲೂ ತೌಕ್ತೆ ಪ್ರಭಾವ ಈ ಚಂಡಮಾರುತದಿಂದಾಗಿ ಗುಜರಾತ್‌ನ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಐಎಂಡಿ ಪ್ರಕಾರ ಜುನಾಘಡ್ ಮತ್ತು ಗಿರ್ ಸೋಮನಾಥ್‌ನಲ್ಲಿ ಹೆಚ್ಚು ಮಳೆಯಾಗಲಿದೆ ಮತ್ತು ಸೌರಾಷ್ಟ್ರ, ಕಚ್ ಮತ್ತು ಡಿಯು, ಗಿರ್ ಸೋಮನಾಥ್, ಪೋರ್ಬಂದರ್, ದೇವ್ಭೂಮಿ ದ್ವಾರಕಾ, ಅಮ್ರೆಲಿ, ರಾಜ್‌ಕೋಟ್, ಮತ್ತು ಜಮ್ನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಂಭವವಿದೆ.

ಕರ್ನಾಟಕ ರಾಜ್ಯದಲ್ಲಿ ಎಲ್ಲೆಲ್ಲಿ ಅಲರ್ಟ್ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದೂ ಕೂಡ ಅತಿಯಾದ ಮಳೆಯಾಗುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಅಂತೆಯೇ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗದ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿರುವ ಕಾರಣ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ತೌಕ್ತೆ ಚಂಡಮಾರುತದ ಎಫೆಕ್ಟ್ ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡ ಮಾರುತ ಹಿನ್ನೆಲೆಯಲ್ಲಿ ಕೊಡಗು, ಮೈಸೂರು, ಉಡುಪಿಯಲ್ಲಿ ತುಂತುರು ಮಳೆ ಮುಂದುವರೆದಿದೆ. ಇನ್ನು ತೌಕ್ತೆ ಚಂಡಮಾರುತದ ಎಫೆಕ್ಟ್​ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಮನೆಗಳಿಗೆ ಹಾನಿಯಾಗಿದೆ. ಇಂದು ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಮಂಗಳೂರು ತಾಲೂಕಿನಲ್ಲಿ 6 ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಪಣಂಬೂರು, ಹೊಯಿಗೆ ಬಜಾರ್, ಕೋಟೆಪುರ, ಉಳ್ಳಾಲ, ಸೋಮೇಶ್ವರ, ಸಸಿಹಿತ್ಲುನಲ್ಲಿ ಕಾಳಜಿ ಕೇಂದ್ರ ಸ್ಥಾಪನೆ. ಮಂಗಳೂರಿನಲ್ಲಿ 48 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಇದನ್ನೂ ಓದಿ: Cyclone Tauktae Photos: ತೌಕ್ತೆ ಚಂಡಮಾರುತದ ಪ್ರತಾಪ; ಇಲ್ಲಿದೆ ಚಂಡಮಾರುತದ ಇಂದಿನ ಚಿತ್ರಣ

Published On - 7:36 am, Sun, 16 May 21