ಸರಿಯಾಗಿ ಮಾಸ್ಕ್ ಹಾಕದೆ, ಕುಡಿದು ಬಂದು, ತಂಬಾಕು ಸೇವಿಸಿ ಸ್ವಾಬ್ ಸಂಗ್ರಹಕ್ಕೆ ಮುಂದಾದ ಲ್ಯಾಬ್ ಟೆಕ್ನಿಷಿಯನ್!
ಲ್ಯಾಬ್ ಟೆಕ್ನಿಷಿಯನ್ ಕುಡಿದು ಬಂದು, ತಂಬಾಕು ಸೇವನೆ ಮಾಡಿ ಅನುಚಿತ ವರ್ತನೆ ತೋರಿರುವ ಬಗ್ಗೆ ಕೋವಿಡ್ ಆಸ್ಪತ್ರೆ ಸರ್ಜನ್ ಪ್ರಕಾಶ್ ಬಿರಾದಾರಗೆ ಗಂಟಲುದ್ರವ ನೀಡಲು ಬಂದವರು ದೂರು ಕೊಟ್ಟಿದ್ದಾರೆ.
ಬಾಗಲಕೋಟೆ: ಸ್ವಾಬ್ ಸಂಗ್ರಹ ವೇಳೆ ಕೊವಿಡ್ ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಅನುಚಿತ ವರ್ತನೆ ತೋರಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಲ್ಯಾಬ್ ಟೆಕ್ನಿಷಿಯನ್ ಅರ್ದಂಬರ್ಧ ಮಾಸ್ಕ್ ಹಾಕಿ, ಕುಡಿದು ಬಂದು, ತಂಬಾಕು ಸೇವಿಸಿ ಸ್ವಾಬ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಗಂಟಲುದ್ರವ ಕೊಡಲು ಬಂದವರ ಜೊತೆ ಬೇಕಾಬಿಟ್ಟಿ ವರ್ತನೆ ತೋರಿದ್ದಾರೆ. ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಲ್ಯಾಬ್ ಟೆಕ್ನಿಷಿಯನ್ನನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಲ್ಯಾಬ್ ಟೆಕ್ನಿಷಿಯನ್ ಕುಡಿದು ಬಂದು, ತಂಬಾಕು ಸೇವನೆ ಮಾಡಿ ಅನುಚಿತ ವರ್ತನೆ ತೋರಿರುವ ಬಗ್ಗೆ ಕೋವಿಡ್ ಆಸ್ಪತ್ರೆ ಸರ್ಜನ್ ಪ್ರಕಾಶ್ ಬಿರಾದಾರಗೆ ಗಂಟಲುದ್ರವ ನೀಡಲು ಬಂದವರು ದೂರು ಕೊಟ್ಟಿದ್ದಾರೆ. ಸಾರಪ್ಪ ಮಾದರ ಎಂಬ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ, ಲ್ಯಾಬ್ ಟೆಕ್ನಿಷಿಯನ್ಗೆ ಷೋಕಾಸ್ ನೊಟೀಸ್ ಜಾರಿಗೊಳಿಸಲಾಗಿದೆ. ಕೊವಿಡ್ ಆಸ್ಪತ್ರೆ ಸರ್ಜನ್ ಜಿಲ್ಲಾಧಿಕಾರಿಗೆ ದೂರು ನೀಡಲು ಕೂಡ ಮುಂದಾಗಿದ್ದಾರೆ.
ಕರ್ನಾಟಕ ಕೊರೊನಾ ಪ್ರಕರಣಗಳ ವಿವರ ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 41,664 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ. 349 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 13,402 ಜನರಿಗೆ ಸೋಂಕು ಪತ್ತೆಯಾಗಿದ್ದು, 94 ಜನರು ನಿಧನರಾಗಿದ್ದಾರೆ. ಇವೆಲ್ಲವುಗಳ ಜತೆ ಕಳೆದ 24 ಗಂಟೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 34,422 ಜನರು ಕೊವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.
ಇಂದು ಪತ್ತೆಯಾದ ಕೊವಿಡ್ ಸೋಂಕಿತರನ್ನೂ ಸೇರಿಸಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21,71,931ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 15,44,982 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 21,434 ಜನರ ಸಾವನ್ನಪ್ಪಿದ್ದು, 6,05,494 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ ಬಾಗಲಕೋಟೆ 584, ಬಳ್ಳಾರಿ 1,622, ಬೆಳಗಾವಿ 1,502, ಬೆಂಗಳೂರು ಗ್ರಾಮಾಂತರ 1,265, ಬೀದರ್ 185, ಬೆಂಗಳೂರು ನಗರ 13,402, ಚಾಮರಾಜನಗರ 535, ಚಿಕ್ಕಬಳ್ಳಾಪುರ 595, ಚಿಕ್ಕಮಗಳೂರು 1093, ಚಿತ್ರದುರ್ಗ 454, ದಕ್ಷಿಣ ಕನ್ನಡ 1,787, ದಾವಣಗೆರೆ 292, ಧಾರವಾಡ 901, ಗದಗ 459, ಹಾಸನ 2443, ಹಾವೇರಿ 267, ಕಲಬುರಗಿ 832, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1,188, ಮೈಸೂರು 2,489, ರಾಯಚೂರು 467, ರಾಮನಗರ 524, ಶಿವಮೊಗ್ಗ 1081, ತುಮಕೂರು 2,302, ಉಡುಪಿ 1,146, ಉತ್ತರ ಕನ್ನಡ 1,226, ವಿಜಯಪುರ 789, ಯಾದಗಿರಿ ಜಿಲ್ಲೆಯಲ್ಲಿಂದು 343 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಇದನ್ನೂ ಓದಿ: ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಷ್ಟರಲ್ಲಿ ಕಣ್ಬಿಟ್ಟು, ದೊಡ್ಡದಾಗಿ ಅಳಲು ಶುರು ಮಾಡಿದ ಕೊರೊನಾ ಸೋಂಕಿತ ಮಹಿಳೆ..
ಸೋಂಕಿತರ ಸಾವನ್ನು ನೋಡಲು ಕಷ್ಟವಾಗುತ್ತಿದೆ; ಕೊರೊನಾ ಪರಿಸ್ಥಿತಿ ವಿವರಿಸುತ್ತಾ ಕಣ್ಣೀರು ಹಾಕಿದ ವೈದ್ಯ
Published On - 9:55 pm, Sat, 15 May 21