- Kannada News National Cyclone Tauktae Photos: ತೌಕ್ತೆ ಚಂಡಮಾರುತದ ಪ್ರತಾಪ; ಇಲ್ಲಿದೆ ಚಂಡಮಾರುತದ ಇಂದಿನ ಚಿತ್ರಣ
Cyclone Tauktae Photos: ತೌಕ್ತೆ ಚಂಡಮಾರುತದ ಪ್ರತಾಪ; ಇಲ್ಲಿದೆ ಚಂಡಮಾರುತದ ಇಂದಿನ ಚಿತ್ರಣ
ಈ ವರ್ಷದ ಮೊದಲ ಚಂಡಮಾರುತ ತೌಕ್ತೆಯ ಪ್ರಭಾವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಮೋಡಕವಿವ ವಾತಾವರಣ ಇದ್ದು, ಮಧ್ಯಾಹ್ನದಿಂದಲೇ ಮಳೆ ಶುರುವಾಗಿದೆ. (ಚಿತ್ರಕೃಪೆ: ಪಿಟಿಐ)
Updated on:May 15, 2021 | 10:23 PM

ಈ ವರ್ಷದ ಮೊದಲ ಚಂಡಮಾರುತ ತೌಕ್ತೆಯ ಪ್ರಭಾವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಮೋಡಕವಿವ ವಾತಾವರಣ ಇದ್ದು, ಮಧ್ಯಾಹ್ನದಿಂದಲೇ ಮಳೆ ಶುರುವಾಗಿದೆ. (ಚಿತ್ರಕೃಪೆ: ಪಿಟಿಐ)

ಉಡುಪಿಯಲ್ಲಿ ನಾಳೆ ಬೆಳಗ್ಗೆವರೆಗೆ ರೆಡ್ ಅಲರ್ಟ್ ಇದ್ದು, ಮುಂದಿನ ಎರಡು ದಿನಗಳು ಅಂದರೆ ಮೇ 17ರವರೆಗೆ ಆರೆಂಜ್ ಅಲರ್ಟ್ ಜಾರಿಯಲ್ಲಿರಲಿದೆ. ಇನ್ನೆರಡು ದಿನವೂ 65-115 ಮಿಮೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ತೆರಳದಂತೆ ಉಡುಪಿ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ. ಸಮುದ್ರ, ನದಿ ತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. (ಚಿತ್ರಕೃಪೆ: ಪಿಟಿಐ)

ಚಂಡಮಾರುತದ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದ ದೋಣಿ ಮುಳುಗಡೆಯಾಗಿದೆ. ಈ ಅಲಾಯನ್ಸ್ ಎಂಬ ಹೆಸರಿನ ವಿಗ್ಗ್ ಬೋಟ್ ಎಂಆರ್ಪಿಎಲ್ ಕಚ್ಚಾತೈಲ ಹಡಗಿನ ಪೈಪ್ಲೈನ್ ನಿರ್ವಹಣೆ ಮಾಡುತ್ತಿದ್ದ ದೋಣಿಯಾಗಿತ್ತು. ಒಟ್ಟು 9 ಜನರು ಸಮುದ್ರಕ್ಕೆ ಇಳಿದಿದ್ದರು. ಇದೀಗ 7ಮಂದಿ ನಾಪತ್ತೆಯಾಗಿದ್ದಾರೆ. (ಚಿತ್ರಕೃಪೆ: ಪಿಟಿಐ)

ತೌಕ್ತೆ ಚಂಡಮಾರುತ ಈಗ ಲಕ್ಷದ್ವೀಪದಲ್ಲಿ ಕೇಂದ್ರೀಕೃತವಾಗಿದ್ದು, ಕರ್ನಾಟಕದತ್ತ ಬರುತ್ತಿದೆ. ಇಂದು ರಾತ್ರಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗೆ ತಲುಪಲಿದೆ. ಮೇ 17 ರವರೆಗೆ ಇರಲಿದೆ ಎಂಬ ಮಾಹಿತಿ ಇದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ. (ಚಿತ್ರಕೃಪೆ: ಪಿಟಿಐ)

State Meteorological Department Director CS Patil informed that there would be three days Tauktae effect

ಹಾಗೇ ಚಂಡಮಾರುತ ತಂದ ಮಳೆಯ ಅಬ್ಬರದ ಮಧ್ಯೆ ರೈತನೊಬ್ಬ ಇಂದು ಮೃತಪಟ್ಟಿದ್ದಾನೆ. ವಿದ್ಯುತ್ ತಂತಿ ಸ್ಪರ್ಶಿಸಿದ ಕಾಪು ತಾಲೂಕಿನ ರೈತ ರಮೇಶ್ ಮೃತಪಟ್ಟಿದ್ದಾರೆ. (ಚಿತ್ರಕೃಪೆ: ಪಿಟಿಐ)

ಕರ್ನಾಟಕದಲ್ಲಿ ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. 10 ಸಾವಿರ ಜನರನ್ನು ಸುರಕ್ಷತಾ ಕ್ಯಾಂಪ್ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಆಹಾರ, ವಸ್ತು ಶೇಖರಣೆಗೆ ಸೂಚನೆ ನೀಡಲಾಗಿದೆ. (ಚಿತ್ರಕೃಪೆ: ಪಿಟಿಐ)

Cyclone Tauktae moves towards Gujarat CM Vijay Rupani contact district collector to review the situation

ಪಕ್ಕದ ಕೇರಳ ರಾಜ್ಯದಲ್ಲೂ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದೆ. (ಚಿತ್ರಕೃಪೆ: ಪಿಟಿಐ)
Published On - 10:10 pm, Sat, 15 May 21



