ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ ಒಟ್ಟು 1857 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 50 ಜನರು ಸಾವನ್ನಪ್ಪಿದ್ದಾರೆ. ಒಟ್ಟು 1950 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಚೇತರಿಕೆ ಪ್ರಮಾಣ ಶೇ 1.15 ಇದೆ, ಸೋಂಕಿತರ ಸಾವಿನ ಪ್ರಮಾಣ ಶೇ 1.61 ಇದೆ. ರಾಜ್ಯದಲ್ಲಿ ಒಟ್ಟು 29,24,732 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 28,65,067 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 36,911 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 22,728 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಗುರುವಾರ 475 ಮಂದಿಯಲ್ಲಿ ಸೋಂಕು ಖಚಿತವಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 321 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಒಟ್ಟು 8193 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಈವರೆಗೆ ನಗರದಲ್ಲಿ ಒಟ್ಟು 12,31,795 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,07,673 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು 15,928 ಮಂದಿ ಮೃತಪಟ್ಟಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ದಕ್ಷಿಣ ಕನ್ನಡ 475, ಬೆಂಗಳೂರು ನಗರ 321, ಉಡುಪಿ 191, ಹಾಸನ 123, ಮೈಸೂರು 116, ಚಿಕ್ಕಮಗಳೂರು 107, ಕೊಡಗು 93, ಉತ್ತರ ಕನ್ನಡ 68, ಶಿವಮೊಗ್ಗ 50, ಮಂಡ್ಯ 46, ಬೆಳಗಾವಿ 45, ಬೆಂಗಳೂರು ಗ್ರಾಮಾಂತರ 44, ತುಮಕೂರು 34, ಚಿತ್ರದುರ್ಗ 30, ಕೋಲಾರ 24, ಚಾಮರಾಜನಗರ 22, ಬಾಗಲಕೋಟೆ 11, ಬಳ್ಳಾರಿ 3, ಚಿಕ್ಕಬಳ್ಳಾಪುರ 9, ದಾವಣಗೆರೆ 20, ಧಾರವಾಡ 9, ಗದಗ 4, ಹಾವೇರಿ 1, ಕಲಬುರಗಿ 4, ರಾಯಚೂರು 2, ರಾಮನಗರ 3, ವಿಜಯಪುರ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ, ದಕ್ಷಿಣ ಕನ್ನಡ 5, ಕೋಲಾರ 3, ಬೆಳಗಾವಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಹಾಸನ 2, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಮಂಡ್ಯ, ಮೈಸೂರು, ಧಾರವಾಡ, ರಾಯಚೂರು, ಉಡುಪಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: Coronavirus cases in India: ದೇಶದಲ್ಲಿ 41,195 ಹೊಸ ಕೊವಿಡ್ ಪ್ರಕರಣ ಪತ್ತೆ, 490 ಮಂದಿ ಸಾವು
ಇದನ್ನೂ ಓದಿ: ಭಾರತದಲ್ಲಿ ಕೊವಿಡ್ ಪರಿಸ್ಥಿತಿ ಹದಗೆಡುತ್ತಿದೆ, ಸಾವಿನ ಸಂಖ್ಯೆ ಚಿಂತೆಗೀಡುಮಾಡಿದೆ: ಹಿರಿಯ ವಿಜ್ಞಾನಿ ಕಳವಳ
(Coronavirus Karnataka Number 1857 Infected Dakshina Kannada Reports Highest Covid infections)