ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು 6000 ದಾಟಿದೆ. ಇಂದು ಒಂದೇ ದಿನ 6570 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರದಲ್ಲಿಯೇ 4422 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದ ವಿವಿಧೆಡೆ ಸೋಂಕಿನಿಂದ 36 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 10,40,130ಕ್ಕೆ (10.40 ಲಕ್ಷ) ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 12,767 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 9,73,949 ಜನರು ಈವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 53,395 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ತಿಳಿಸಿದೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೂವರು, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿ, ಬೀದರ್, ಧಾರವಾಡ, ಕೋಲಾರ, ಮೈಸೂರು, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ಜಿಲ್ಲೆ (4422) ಹೊರತುಪಡಿಸಿದರೆ ಕಲಬುರಗಿ 240, ತುಮಕೂರು 183, ದಕ್ಷಿಣ ಕನ್ನಡ 145, ಉತ್ತರ ಕನ್ನಡ 142, ಬೀದರ್ 129, ಬಳ್ಳಾರಿ 126, ಮೈಸೂರು 216 ಜಿಲ್ಲೆಗಳಲ್ಲಿ ಸೋಂಕು ಪ್ರಮಾಣ ಮೂರಂಕಿ ದಾಟಿದೆ. ಧಾರವಾಡ 96, ಹಾಸನ 94, ಬೆಳಗಾವಿ 92, ಶಿವಮೊಗ್ಗ 70, ಉಡುಪಿ 63, ವಿಜಯಪುರ 60, ಕೋಲಾರ 66, ಚಾಮರಾಜನಗರ ಜಿಲ್ಲೆಯಲ್ಲಿ 56, ಬೆಂಗಳೂರು ಗ್ರಾಮಾಂತರ 54, ಚಿಕ್ಕಮಗಳೂರು 40, ರಾಯಚೂರು 40, ಮಂಡ್ಯ 29, ದಾವಣಗೆರೆ 28, ಕೊಪ್ಪಳ 27, ಯಾದಗಿರಿ 26, ಚಿತ್ರದುರ್ಗ 24, ಚಿಕ್ಕಬಳ್ಳಾಪುರ 23, ಬಾಗಲಕೋಟೆ 21, ಕೊಡಗು 19, ಹಾವೇರಿ 15, ಗದಗ 14, ರಾಮನಗರ ಜಿಲ್ಲೆಯಲ್ಲಿ ಇಂದು 10 ಜನರಲ್ಲಿ ಸೋಂಕು ದೃಢಪಟ್ಟಿದೆ.
ಮುಖ್ಯಮಂತ್ರಿಗಳ ಜೊತೆಗೆ ಮೋದಿ ಸಂವಾದದ ವಿಡಿಯೊ ಇಲ್ಲಿದೆ
Speaking at the meeting with Chief Ministers. https://t.co/oJ5bhIpdBE
— Narendra Modi (@narendramodi) April 8, 2021
ಹಲವು ರಾಜ್ಯಗಳಲ್ಲಿ ನಿರ್ಬಂಧ ಜಾರಿ
ಮಹಾರಾಷ್ಟ್ರ, ಒಡಿಶಾ, ಛತ್ತೀಸಗಡ, ಮಧ್ಯ ಪ್ರದೇಶ ಸೇರಿದಂತೆ ಭಾರತದ ವಿವಿಧೆಡೆ ಕೊರೊನಾ ಸೋಂಕು ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿವೆ. ಕೊರೊನಾ ಸೋಂಕು ಹರಡುವ ವೇಗಕ್ಕೆ ತಡೆಯೊಡ್ಡುವ ಉದ್ದೇಶದಿಂದ ದೇಶದ ಹಲವು ರಾಜ್ಯಗಳಲ್ಲಿ ನಿರ್ಬಂಧ ಜಾರಿಗೊಳಿಸಿ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ದೇಶದ ಕೊರೊನಾ ಹಾಟ್ಸ್ಪಾಟ್ ಆಗಿ ಹೊರಹೊಮ್ಮಿರುವ ಛತ್ತೀಸಗಡದ ರಾಜಧಾನಿ ರಾಯಪುರದಲ್ಲಿ ಏಪ್ರಿಲ್ 9ರಿಂದ 19ರವರೆಗೆ 10 ದಿನಗಳ ಅವಧಿಗೆ ಸಂಪೂರ್ಣ ಲಾಕ್ಡೌನ್ ಮಾಡಲು ಅಲ್ಲಿನ ರಾಜ್ಯ ಸರ್ಕಾರ ನಿರ್ಧರಿಸಿದೆ.
ಒಡಿಶಾದ ಸುಂದರಗಡ, ಬಾರಾಗಡ, ಝುರ್ಸುಗಡ, ಸಾಂಬಾಲ್ಪುರ, ಬಾಲಂಗೀರ್, ನುಪಾದ, ಕಾಳಹಂದಿ, ಮಲ್ಕಾನ್ಗಿರಿ, ಕೊರಾಪುಟ್ ಮತ್ತು ನಬರಂಗ್ಪುರ ಜಿಲ್ಲೆಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಮಧ್ಯಪ್ರದೇಶದ ನಗರಗಳಲ್ಲಿ ಭಾನುವಾರ ನೈಟ್ಕರ್ಫ್ಯೂ ಮತ್ತು ಲಾಕ್ಡೌನ್ ಘೋಷಿಸಲಾಗಿದೆ. ಛತ್ತೀಸಗಡಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಏಪ್ರಿಲ್ 30ರವರೆಗೆ ರಾಜ್ಯದಲ್ಲಿ ರಾಜಕೀಯ ಸಮಾವೇಶಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಇಡೀ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಸಲು ಪಂಜಾಬ್ ನಿರ್ಧರಿಸಿದೆ.
(coronavirus karnataka roundup 6570 new covid-19 infections found in state)
Published On - 8:06 pm, Thu, 8 April 21