ಬೆಂಗಳೂರು: ದೇಶದಲ್ಲಿ ಲಾಕ್ಡೌನ್ ಇದ್ರೂ ಕೊರೊನಾ ಅನ್ನೋ ಹೆಮ್ಮಾರಿ ಅಟ್ಟಹಾಸ ಮೆರೀತಾನೆ ಇದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಇಲ್ಲಿಯ ವರೆಗೆ ರಾಜ್ಯ, ದೇಶ, ವಿದೇಶಗಳಲ್ಲಿ ಎಷ್ಟು ಸೋಂಕಿತರಿದ್ದಾರೆ ಎನ್ನುವ ಡೀಟೇಲ್ಸ್ ನೋಡೋದಾದ್ರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 762ಕ್ಕೆ ಏರಿಕೆಯಾಗಿದೆ. 762ಸೋಂಕಿತರಲ್ಲಿ 376 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 762 ಜನರ ಪೈಕಿ 30 ಜನ ಮೃತಪಟ್ಟಿದ್ದಾರೆ. ಉಳಿದ 356 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ:
ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 56,342
ಭಾರತದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ- 1,886
ದೇಶದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 16,539
ದೇಶದಲ್ಲಿ ಕೊರೊನಾ ಸೋಂಕಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 37,916
ಜಗತ್ತಿನಲ್ಲಿ ಕೊರೊನಾ ಸೋಂಕಿತರ ಅಪ್ಡೇಟ್ಸ್:
ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ- 40,10,396
ಈವರೆಗೆ ವಿಶ್ವದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ- 2,75,940
ವಿಶ್ವದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 13,81,948
ಅಮೆರಿಕ-13,21,497 ಜನರಿಗೆ ಸೋಂಕು, 78,581 ಜನ ಬಲಿ
ಸ್ಪೇನ್-2,60,117 ಜನರಿಗೆ ಸೋಂಕು, 26,299 ಜನ ಬಲಿ
ಇಟಲಿ-2,17,185 ಜನರಿಗೆ ಸೋಂಕು, 30,201 ಜನ ಬಲಿ
ಯುಕೆ-2,11,364 ಜನರಿಗೆ ಸೋಂಕು, 31,241 ಜನ ಬಲಿ
ಫ್ರಾನ್ಸ್-176,079 ಜನರಿಗೆ ಸೋಂಕು, 26,230 ಜನ ಬಲಿ
ರಷ್ಯಾ-1,87,859 ಜನರಿಗೆ ಸೋಂಕು, 1,723 ಜನ ಬಲಿ