AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾದರಾಯನಪುರ ಅಟ್ಟಹಾಸ: ಪುಂಡಾಟ ನಡೆಸಿದ್ದ ಕುಟುಂಬಸ್ಥರಿಗೂ ಕೊರೊನಾ ಅಟ್ಯಾಕ್

ಬೆಂಗಳೂರು: ಪಾದರಾಯನಪುರದಲ್ಲಿ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸಿದೆ. ಪ್ರತಿ ಬೀದಿ ಬೀದಿಯಲ್ಲೂ ಪಾದವೂರಿದೆ. ಮಕ್ಕಳಿಂದ ಹಿಡಿದು ವೃದ್ಧವರೆಗೂ ಎಲ್ಲರ ಕತ್ತು ಹಿಸುಕ್ತಿದೆ. ಕಂಡ ಕಂಡವರ ಜೀವ ಹಿಂಡ್ತಿದೆ. ಅದ್ರಲ್ಲೂ ಗರ್ಭಿಣಿಯರ ದೇಹವನ್ನ ಹೊಕ್ಕಿರೋ ಮಹಾಮಾರಿ ಇಂಚಿಂಚೂ ಬಿಡದೆ ನರಕಯಾತನೆ ತೋರಿಸ್ತಿದೆ. ಗರ್ಭಿಣಿಗೂ ವಕ್ಕರಿಸಿದ ಹೆಮ್ಮಾರಿ! ಕೊರೊನಾದ ಹಾಟ್​ಸ್ಪಾಟ್ ಆಗಿರೋ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಡಬಲ್ ಆಗ್ತಿದೆ. ಪಾದರಾಯನಪುರದಲ್ಲಿ ತನ್ನ ವಿಷಜಾಲದ ಬೇರೂಗಳನ್ನ ಎಲ್ಲೆಡೆ ಹರಡಿದೆ. ಹೀಗಾಗಿ ಱಂಡಮ್ ಟೆಸ್ಟ್​ನಲ್ಲಿ 23 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿತ್ತು. […]

ಪಾದರಾಯನಪುರ ಅಟ್ಟಹಾಸ: ಪುಂಡಾಟ ನಡೆಸಿದ್ದ ಕುಟುಂಬಸ್ಥರಿಗೂ ಕೊರೊನಾ ಅಟ್ಯಾಕ್
ಸಾಧು ಶ್ರೀನಾಥ್​
|

Updated on:May 09, 2020 | 8:17 AM

Share

ಬೆಂಗಳೂರು: ಪಾದರಾಯನಪುರದಲ್ಲಿ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸಿದೆ. ಪ್ರತಿ ಬೀದಿ ಬೀದಿಯಲ್ಲೂ ಪಾದವೂರಿದೆ. ಮಕ್ಕಳಿಂದ ಹಿಡಿದು ವೃದ್ಧವರೆಗೂ ಎಲ್ಲರ ಕತ್ತು ಹಿಸುಕ್ತಿದೆ. ಕಂಡ ಕಂಡವರ ಜೀವ ಹಿಂಡ್ತಿದೆ. ಅದ್ರಲ್ಲೂ ಗರ್ಭಿಣಿಯರ ದೇಹವನ್ನ ಹೊಕ್ಕಿರೋ ಮಹಾಮಾರಿ ಇಂಚಿಂಚೂ ಬಿಡದೆ ನರಕಯಾತನೆ ತೋರಿಸ್ತಿದೆ.

ಗರ್ಭಿಣಿಗೂ ವಕ್ಕರಿಸಿದ ಹೆಮ್ಮಾರಿ! ಕೊರೊನಾದ ಹಾಟ್​ಸ್ಪಾಟ್ ಆಗಿರೋ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಡಬಲ್ ಆಗ್ತಿದೆ. ಪಾದರಾಯನಪುರದಲ್ಲಿ ತನ್ನ ವಿಷಜಾಲದ ಬೇರೂಗಳನ್ನ ಎಲ್ಲೆಡೆ ಹರಡಿದೆ. ಹೀಗಾಗಿ ಱಂಡಮ್ ಟೆಸ್ಟ್​ನಲ್ಲಿ 23 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿತ್ತು. ಇದ್ರ ಬೆನ್ನಲ್ಲೇ ನಿನ್ನೆ 706 ಸೋಂಕಿತನ ಪತ್ನಿ ವಾಣಿ ವಿಲಾಸ್ ಆಸ್ಪತ್ರೆಗೆ ಭೇಟಿ ನೀಡಿದ್ರು.

19 ವರ್ಷದ 8 ತಿಂಗಳ ಗರ್ಭಿಣಿ ತಪಾಸಣೆಗೆ ಬಂದಿದ್ರು. ಈ ವೇಳೆ ಪಾದರಾಯನಪುರ ನಿವಾಸಿ ಎಂದಿದ್ದಕ್ಕೆ ವೈದ್ಯರು ಕೂಡಲೇ ಗರ್ಭಿಣಿಯ ರಕ್ತದ ಮಾದರಿ, ಗಂಟಲು ದ್ರವ ಪರೀಕ್ಷಿಸಿದ್ರು. ಬಳಿಕ ಗರ್ಭಿಣಿಗೂ ಕೊರೊನಾ ಬಂದಿರೋದು ಕನ್ಫರ್ಮ್ ಆಗಿದೆ. ಇದ್ರಿಂದ ವಾಣಿವಿಲಾಸ ಆಸ್ಪತ್ರೆಯಲ್ಲೂ ತೀವ್ರ ಆತಂಕ ಶುರುವಾಗಿದೆ.

9 ತಿಂಗಳ ಗರ್ಭಿಣಿಗೂ ವಕ್ಕರಿಸಿದ ವೈರಸ್..! ಇನ್ನು ಱಂಡಮ್ ಟೆಸ್ಟ್​ನಲ್ಲಿ ಪಾದರಾಯನಪುರ ಮತ್ತೊಬ್ಬ ಗರ್ಭಿಣಿಗೂ ಕೊರೊನಾ ವಕ್ಕರಿಸಿದೆ. ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ 9 ತಿಂಗಳ ಗರ್ಭಿಣಿಯನ್ನ ಪರೀಕ್ಷಿಸಲಾಯ್ತು. ಈ ವೇಳೆ ಸೋಂಕು ತಗುಲಿರೋದು ಗೊತ್ತಾಯ್ತು.

ಕೂಡಲೇ ಗರ್ಭಿಣಿಯನ್ನ ಆ್ಯಂಬುಲೆನ್ಸ್​ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಬಳಿಕ ಚಾಮರಾಜಪೇಟೆಯ ಹೆರಿಗೆ ಆಸ್ಪತ್ರೆಯಲ್ಲಿದ್ದ ಎಲ್ಲಾ ಗರ್ಭಿಣಿಯರನ್ನೂ ಕ್ವಾರಂಟೈನ್ ಮಾಡ್ಬೇಕು ಅಂತಾ ಆರೋಗ್ಯ ಇಲಾಖೆ ಪ್ಲ್ಯಾನ್ ಮಾಡ್ತಿದೆ.

ಪುಂಡರ ಕುಟುಂಬಸ್ಥರಿಗೂ ಹರಡಿದ ಮಹಾಮಾರಿ..! ಇತ್ತ ಪಾದರಾಯನಪುರದಲ್ಲಿ ಪುಂಡಾಟ ಮೆರೆದು ಜೈಲು ಸೇರಿದ್ದ ಕಿಡಿಗೇಡಿಗಳಿಗೂ ಕೊರೊನಾ ಬಂದಿತ್ತು. ಹೀಗಾಗಿ ಪುಂಡರ ಕುಟುಂಬಸ್ಥರನ್ನ ಕ್ವಾರಂಟೈನ್ ಮಾಡಲಾಗಿತ್ತು. ಇದ್ರಲ್ಲಿ ಓರ್ವ ಯುವತಿ, ಇಬ್ಬರು ಮಹಿಳೆಯರಿಗೆ ಕೊರೊನಾ ಕನ್ಫರ್ಮ್​ ಆಗಿದೆ. ಇದ್ರ ಜೊತೆಗೆ ಮತ್ತೊಬ್ಬ ಮಹಿಳೆಗೂ ಸೋಂಕು ಹರಡಿದೆ.

‘ಪಾದ’ವೂರಿದ ಕೊರೊನಾ..! ಕೊರೊನಾ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ವರ್ಷದ ಯುವತಿ, 40 & 55 ವರ್ಷದ ಮಹಿಳೆಗೆ ಸೋಂಕು ಬಂದಿದೆ. 55 ವರ್ಷದ ಮಹಿಳೆಗೆ 449ನೇ ಸೋಂಕಿತನಿಂದ ವೈರಸ್ ಹರಡಿದ್ರೆ, ಯುವತಿ & ಮಹಿಳೆಗೆ 454ನೇ ಸೋಂಕಿತನಿಂದ ಹೆಮ್ಮಾರಿ ದಾಳಿ ಇಟ್ಟಿದೆ. ಸೋಂಕಿತರಾದ 449, 454 ಇಬ್ಬರೂ ಪಾದರಾಯನಪುರ ಗಲಾಟೆಯ ಪುಂಡರಾಗಿದ್ದಾರೆ. ಇತ್ತ ಮತ್ತೊಂದೆಡೆ ಸೋಂಕಿತೆ 707, 35 ವರ್ಷದ ಮಹಿಳೆಗೂ ಕೊರೊನಾ ಕನ್ಫರ್ಮ್​ ಆಗಿದೆ.

ಒಟ್ನಲ್ಲಿ ಕೊರೊನಾ ಪಾದರಾಯನಪುರ ಜನರನ್ನ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ಮೊನ್ನೆ ಇಬ್ಬರ ದೇಹ ಹೊಕ್ಕಿದ ವೈರಸ್ ನಿನ್ನೆ ಬರೋಬ್ಬರಿ 6 ಮಂದಿಗೆ ತನ್ನ ವಿಷಜಾಲ ಹರಡಿದೆ. ಇದ್ರಿಂದ ಜನರ ಆತಂಕ ಕೂಡ ಮತ್ತಷ್ಟು ಹೆಚ್ಚಾಗಿದೆ.

Published On - 8:06 am, Sat, 9 May 20

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ