ಚಿಕ್ಕಬಳ್ಳಾಪುರದ ಸ್ಮಶಾನದಲ್ಲಿ ಶವ ಬಿಸಾಡಿ ಅಮಾನವೀಯತೆ; ಸ್ಥಳೀಯರಿಗೆ ಕೊರೊನಾ ಹರಡುವ ಆತಂಕ

|

Updated on: May 05, 2021 | 11:28 AM

ಶವದ ಮೇಲೆ ಪಿ.ಪಿ.ಇ ಕಿಟ್ ಮಾದರಿಯ ಪ್ಲಾಸ್ಟಿಕ್, ಬಟ್ಟೆ ಬರೆ ಸಮೇತ ಎಸೆದಿದ್ದಾರೆ. ಸ್ಮಶಾನದ ಸುತ್ತಲೂ ವಸತಿ ಬಡಾವಣೆಗಳಿವೆ. ಹೀಗಾಗಿ ಸ್ಥಳೀಯರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಚಿಕ್ಕಬಳ್ಳಾಪುರದ ಸ್ಮಶಾನದಲ್ಲಿ ಶವ ಬಿಸಾಡಿ ಅಮಾನವೀಯತೆ; ಸ್ಥಳೀಯರಿಗೆ ಕೊರೊನಾ ಹರಡುವ ಆತಂಕ
ಪ್ರಾತಿನಿಧಿಕ ಚಿತ್ರ
Follow us on

ಚಿಕ್ಕಬಳ್ಳಾಪುರ: ಶವ ಬಿಸಾಡಿರುವ ಘಟನೆ ನಗರದ ನಿಮ್ಮಾಕಲಕುಂಟೆ ಸ್ಮಶಾನದಲ್ಲಿ ನಡೆದಿದೆ. ಕೊವಿಡ್ ಸೋಂಕಿತ ವ್ಯಕ್ತಿಯ ಶವವನ್ನು ಬಿಸಾಡಿರುವ ಶಂಕೆ ವ್ಯಕ್ತವಾಗಿದ್ದು, ಶವದ ಮೇಲೆ ಪಿ.ಪಿ.ಇ ಕಿಟ್ ಮಾದರಿಯ ಪ್ಲಾಸ್ಟಿಕ್, ಬಟ್ಟೆ ಬರೆ ಸಮೇತ ಎಸೆದಿದ್ದಾರೆ. ಸ್ಮಶಾನದ ಸುತ್ತಲೂ ವಸತಿ ಬಡಾವಣೆಗಳಿವೆ. ಹೀಗಾಗಿ ಸ್ಥಳೀಯರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಮೂರು ದಿನಗಳ ಹಿಂದೆ ಶವ ಬಿಸಾಡಿದ್ದಾರೆಂದು ಹೇಳಲಾಗುತ್ತಿದೆ.

ಡಾಕ್ಟರ್​ಗೂ ಡೋಂಟ್ ಕೇರ್
ಬೆಂಗಳೂರು: ಕೊರೊನಾ ವೈದ್ಯರನ್ನೂ ಬಿಡುತ್ತಿಲ್ಲ. ಮೊನ್ನೆಯಷ್ಟೇ ಕೊರೊನಾದಿಂದ ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ಮಗಳು ವೈದ್ಯೆ ತಾಯಿಯನ್ನು ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿದ್ದಾರೆ. ಅಡ್ಮಿಟ್ ಮಾಡುವಾಗ ಸೋಂಕಿತೆಗೆ ಜಾಸ್ತಿ ಉಸಿರಾಟದ ತೊಂದರೆ ಇತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಟ್ಟು ಚಿಕಿತ್ಸೆ ನೀಡಲಾಯಿತು. ಕೊರೊನ ತೀವ್ರಗೊಂಡಾಗ ವೆಂಟಿಲೇಟರ್ ಬೇಕಾಗಿತ್ತು. ಆದರೆ ಹಾಸ್ಪಿಟಲ್​ನಲ್ಲಿ ವೆಂಟಿಲೇಟರ್ ಇಲ್ಲ. ವೆಂಟಿಲೇಟರ್ ಇಲ್ಲದ ಕಾರಣದಿಂದ ನಿನ್ನೆ ಮೃತಪಟ್ಟಿದ್ದಾರೆ.

ವೆಂಟಿಲೇಟರ್ ಸಿಗದೆ ಸಾವು
ಹುಬ್ಬಳ್ಳಿ: ರಾತ್ರಿಯಿಂದ ವೆಂಟಿಲೇಟರ್​ಗಾಗಿ ಅಲೆದಾಡಿದ್ದ ಧಾರವಾಡ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪತ್ನಿ ತನ್ನ ಪತಿಯನ್ನು ಕಿಮ್ಸ್ಗೆ ಕರೆದುಕೊಂಡು ಬಂದಿದ್ದರು. ಬೆಳಿಗ್ಗೆಯಿಂದಲು ಕಿಮ್ಸ್ ಮುಂದೆ ಕಾದು ಕುಳಿತಿದ್ದರು. ಆದರೆ ವ್ಯಕ್ತಿಯನ್ನು ವಾಡ್೯ ಶಿಫ್ಟ್ ಮಾಡುವಾಗ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ

ಛೇ! ಉನ್ನತ ಐಎಎಸ್, ಐಪಿಎಸ್ ಅಧಿಕಾರಿಗಳದ್ದೇ ನಿಗಾ ಇದ್ದರೂ ನಡೆಯುತ್ತಿತ್ತಾ ಕೋವಿಡ್​ ಬೆಡ್ ಬ್ಲಾಕಿಂಗ್ ದಂಧೆ!?

ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಸಂಸದರ ವಿರುದ್ಧ ಗುಪ್ತ ಕಾರ್ಯಾಚರಣೆ‌ ನಡೆಸಬೇಕು; ಸಿದ್ದರಾಮಯ್ಯ ಟ್ವೀಟ್

(Corpse thrown at Chikkaballapur cemetery and locals have anxiety spreading coronavirus)