ದೀರ್ಘಕಾಲಿಕ ಸುರಕ್ಷತೆಯ ಭರವಸೆಯನ್ನು ಕೊರೊನಾ ಲಸಿಕೆ ಒದಗಿಬೇಕು: ಡಾ. ಹರೀಶ್ ಅಯ್ಯರ್

|

Updated on: Nov 21, 2020 | 10:53 PM

ಬೆಂಗಳೂರು: ಕೊರೊನಾ ವೈರಸ್ ದೀರ್ಘಕಾಲಿಕ ಸುರಕ್ಷತೆಯನ್ನು ನೀಡಬೇಕು, ಒಂದು ಬಾರಿ ಲಸಿಕೆ ಹಾಕಿಸಿಕೊಂಡರೆ ಕನಿಷ್ಠ ಎರಡು ವರ್ಷಗಳ ಕಾಲವಾದರೂ ಅದರ ಪರಿಣಾಮ ಮನುಷ್ಯ ದೇಹದಲ್ಲಿ ಉಳಿಯಕು, ಅಂತಹ ಲಸಿಕೆ ಅಭಿವೃದ್ಧಿಗೋಡು ಮಾರುಕಟ್ಟೆಗೆ ಬರಬೇಕು ಎಂದು ಬಿಲ್ ಮತ್ತು ಮೆಲಿಂಡಾ ಫೌಂಡೇಶನ್ ಹಿರಿಯ ಸಲಹೆಗಾರ ಡಾ. ಹರೀಶ್ ಐಯ್ಯರ್ ಇಂದು ಅಭಿಪ್ರಾಯಪಟ್ಟರು. ಕೊರೊನಾ ಕಾರಣದಿಂದ ವರ್ಚುಯಲ್ ಆಗಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್-2020 ಒನ್ ಹೆಲ್ತ್ ವಿಭಾಗದಲ್ಲಿ, ಲಸಿಕೆಗಳ ಆವಿಷ್ಕಾರ ಮತ್ತು ಅಭಿವೃದ್ಧಿ ಕುರಿತು ಅವರು ಮಾತನಾಡಿದರು. ಕೊರೊನಾ […]

ದೀರ್ಘಕಾಲಿಕ ಸುರಕ್ಷತೆಯ ಭರವಸೆಯನ್ನು ಕೊರೊನಾ ಲಸಿಕೆ ಒದಗಿಬೇಕು: ಡಾ. ಹರೀಶ್ ಅಯ್ಯರ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ವೈರಸ್ ದೀರ್ಘಕಾಲಿಕ ಸುರಕ್ಷತೆಯನ್ನು ನೀಡಬೇಕು, ಒಂದು ಬಾರಿ ಲಸಿಕೆ ಹಾಕಿಸಿಕೊಂಡರೆ ಕನಿಷ್ಠ ಎರಡು ವರ್ಷಗಳ ಕಾಲವಾದರೂ ಅದರ ಪರಿಣಾಮ ಮನುಷ್ಯ ದೇಹದಲ್ಲಿ ಉಳಿಯಕು, ಅಂತಹ ಲಸಿಕೆ ಅಭಿವೃದ್ಧಿಗೋಡು ಮಾರುಕಟ್ಟೆಗೆ ಬರಬೇಕು ಎಂದು ಬಿಲ್ ಮತ್ತು ಮೆಲಿಂಡಾ ಫೌಂಡೇಶನ್ ಹಿರಿಯ ಸಲಹೆಗಾರ ಡಾ. ಹರೀಶ್ ಐಯ್ಯರ್ ಇಂದು ಅಭಿಪ್ರಾಯಪಟ್ಟರು. ಕೊರೊನಾ ಕಾರಣದಿಂದ ವರ್ಚುಯಲ್ ಆಗಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್-2020 ಒನ್ ಹೆಲ್ತ್ ವಿಭಾಗದಲ್ಲಿ, ಲಸಿಕೆಗಳ ಆವಿಷ್ಕಾರ ಮತ್ತು ಅಭಿವೃದ್ಧಿ ಕುರಿತು ಅವರು ಮಾತನಾಡಿದರು.

ಕೊರೊನಾ ಶಕೆ ವಿಶ್ವ ಎದುರಿಸುತ್ತಿರುವ ಅತಿ ಗಂಭೀರ ಸಮಸ್ಯೆಯಾಗಿದ್ದು ಈ ಪಿಡುಗಿನಿಂದ ಮನುಕುಲದ ಆರೋಗ್ಯ ಮತ್ತು ಜಾಗತಿಕ ಆರ್ಥಿಕತೆಗೆ ಮೇಲೆ ಭಾರಿ ಪರಿಣಾಮ ಬೀರಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಶೈಕ್ಷಣಿಕ ಕ್ಷೇತ್ರಗಳು ಮತ್ತು ವಿಶ್ವದ ಎಲ್ಲಾ ದೇಶಗಳು ಒಟ್ಟಾಗಿ ಈ ಮಾಹಾಮಾರಿಯ ವಿರುದ್ಧ ಹೋರಾಡಿದ್ದು ಒಂದು ಪ್ರಶಂಸಾರ್ಹ ಬೆಳವಣಿಗೆ ಎಂದು ಡಾ. ಹರೀಶ್ ಅಭಿಪ್ರಾಯಪಟ್ಟರು.

ಸಣ್ಣ ಕಾಲಾವಧಿಗೆ ಕೆಲಸ ಮಾಡುವ ಕೊರೊನಾ ವೈರಸ್ ವಿರುದ್ಧದ ಲಸಿಕೆಗಳು ಈಗಾಗಲೇ ಭರವಸೆ ಮೂಡಿಸಿದ್ದು ದೀರ್ಘ ಕಾಲಾವಧಿಗೆ ರಕ್ಷಣೆ ನೀಡುವ ಲಸಿಕೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಯಾರಾಗಬೇಕು ಎಂದು ಹರೀಶ್ ಅಬಿಪ್ರಾಯ ವ್ಯಕ್ತಪಡಿಸಿದರು. ವಿದೇಶದಲ್ಲಿ ತಯಾರಾಗುತ್ತಿರುವ ಕೆಲವು ಕೊವಿಡ್ ಲಸಿಕೆಗಳನ್ನು ವಿತರಿಸುವಾಗ, -20 ರಿಂದ -18 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೇಕಾಗುತ್ತವೆ. ಅಂಥ ಲಸಿಕೆಗಳನ್ನು ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವ್ಯವಸ್ಥಿತವಾಗಿ ಹಂಚುವುದು ಕಷ್ಟ ಎಂದವರು ಹೇಳಿದರು.

ವಿಚಾರ ಸಂಕಿರಣದ ಸಮನ್ವಯಕಾರ ಪ್ರೊ. ಗಿರಿಧರ್ ಬಾಬು ಮಾತನಾಡಿ, ಕೊರೊನಾ ವಿರುದ್ಧ ಹೋರಾಡಲು ಲಸಿಕೆಯೇ ಅಂತಿಮ ಭರವಸೆಯಾಗಿ ಕಂಡಿದೆ. ಜನರು ಲಸಿಕೆ ಬರುವುದನ್ನೇ ಕಾಯುತ್ತಿದ್ದಾರೆ. ಭಾರತವು ಲಸಿಕೆ ತಯಾರಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ವಿಶ್ವದ ಕೊವಿಡ್ ಲಸಿಕೆ ತಯಾರಿಕೆಯಲ್ಲಿ ಭಾರತದ ಕೊಡುಗೆ ಶೇ. 60ರಷ್ಟು ಇದೆ ಎಂದರು.

ಕಾರ್ಯಕ್ರಮದಲ್ಲಿ ತಜ್ಞ ವೈದ್ಯ ಮತ್ತು ಸಂಶೋಧಕರಾದ ಡಾ. ರಾಮ ರಾವ್ ಅಮರ, ಡಾ.ರಾಘವನ್ ವರದರಾಜನ್, ಡಾ.ಅರುಣ್ ಶಂಕರ್ ದಾಸ್ ಮೊದಲಾದವರು ಭಾಗವಹಿಸಿದ್ದರು.

Published On - 10:53 pm, Sat, 21 November 20