ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಅವ್ಯವಹಾರ ಆರೋಪ: ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ

| Updated By: ಆಯೇಷಾ ಬಾನು

Updated on: Jan 11, 2021 | 10:51 AM

ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನದ ಹಂಚಿಕೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹನುಮಂತೇಗೌಡನಪಾಳ್ಯದಲ್ಲಿ ನಡೆದಿದೆ. ರೈತರು ತಂದಿದ್ದ ಹಾಲನ್ನು ರಸ್ತೆಗೆ ಚೆಲ್ಲಿ ಧರಣಿ ನಡೆಸಿದರು.

ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಅವ್ಯವಹಾರ ಆರೋಪ: ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ
ಹಾಲು ರಸ್ತೆಗೆ ಚೆಲ್ಲಿ ಧರಣಿ ನಡೆಸಿದ ರೈತರು
Follow us on

ನೆಲಮಂಗಲ: ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನದ  ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹನುಮಂತೇಗೌಡನಪಾಳ್ಯದಲ್ಲಿ ನಡೆದಿದೆ. ಹಾಲು ಉತ್ಪಾದಕರು ತಾವು ತಂದಿದ್ದ ಹಾಲನ್ನು ರಸ್ತೆಗೆ ಚೆಲ್ಲಿ ಧರಣಿ ನಡೆಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ರೈತರು ಧರಣಿಗೆ ಮುಂದಾದರು. ಇದೇ ವೇಳೆ, ಕಾರ್ಯದರ್ಶಿ ಮುದ್ದಹನುಮೇಗೌಡ ವಿರುದ್ಧ ಪ್ರೋತ್ಸಾಹ ಧನ ರೈತರಿಗೆ ಸರಿಯಾಗಿ ನೀಡದೆ ಅವ್ಯವಹಾರ ನಡೆಸುತ್ತಿರುವ ಆರೋಪ ಸಹ ಮಾಡಿದರು.

ಜೊತೆಗೆ, ಕಾರ್ಯದರ್ಶಿ ಮುದ್ದಹನುಮೇಗೌಡ ಅವರ ಪತ್ನಿ ಖಾತೆಗೆ 80 ಸಾವಿರ ಹಣ ಜಮೆ ಮಾಡಲಾಗಿದೆ ಎಂದೂ ಸಹ ಹಾಲು ಉತ್ಪಾದಕರು ಆರೋಪಿಸಿದರು. ಹೀಗಾಗಿ, ಕಾರ್ಯದರ್ಶಿಯನ್ನು ವಜಾಗೊಳಿಸುವಂತೆ ರೈತರ ಪ್ರತಿಭಟನೆ ನಡೆಸಿದರು. ಈ ವೇಳೆ, ಹಾಲಿನ ಡೈರಿ ಬಳಿ ಹಾಲು ಉತ್ಪಾದಕರು ಹಾಗೂ ಹಾಲು ಉತ್ಪಾದಕ ಸಂಘದ ನಡುವೆ ಗಲಾಟೆ ಸಹ ನಡೆಯಿತು.

Delhi Chalo ವಿಫಲಗೊಂಡ 8ನೇ ಸುತ್ತಿನ ಮಾತುಕತೆ, ಜನವರಿ 15ರಂದು ಮುಂದಿನ ಸಭೆ

 

Published On - 6:29 pm, Fri, 8 January 21