ಮಂಗಳೂರು: ಮಂಗಳೂರು (Mangaluru) ನಗರಕ್ಕೆ ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ (Water Supply) ವ್ಯತ್ಯಯವಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ (Mangaluru Municipal Corporation) ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಏಪ್ರಿಲ್ 27ರ ಬೆಳಿಗ್ಗೆ 6 ಗಂಟೆಯಿಂದ 29ರ ಬೆಳಗ್ಗಿನ 6 ಗಂಟೆಯವರೆಗೆ 48 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತವಾಗಲಿದೆ. ತುಂಬೆ ಅಣೆಕಟ್ಟಿನ ಪಂಪಿಂಗ್ ಸ್ಟೇಷನ್‌ನಲ್ಲಿ ನಿರ್ವಹಣಾ ಕಾರ್ಯಗಳನ್ನು ಸುಗಮಗೊಳಿಸುವುದರಿಂದ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮನವಿ ಮಾಡಿಕೊಂಡಿದೆ.
ಶ್ರೀಘದ್ರಲ್ಲೇ ರಾಜ್ಯದ ಕರಾವಳಿಯಲ್ಲಿ ಸೋಲಾರ್ ಫಾರ್ಮ್ ತೆಲೆಯತ್ತಲಿದೆ. ಫ್ರಾನ್ಸ್ ಮೂಲದ ಕಂಪನಿಯೊಂದು ಸುರತ್ಕಲ್ ಲೈಟ್ ಹೌಸ್‌ನಿಂದ ಸುಮಾರು 10 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಸೋಲಾರ್ ಫಾರ್ಮ್ ತೆರೆಯಲು ಮುಂದಾಗಿದೆ. ಇದು 1 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿದ್ದು, ಮೆಸ್ಕಾಂಗೆ ವಿದ್ಯುತ್ ಪೂರೈಸುತ್ತದೆ. ಫ್ರಾನ್ಸ್ ಮೂಲದ ಆಫ್‌ಶೋರ್ ಪೈಲಟ್ ಪ್ರಾಜೆಕ್ಟ್ ಸೋಲಾರ್ ಫಾರ್ಮ್ ಕಂಪನಿಯು ತನ್ನ ಭಾರತ ಮೂಲದ ಅಂಗಸಂಸ್ಥೆಯಾದ ಸೋಲಾರಿನ್‌ಬ್ಲೂ ಎನರ್ಜಿ ಮೂಲಕ ಹೂಡಿಕೆ ಮಾಡಲಿದೆ.
ಇದನ್ನೂ ಓದಿ: Mangalore Airport: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರು ಪಾರ್ಕಿಂಗ್ಗೆ ವಿನೂತನ ಯೋಜನೆ ಜಾರಿ
ಈ ಕುರಿತು ಸೋಲಾರಿನ್‌ಬ್ಲೂ ಸಹ-ಸಂಸ್ಥಾಪಕ ಕಪಿಲ್ ಶರ್ಮಾ ಮಾತನಾಡಿ ಈಗಾಗಲೇ ಸ್ಥಳೀಯ ಸಂಸ್ಥೆಗಳು, ಕೇಂದ್ರ ಸರ್ಕಾರ ಮತ್ತು ಇತರರಿಂದ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದುಕೊಂಡಿದ್ದೇವೆ. ಎಲ್ಲವೂ ಸರಿಯಾಗಿ ನಡೆದರೆ, 2024ರಲ್ಲಿ ಸೌರ ಫಾರ್ಮ್ ಕೆಲಸ ಪ್ರಾರಂಭವಾಗಲಿದೆ. ಒಟ್ಟು 200ಮೀ x 200ಮೀ ವಿಸ್ತೀರ್ಣದಲ್ಲಿ 19ಮೀ ಆಳದಲ್ಲಿ ಸೋಲಾರ್ ಫಾರ್ಮ್ ಅನ್ನು ಸ್ಥಾಪಿಸಲಾಗುತ್ತದೆ. ಈ ಯೋಜನೆ ಮೂಲಕ ವರ್ಷಕ್ಕೆ 1.5GWh ಗಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಇದರಿಂದ 7,000 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಪೂರೈಸಬಹುದಾಗಿದೆ ನಾವು ಮೊದಲು ಕೇರಳದಲ್ಲಿ ಸ್ಥಾಪಿಸಲು ಯೋಜನೆ ರೂಪಿಸಿದ್ದೇವು, ಆದರೆ ಅಂತಿಮವಾಗಿ ಮಂಗಳೂರಲ್ಲಿ ಸ್ಥಾಪಿಸಲು ನಿರ್ಧರಿಸಿದ್ದೇವೆ.
1. ಇಲ್ಲಿ ಸಮುದ್ರದ ತಳವು ಯೋಜನೆಗೆ ಸೂಕ್ತವಾಗಿದೆ ಮತ್ತು ಸೌರ ಫಾರ್ಮ್ ಅನ್ನು ಚೆನ್ನಾಗಿ ಜೋಡಿಸಬಹುದು.
2. ಸರ್ಕಾರದ ನೀತಿಗಳು ಮತ್ತು ಇತರ ಅಂಶಗಳು. ಸಂಸ್ಥೆಯು ಎಲ್ಲಾ ಕಾರ್ಯಸಾಧ್ಯತೆಯ ಪರೀಕ್ಷೆಗಳನ್ನು ನಡೆಸಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದರೇ ಮುಂದಿನ ಹಂತಕ್ಕೆ ಕೈ ಹಾಕಲಿದ್ದೇವೆ. ಇದರಿಂದ ಭವಿಷ್ಯದ ದಿನಗಳಲ್ಲಿ ಮೀನುಗಾರ ಸಮುದಾಯದವರಿಗೆ ಉದ್ಯೋಗ ದೊರೆಯುತ್ತದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Tue, 25 April 23