Air India: ಬೆಂಗಳೂರಿನಿಂದ ಮಂಗಳೂರಿಗೆ ಎರಡು ಹೊಸ ವಿಮಾನಗಳನ್ನು ಆರಂಭಿಸಿದ ಏರ್ ಇಂಡಿಯಾ

|

Updated on: Nov 16, 2023 | 7:45 AM

ಏರ್ ಇಂಡಿಯಾ ಸಂಸ್ಥೆಯು ಬೆಂಗಳೂರಿನಿಂದ ಮಂಗಳೂರಿಗೆ ಎರಡು ಹೊಸ ವಿಮಾನಗಳ ಸೇವೆಯನ್ನು ಆರಂಭಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಎರಡು ನಗರಗಳಿಗೆ ಮಾತ್ರವಲ್ಲದೆ ಚೆನ್ನೈ, ಕಣ್ಣೂರು, ತಿರುವನಂತಪುರಂ ಮತ್ತು ವಾರಣಾಸಿಗೆ ಸಂಪರ್ಕ ಕಲ್ಪಿಸುವ ಹೆಚ್ಚಿನ ಸಂಪರ್ಕವನ್ನು ಭರವಸೆ ನೀಡಿದೆ.

Air India: ಬೆಂಗಳೂರಿನಿಂದ ಮಂಗಳೂರಿಗೆ ಎರಡು ಹೊಸ ವಿಮಾನಗಳನ್ನು ಆರಂಭಿಸಿದ ಏರ್ ಇಂಡಿಯಾ
ಬೆಂಗಳೂರಿನಿಂದ ಮಂಗಳೂರಿಗೆ ಎರಡು ಹೊಸ ವಿಮಾನಗಳನ್ನು ಆರಂಭಿಸಿದ ಏರ್ ಇಂಡಿಯಾ (ಸಾಂದರ್ಭಿಕ ಚಿತ್ರ)
Image Credit source: Reuters
Follow us on

ಮಂಗಳೂರು, ನ.16: ಏರ್ ಇಂಡಿಯಾ (Air India) ಸಂಸ್ಥೆಯು ಬೆಂಗಳೂರಿನಿಂದ ಮಂಗಳೂರಿಗೆ (Bengaluru To Mangaluru) ಎರಡು ಹೊಸ ವಿಮಾನಗಳ ಸೇವೆಯನ್ನು ಆರಂಭಿಸಿದೆ. ನವೆಂಬರ್ 15 ರ ಬುಧವಾರದಿಂದ ಪ್ರಾರಂಭವಾಗುವ ಚಳಿಗಾಲದ ವೇಳಾಪಟ್ಟಿಯು ಈ ಎರಡು ನಗರಗಳಿಗೆ ಮಾತ್ರವಲ್ಲದೆ ಚೆನ್ನೈ, ಕಣ್ಣೂರು, ತಿರುವನಂತಪುರಂ ಮತ್ತು ವಾರಣಾಸಿಗೆ ಸಂಪರ್ಕ ಕಲ್ಪಿಸುತ್ತದೆ.

ಈ ಬಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (MIA) ಮಂಗಳವಾರ ವರದಿ ಬಿಡುಗಡೆ ಮಾಡಿದೆ. ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ವಿಮಾನದ ಸಮಯವನ್ನು ಗ್ರಾಹಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಎಂಐಎ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್ ದಿನ ಏರ್ ಇಂಡಿಯಾ ವಿಮಾನ ಹಾರಾಡುವಂತಿಲ್ಲ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್​ನಿಂದ ಎಚ್ಚರಿಕೆ

ವಿಮಾನಗಳ ವೇಳಾಪಟ್ಟಿ

IX 782 ವಿಮಾನವು ವಾರಣಾಸಿಯಿಂದ ಬೆಳಿಗ್ಗೆ 8 ಗಂಟೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ, ಬೆಳಿಗ್ಗೆ 10.30 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಳಿಯುತ್ತದೆ. ವಿಮಾನವನ್ನು ಬದಲಾಯಿಸದೆ 55 ನಿಮಿಷಗಳ ವಿರಾಮದ ನಂತರ, ಅದು KIA ನಿಂದ 11.10 ಕ್ಕೆ ನಿರ್ಗಮಿಸಿ ಮಧ್ಯಾಹ್ನ 12.10 ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.

ವಾರಣಾಸಿ-ಮಂಗಳೂರು ವಿಮಾನ ಸೇವೆಯಿ ನವೆಂಬರ್ 25 ರವರೆಗೆ (ಕೇವಲ 10 ದಿನಗಳವರೆಗೆ) ಮಾತ್ರ ಇರಲಿದೆ. ಆದಾಗ್ಯೂ, ನವೆಂಬರ್ 26 ರಿಂದ, ವಿಮಾನವು ಬೆಂಗಳೂರಿನ ಮೂಲಕ ಚೆನ್ನೈನಿಂದ ಮಂಗಳೂರಿಗೆ ಸೇವೆ ನೀಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ