Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ. 22ರಂದು ಅಯೋಧ್ಯೆ ರಾಮದೇವರ ಪ್ರಾಣ ಪ್ರತಿಷ್ಠೆ- ಅಂದು ಎಲ್ಲ ಊರುಗಳ ದೇವಸ್ಥಾನಗಳಲ್ಲಿ ಪೂಜೆ, ಪ್ರಸಾದ ವಿತರಣೆ ಮಾಡಬೇಕು: ಪೇಜಾವರ ಸ್ವಾಮೀಜಿ

ಜ. 22ರಂದು ರಾಮದೇವರ ಪ್ರಾಣ ಪ್ರತಿಷ್ಠೆನೆರವೇರಲಿದೆ. ರಾಮ ಭಕ್ತಿ ಬೇರೆ ಅಲ್ಲ, ದೇಶ ಭಕ್ತಿ ಬೇರೆ ಅಲ್ಲ. ರಾಮ ಸೇವೆ ಮಾಡುವ ಇಚ್ಛೆಯವರು ದೇಶಸೇವೆ ಮಾಡೋಣ. ಜನವರಿ 23ರಿಂದ ಮಾರ್ಚ್ 10ರವರಗೆ ಉತ್ಸವ ನಡೆಯುತ್ತದೆ ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಜ. 22ರಂದು ಅಯೋಧ್ಯೆ ರಾಮದೇವರ ಪ್ರಾಣ ಪ್ರತಿಷ್ಠೆ- ಅಂದು ಎಲ್ಲ ಊರುಗಳ ದೇವಸ್ಥಾನಗಳಲ್ಲಿ ಪೂಜೆ, ಪ್ರಸಾದ ವಿತರಣೆ ಮಾಡಬೇಕು: ಪೇಜಾವರ ಸ್ವಾಮೀಜಿ
ಜ. 22ರಂದು ರಾಮದೇವರ ಪ್ರಾಣ ಪ್ರತಿಷ್ಠೆ- ಪೇಜಾವರ ಸ್ವಾಮೀಜಿ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಸಾಧು ಶ್ರೀನಾಥ್​

Updated on:Nov 16, 2023 | 2:10 PM

ಮಂಗಳೂರು, ನವೆಂಬರ್​ 16: ಮುಂದಿನ ವರ್ಷ ಮಕರ ಸಂಕ್ರಾಂತಿ ಮುಗಿಯುತ್ತಿದ್ದಂತೆ ಜನವರಿ 22ರಂದು ಅಭಿಜಿತ್ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿ ರಾಮದೇವರ ಪ್ರಾಣ ಪ್ರತಿಷ್ಠಾಪನೆ ( Ayodhya Ram Mandir Opening Ceremony) ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮಂಗಳೂರಿನಲ್ಲಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Pejawar Mutt Swamiji Sri Vishwaprasanna Tirtha Swamiji) ಹೇಳಿದ್ದಾರೆ.

ಬಹು ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದರೊಂದಿಗೆ ಭಾರತೀಯರ ಕನಸು ನನಸಾಗುತ್ತಿದೆ. ಆ ದಿನ ಅಯೋಧ್ಯೆಗೆ ಎಲ್ಲರಿಗೂ ಬರಲು ಅವಕಾಶ ಇರೋದಿಲ್ಲ. ಹೀಗಾಗಿ ಎಲ್ಲರೂ ಅವರವರ ಊರುಗಳಲ್ಲಿ ದೇವ ಮಂದಿರದಲ್ಲಿ ಬೃಹತ್ ಪರದೆಯ ಮೂಲಕ ವೀಕ್ಷಣೆ ಮಾಡಬೇಕು. ಜೊತೆಗೆ, ಊರಿನ ದೇವಾಲಯದಲ್ಲಿ ಪೂಜೆ, ಭಜನೆ, ಪ್ರಸಾದ ವಿತರಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ರಾಮಭಕ್ತಿ ಬೇರೆ ಅಲ್ಲ, ದೇಶ ಭಕ್ತಿ ಬೇರೆ ಅಲ್ಲ. ರಾಮ ಸೇವೆ ಮಾಡುವ ಇಚ್ಛೆಯವರು ದೇಶಸೇವೆ ಮಾಡೋಣ -ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

ಪ್ರಾಣ ಪ್ರತಿಷ್ಠೆ ಆದ ಬಳಿಕ ಮಂಡಲ ಉತ್ಸವ ನಡೆಯುತ್ತದೆ. ನಿತ್ಯ ಅಭಿಷೇಕ ಸೇರಿದಂತೆ ವಿವಿಧ ಪೂಜೆ ನಡೆಯುತ್ತದೆ. ಆ ಸಂದರ್ಭದಲ್ಲಿ ಎಲ್ಲರೂ ಬಂದು ಪೂಜೆ ಸಲ್ಲಿಸಬಹುದು. ರಾಮ ಮಂದಿರದಲ್ಲಿ ಸೇವಾ ರೂಪದ ಪಟ್ಟಿ ಇರೋದಿಲ್ಲ. ರಾಮ ಭಕ್ತಿ ಬೇರೆ ಅಲ್ಲ, ದೇಶ ಭಕ್ತಿ ಬೇರೆ ಅಲ್ಲ. ರಾಮ ಸೇವೆ ಮಾಡುವ ಇಚ್ಛೆಯವರು ದೇಶಸೇವೆ ಮಾಡೋಣ. ಜನವರಿ 23ರಿಂದ ಮಾರ್ಚ್ 10ರವರಗೆ ಉತ್ಸವ ನಡೆಯುತ್ತದೆ ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:41 pm, Thu, 16 November 23