ಖಾಸಗಿ ಆಸ್ಪತ್ರೆಗಳಲ್ಲಿ ಜನರ ಸುಲಿಗೆ ಹೇಳಿಕೆ; ಮಾಜಿ ಸಚಿವ ರೇವಣ್ಣ ವಿರುದ್ಧ ದೂರು ದಾಖಲು

ಖಾಸಗಿ ನರ್ಸಿಂಗ್ ಹೋಮ್​ಗಳು ಕೊವಿಡ್​ನ ಸಂಕಷ್ಟದ ಕಾಲದಲ್ಲಿ ಜನರ ಸುಲಿಗೆ ಮಾಡುತ್ತಿವೆ. ಸುಲಿಗೆ ನಿಲ್ಲಿಸದಿದ್ದರೆ ಜನರಿಗೆ ಹೇಳಿ ಹೊಡೆಸುತ್ತೇನೆ ಎಂದು ಕೆಲವು ದಿನಗಳ ಮುನ್ನವಷ್ಟೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದರು.

ಖಾಸಗಿ ಆಸ್ಪತ್ರೆಗಳಲ್ಲಿ ಜನರ ಸುಲಿಗೆ ಹೇಳಿಕೆ; ಮಾಜಿ ಸಚಿವ ರೇವಣ್ಣ ವಿರುದ್ಧ ದೂರು ದಾಖಲು
ಎಚ್ ಡಿ ರೇವಣ್ಣ
Edited By:

Updated on: Jun 18, 2021 | 5:15 PM

ಮಂಗಳೂರು: ಖಾಸಗಿ ನರ್ಸಿಂಗ್ ಹೋಮ್​ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಐ.ಎಂ.ಎ ಡಾ.ಗಣೇಶ್ ಪ್ರಸಾದ್ ದೂರು ನೀಡಿದ್ದಾರೆ. ಹಾಸನ‌ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ದಂದೆ ನಡೆಯುತ್ತಿದೆ. ಸುಲಿಗೆ ನಿಲ್ಲಿಸದಿದ್ದರೆ ಜನರಿಗೆ ಹೇಳಿ ಹೊಡೆಸುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಈ ಮುನ್ನ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ಆಧಾರದ ಮೇಲೆ ನರ್ಸಿಂಗ್ ಹೋಮ್ ಗಳ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಟೌನ್ ಪೊಲೀಸ್ ಠಾಣೆ ದೂರು ನೀಡಲಾಗಿದೆ.

ಖಾಸಗಿ ನರ್ಸಿಂಗ್ ಹೋಮ್​ಗಳು ಕೊವಿಡ್​ನ ಸಂಕಷ್ಟದ ಕಾಲದಲ್ಲಿ ಜನರ ಸುಲಿಗೆ ಮಾಡುತ್ತಿವೆ ಎಂದು ಕೆಲವು ದಿನಗಳ ಮುನ್ನವಷ್ಟೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದರು. ಖಾಸಗಿ ನರ್ಸಿಂಗ್ ಹೋಮ್​ಗಳು ಸುಲಿಗೆ ನಡೆಸುವುದನ್ನು ನಿಲ್ಲಿಸದಿದ್ದರೆ ಜನರನ್ನು ಕಳಿಸಿ ಹೊಡೆಸುತ್ತೇವೆ ಎಂದು ಸಹ ಹೇಳಿದ್ದ ಅವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಈ ಬೆನ್ನಲ್ಲೇ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್​ ಸದಸ್ಯ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಪುತ್ತೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಹೊಳೆನರಸೀಪುರಕ್ಕೆ ಪೊಲೀಸ್ ಠಾಣೆ ಬೇಕೆಂದು ಕೈಯಲ್ಲಿ ಅರ್ಜಿ ಹಿಡಿದು ಹಳೆಯ ಸ್ನೇಹಿತನ ಮನೆಗೆ ಬಂದ ಹೆಚ್​ಡಿ ರೇವಣ್ಣ

ಹಾಸನ ಸಭೆಯೊಳಗೆ ಸಂಧಾನದ ಸೂತ್ರ ಜಪಿಸಿ, ಹೊರಗೆ ರೇವಣ್ಣ ವಿರುದ್ಧ ಬೈಗುಳಗಳ ಮಂತ್ರ ಪಠಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

(Case against Former Minister HD Revanna by IMA member Dr. Ganesh Prasad in Putturu)