ಕಾರವಾರ: ಉಪ್ಪು ಜೀವನಾವಶ್ಯಕ ವಸ್ತುಗಳಲ್ಲಿ ಒಂದು. ಅದರಲ್ಲಿಯೂ ಪ್ರಾಕೃತಿಕವಾಗಿ ಬೆಳೆಯುವ ಉಪ್ಪಿಗೆ ಎಲ್ಲಿಲ್ಲದ ಬೇಡಿಕೆ. ಆದರೆ, ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್ ಉಪ್ಪಿನ ಉದ್ಯಮಕ್ಕೂ ಪೆಟ್ಟು ನೀಡಿದೆ. ಗೋಕರ್ಣದ ಸಾಣಿಕಟ್ಟಾದ ಉಪ್ಪಿನ ಆಗರದಲ್ಲಿ ಸಮಯಕ್ಕೆ ಸರಿಯಾಗಿ ಉಪ್ಪು ರಫ್ತಾಗದೇ ರಾಶಿ ರಾಶಿ ಉಪ್ಪು ಶೇಖರಣೆಗೊಂಡಿದೆ.
ರಫ್ತಾಗದೇ ಗೋಕರ್ಣದಲ್ಲೇ ಉಳಿದ ಉಪ್ಪಿನ ರಾಶಿ
ಇದರ ಬೆನ್ನಲ್ಲೆೇ ರಾಜ್ಯಕ್ಕೂ ಕೊರೊನಾ ವಕ್ಕರಿಸಿದ ಪರಿಣಾಮ ಕೆಲ ದಿನಗಳ ಕಾಲ ಉಪ್ಪು ಉತ್ಪಾದನೆಯೇ ಬಂದಾಗುವಂತಾಗಿತ್ತು. ಆದರೆ, ಜೀವನಾವಷ್ಯಕ ವಸ್ತುಗಳಲ್ಲಿ ಬರುವ ಕಾರಣ ಉಪ್ಪು ಉತ್ಪಾದನೆ ಮತ್ತೆ ಮರಳಿ ಆರಂಭಿಸಲಾಗಿತ್ತು. ಆದ್ರೆ ಅನುಮತಿ ಸಿಕ್ಕ ಬಳಿಕ ನಿರಂತರವಾಗಿ ಉಪ್ಪಿನ ಉತ್ಪಾದನೆಯಾಗುತ್ತಿದೆ. ಸುಮಾರು 7 ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಆದ್ರೆ ಉತ್ಪಾದನೆಯಾದ ಉಪ್ಪು ಕೊರೊನಾ ಕಾರಣದಿಂದ ಸಾಗಣೆಯಾಗದ ಕಾರಣ ರಫ್ತಾಗದೇ ಉಪ್ಪಿನ ರಾಶಿಯೇ ಶೇಖರಣೆಯಾಗಿದ್ದು ಕೊರೊನಾ ಕರಿನೆರಳು ಉಪ್ಪಿಗೂ ಒಕ್ಕರಿಸಿದೆ.
ತಲೆನೋವಾದ ಉಪ್ಪು ಸಂಗ್ರಹಣೆ
ಹಲವು ಶತ ಶತಮಾನಗಳಿಂದ ಉತ್ಪಾದಿಸಲಾಗುತ್ತಿರುವ ಉಪ್ಪಿಗೂ ಕೊರೊನಾ ಅಡ್ಡಿಯಾಗಿದೆ. ಆದರೆ, ಉಪ್ಪು ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಲಾಕ್ಡೌನ್ ಮಧ್ಯದಲ್ಲಿ ಸ್ವಲ್ಪ ದಿನ ಕೆಲಸ ಇಲ್ಲದಂತಾದರೂ ಬಳಿಕ ನಿರಂತರವಾಗಿ ಉತ್ಪಾದನೆ ನಡೆದಿರುವುದು ಉದ್ಯೋಗ ಸಿಕ್ಕಂತಾಗಿದೆ. ಆದ್ರೆ ಮೊನ್ನೆಯಿಂದ ಸುರಿಯುತ್ತಿದ್ದ ನಿಸರ್ಗ ಚಂಡಮಾರುತ ಕೂಡ ಕೊರೊನಾ ನಡುವೆ ಉಪ್ಪಿನ ಉದ್ಯಮಕ್ಕೆ ಮತ್ತಷ್ಟು ಹೊಡೆತ ನೀಡಿದ್ದಂತೂ ಸುಳ್ಳಲ್ಲ.
Published On - 3:10 pm, Sun, 7 June 20