ದಕ್ಷಿಣ ಕನ್ನಡ, ನ.17: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare Department) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಲೋಕಾಯುಕ್ತಕ್ಕೆ ದೂರು ವಿಚಾರ ‘ ಭ್ರಷ್ಟಾಚಾರ(Corruption)ದ ಆರೋಪ ನಿಜವಾಗಿಯೂ ಬಾಲಿಶ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ‘ಬಹಳ ಸೂಕ್ಷ್ಮ ಇಲಾಖೆಯನ್ನು ನಾನು ನಿಬಾಯಿಸುತ್ತಿದ್ದೇನೆ. ಯಾವುದೇ ಟೆಂಡರ್ ಆಗಿಲ್ಲ. ಸುಪ್ರೀಂ ಕೋರ್ಟ್, ಹೈಕೋರ್ಟ್ ನಿರ್ದೇಶನ ಉಲ್ಲಂಘನೆಯಾಗಿತ್ತು. 2021 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಜಿಯೋ ಮಾಡಿತ್ತು. ಸುಪ್ರೀಂಕೋರ್ಟ್, ಹೈಕೋರ್ಟ್ ನಿರ್ದೇಶನದಂತೆ ಎ.ಜಿಯವರ ಅಭಿಪ್ರಾಯ ಪಡೆದು, ಅದನ್ನು ನಾವು ಮಾಡಿದ್ದೆವು. ನ್ಯಾಯಾಂಗದ ಸೂಚನೆ ಉಲ್ಲಂಘನೆ ಆಗಿರುವುದನ್ನು ಅನುಷ್ಠಾನ ಮಾಡಿದ್ದೇವೆ. ಇದರಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ ಎಂದರು.
ಇನ್ನು ಶುರುನೇ ಆಗಿಲ್ಲವೆಂದರೆ, ಭ್ರಷ್ಟಾಚಾರ ಹೇಗೆ ಆಗುತ್ತದೆ, ದೂರು ಕೊಡೋರು ಕೊಡುತ್ತಾ ಇರುತ್ತಾರೆ. ಒಳ್ಳೆ ಕೆಲಸದಲ್ಲಿ ಹೊಗಳುವವರು, ತೆಗಳುವವರು ಇರುತ್ತಾರೆ. ಇದನೆಲ್ಲ ಎದುರಿಸಿಕೊಂಡು ಮುಂದೆ ಹೋಗಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿದ್ದೇನೆ. ಸುಪ್ರೀಂಕೋರ್ಟ್ ನಿರ್ದೇಶನವನ್ನು ಜಾರಿ ಮಾಡಿದ್ದೇವೆ. ಉಡುಪಿಯಿಂದ ಕಾರ್ಯಕ್ರಮ ಮುಗಿಸಿ ಈಗ ಬರುತ್ತಿದ್ದು, ಬೆಂಗಳೂರಿಗೆ ಹೋಗಿ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ:ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಮಕ್ಕಳ ಪೌಷ್ಟಿಕ ಆಹಾರ ಸರಬರಾಜಿನಲ್ಲಿ ಅಕ್ರಮ ನಡೆದಿದೆ. 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರವಾಗಿದೆ. ಈ ಹಿನ್ನಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ, ವಕೀಲ ನಟರಾಜ ಶರ್ಮಾ ಎಂಬುವವರು ದೂರು ನೀಡಿದ್ದಾರೆ. ಕಪ್ಪುಪಟ್ಟಿಯಲ್ಲಿರುವ ಕ್ರಿಸ್ಟಿ ಫ್ರೈಡ್ ಗ್ರಾಂ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿರುವ ನಟರಾಜ ಶರ್ಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ.ಸಿ.ಪ್ರಕಾಶ್, ಇಲಾಖೆಯ ನಿರ್ದೇಶಕರ ವಿರುದ್ಧವೂ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ