ಮಂಗಳೂರು ನ.10: ದೀಪಾವಳಿ (Deepavali) ಹಬ್ಬ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ (South Western Railway), ಮೈಸೂರು ವಿಭಾಗವು ಹೆಚ್ಚಿನ ಜನದಟ್ಟಣೆಯನ್ನು ನಿವಾರಿಸಲು ಮೈಸೂರು (Mysore) ಮತ್ತು ಮಂಗಳೂರು (Mangaluru) ನಡುವೆ ದೀಪಾವಳಿ ವಿಶೇಷ ರೈಲನ್ನು ಬಿಡಲು ನಿರ್ಧರಿಸಿದೆ.
ರೈಲು ನಂ.07303: ಮೈಸೂರು-ಮಂಗಳೂರು ಶುಕ್ರವಾರ ರಾತ್ರಿ 8:30 ಕ್ಕೆ ಮೈಸೂರಿನಿಂದ ಹೊರಟು ಶನಿವಾರ ಬೆಳಿಗ್ಗೆ 09:40 ಕ್ಕೆ ಮಂಗಳೂರು ತಲುಪಲಿದೆ. ರೈಲು ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ಮಾರ್ಗದ ಮೂಲಕ ಮಂಗಳೂರು ಜಂಕ್ಷನ್ಗೆ ತಲುಪಲಿದೆ.
ಇದನ್ನೂ ಓದಿ: ನೈಋತ್ಯ ರೈಲ್ವೆಯಿಂದ ದೀಪಾವಳಿ ಹಬ್ಬಕ್ಕೆ 2 ವಿಶೇಷ ಎಕ್ಸಪ್ರೆಸ್ ರೈಲು: ಯಾವ ಯಾವ ನಗರ ಮಧ್ಯೆ ಸಂಚಾರ? ಇಲ್ಲಿದೆ ಮಾಹಿತಿ
ರೈಲು ನಂ.07304: ಮಂಗಳೂರು-ಮೈಸೂರು ಶನಿವಾರ ಬೆಳಿಗ್ಗೆ 11:40 ಕ್ಕೆ ಮಂಗಳೂರಿನಿಂದ ಹೊರಟು ಭಾನುವಾರ ಬೆಳಿಗ್ಗೆ 12:50 ಕ್ಕೆ ಮೈಸೂರು ತಲುಪಲಿದೆ. ರೈಲು ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಚಿಕ್ಕಬಾಣಾವರ, ಯಶವಂತಪುರ, ಕೆಎಸ್‌ಆರ್ ಬೆಂಗಳೂರು, ಕೆಂಗೇರಿ ಮಾರ್ಗದ ಮೂಲಕ ಮಂಡ್ಯಕ್ಕೆ ತಲಪುತ್ತದೆ.
ರೈಲಿನಲ್ಲಿ 3 ಎಸಿ ಕೋಚ್‌ಗಳು, 7 ಮೂರು ಹಂತದ ಎಸಿ ಕೋಚ್‌ಗಳು, 8 ಸೆಕೆಂಡ್ ಸ್ಲೀಪರ್ ಮತ್ತು 2 ಸೆಕೆಂಡ್ ಸೀಟಿಂಗ್ ಕೋಚ್‌ಗಳು ಇರುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ