ನೈಋತ್ಯ ರೈಲ್ವೆಯಿಂದ ದೀಪಾವಳಿ ಹಬ್ಬಕ್ಕೆ 2 ವಿಶೇಷ ಎಕ್ಸಪ್ರೆಸ್ ರೈಲು: ಯಾವ ಯಾವ ನಗರ ಮಧ್ಯೆ ಸಂಚಾರ? ಇಲ್ಲಿದೆ ಮಾಹಿತಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರ ಮನವಿ ಮೇರೆಗೆ ನೈಋತ್ಯ ರೈಲ್ವೆಯು ಎರಡು ವಿಶೇಷ ಎಕ್ಸಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಯಾವ ಯಾವ ನಗರಗಳ ಮಧ್ಯೆ ಸಂಚರಿಸಲಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಹುಬ್ಬಳ್ಳಿ ನ.06: ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ (Deepavali) ಬಂದೇ ಬಿಡುತ್ತದೆ. ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರ ಮನವಿ ಮೇರೆಗೆ ನೈಋತ್ಯ ರೈಲ್ವೆಯು (SWR) ಸರ್ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು-ವಿಜಯಪುರ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳನ್ನು (Train) ಓಡಿಸಲಿದೆ.
ರೈಲು ಸಂಖ್ಯೆ 06231: ಎಸ್‌ಎಂವಿಟಿ ಬೆಂಗಳೂರು-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 10 ರಂದು ಸಂಜೆ 7 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10.55 ಕ್ಕೆ ವಿಜಯಪುರ ತಲುಪಲಿದೆ.
ರೈಲು ಸಂಖ್ಯೆ 06232: ವಿಜಯಪುರ-ಎಸ್‌ಎಂವಿಟಿ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 14 ರಂದು ಸಂಜೆ 5 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಿಗ್ಗೆ 9.30 ಕ್ಕೆ ಎಸ್‌ಎಂವಿಟಿಗೆ ಆಗಮಿಸುತ್ತದೆ.
ಇದನ್ನೂ ಓದಿ: ದೀಪಾವಳಿ: KSRTC ಯಿಂದ 2 ಸಾವಿರ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ: ಇಲ್ಲಿದೆ ಮಾಹಿತಿ
ರೈಲು ಸಂಖ್ಯೆ 06585: ಎಸ್‌ಎಂವಿಟಿ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 10 ರಂದು ರಾತ್ರಿ 8 ಗಂಟೆಗೆ ಎಸ್ಎಮ್ವಿಟಿಯಿಂದ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಬೆಳಗಾವಿಗೆ ಆಗಮಿಸುತ್ತದೆ. ರೈಲು ಸಂಖ್ಯೆ 06586: ಬೆಳಗಾವಿ-ಎಸ್ಎಮ್ವಿಟಿ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 14 ರಂದು ಸಂಜೆ 6.50 ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ಎಸ್ಎಮ್ವಿಟಿಗೆ ಆಗಮಿಸುತ್ತದೆ.
ಈ ಮೇಲೆ ತಿಳಿಸಿದ ಪ್ರತಿಯೊಂದು ರೈಲುಗಳು 16 ಕೋಚ್‌ಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಒಂದು ಎಸಿ ಟು-ಟೈರ್, ಮೂರು ಎಸಿ ತ್ರೀ-ಟೈರ್, ಎಂಟು ಸ್ಲೀಪರ್ ಕ್ಲಾಸ್, ಎರಡು ಸಾಮಾನ್ಯ ಸೆಕೆಂಡ್ ಕ್ಲಾಸ್ ಮತ್ತು ಎರಡು ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್-ವ್ಯಾನ್‌ಗಳು/ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ