ಮಡಿಕೇರಿ: ನಿವೃತ್ತಿ ಪೊಲೀಸ್ ಅಧಿಕಾರಿ ಮನೆಯಲ್ಲಿ ವಾಸವಾಗಿದ್ದ ಒಂಟಿ ಮಹಿಳೆ ಮೇಲೆ ಹಲ್ಲೆ, ಚಿನ್ನ ದೋಚಲು ಯತ್ನ
ಮಡಿಕೇರಿ ನಗರದ ಕಾಲೇಜು ರಸ್ತೆಯ IDBI ಬ್ಯಾಂಕ್ ಬಳಿ ಒಂಟಿಯಾಗಿ ವಾಸವಾಗಿದ್ದ ಸಾಕಮ್ಮ ಎಂಬುವರ ಮನೆಗೆ ರವಿವಾರ ಸಂಜೆ ಅಪರಿಚಿತ ವ್ಯಕ್ತಿ ನುಗ್ಗಿದ್ದನು. ಮಹಿಳೆಯ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಸರ ಕಿತ್ತುಕೊಳ್ಳಲು ಯತ್ನಿಸಿದನು. ಆದರೆ ಸಾಧ್ಯವಾಗದೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೊಡಗು ನ.06: ಮಡಿಕೇರಿಯಲ್ಲಿ (Madikeri) ಒಂಟಿ ಮಹಿಳೆ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆ ಪೊಲೀಸರು (Police) ಶಂಕಿತ ಆರೋಪಿಯ ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿದ್ದಾರೆ. ಶಂಕಿತ ಆರೋಪಿ ಮನೆಯ ಆಸು ಪಾಸು ಓಡಾಡಿದ್ದಾನೆ. ಶಂಕಿತನ ಪತ್ತೆಗೆ ಪೊಲೀಸ್ ಇಲಾಖೆ ಸಾರ್ವಜನಿಕರ ನೆರವು ಕೇಳಿದೆ.
ಮಡಿಕೇರಿ ನಗರದ ಕಾಲೇಜು ರಸ್ತೆಯ IDBI ಬ್ಯಾಂಕ್ ಬಳಿ ಒಂಟಿಯಾಗಿ ವಾಸವಾಗಿದ್ದ ಸಾಕಮ್ಮ ಎಂಬುವರ ಮನೆಗೆ ರವಿವಾರ ಸಂಜೆ ಅಪರಿಚಿತ ವ್ಯಕ್ತಿ ನುಗ್ಗಿದ್ದನು. ಮಹಿಳೆಯ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಸರ ಕಿತ್ತುಕೊಳ್ಳಲು ಯತ್ನಿಸಿದನು. ಆದರೆ ಸಾಧ್ಯವಾಗದೆ ಹಾಗೆ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಾಕಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ನಿವೃತ್ತಿ ಪೊಲೀಸ್ ಅಧಿಕಾರಿ ಎಂ.ಸಿ ಪ್ರಭಾಕರ್ ಎಂಬುವರಿಗೆ ಸೇರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ