Karnataka Breaking Kannada News Highlights: ಸಿಎಂ, ಡಿಸಿಎಂ ಭೇಟಿಯಾದ ಕೇಂದ್ರದ ಮಾಜಿ ಸಚಿವ ಸುಭೋದ್ ಕಾಂತ್ ಸಹಾಯ್
Karnataka Breaking News Highlights: ರಾಜಧಾನಿಯಲ್ಲಿ ಗಣಿ & ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಬರ್ಬರ ಹತ್ಯೆ ಬೆಚ್ಚಿ ಬೀಳುವಂತೆ ಮಾಡಿದೆ. ಸದ್ಯ ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ. ಮತ್ತೊಂದೆಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಸಕರೇ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡುತ್ತಿದ್ದಾರೆ. ಮತ್ತಷ್ಟು ಸುದ್ದಿಗಳಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ರಾಜಧಾನಿಯಲ್ಲಿ ಗಣಿ & ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಪ್ರತಿಮಾ ಕೆ.ಎಸ್. ಬರ್ಬರ ಹತ್ಯೆಯಾಗಿದೆ. ಬೆಂಗಳೂರಿನ ದೊಡ್ಡಕಲ್ಲಸಂದ್ರದ ಕುವೆಂಪು ನಗರದ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ಗಣಿ ಭೂ ವಿಜ್ಞಾನಿ ಅಧಿಕಾರಿಯನ್ನ ದುಷ್ಕರ್ಮಿಗಳು ಉಸಿರು ಗಟ್ಟಿಸಿ ಕೊಲೆ ಮಾಡಿ ಬಳಿಕ ಕತ್ತು ಕೊಯ್ದು ಪರಾರಿಯಾಗಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮತ್ತೊಂದೆಡೆ ಹಾಸನಾಂಬೆ ದೇವಿ ದರ್ಶನ ಪಡೆಯಲು 4ನೇ ದಿನವೂ ಭಕ್ತಸಾಗರ ಹರಿದು ಬರುತ್ತಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ಮುಂಜಾನೆ 5 ಗಂಟೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ನವೆಂಬರ್ 15ರಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ. ಇದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ಗಾಗಿ ಟಿವಿ9 ಲೈವ್ ಫಾಲೋ ಮಾಡಿ.
LIVE NEWS & UPDATES
-
Karnataka Breaking News Live: ತರಕಾರಿ, ಕೃಷಿ ಬೆಳೆ ಎಲ್ಲವೂ ಹಾನಿಯಾಗಿದೆ: ಸಂತೋಷ್ ಲಾಡ್
ಜಿಲ್ಲೆಯಲ್ಲಿ 2 ಲಕ್ಷ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಹಾನಿ ಆಗಿದೆ. ತರಕಾರಿ, ಕೃಷಿ ಬೆಳೆ ಎಲ್ಲವೂ ಹಾನಿಯಾಗಿದೆ. ನಾಳೆಯಿಂದ ಜಿಲ್ಲೆಯಲ್ಲಿ ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ. ಜಿಲ್ಲೆಯ 14 ಕಡೆ ಮೇವು ಬ್ಯಾಂಕ್ ತೆರೆಯಲು ನಿರ್ಧರಿಸಿದ್ದೇವೆ ಎಂದು ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
-
Karnataka Breaking News Live: ಪಕ್ಷದಲ್ಲಿ ಸೋಮಣ್ಣಗೆ ದೊಡ್ಡ ಭವಿಷ್ಯವಿದೆ, ಅವರ ಕೊಡುಗೆ ದೊಡ್ಡದಿದೆ
ಪಕ್ಷದಲ್ಲಿ ಸೋಮಣ್ಣಗೆ ದೊಡ್ಡ ಭವಿಷ್ಯವಿದೆ, ಅವರ ಕೊಡುಗೆ ದೊಡ್ಡದಿದೆ. ಹೀಗಾಗಿ ಹೈಕಮಾಂಡ್ ಬರ ಅಧ್ಯಯನ ತಂಡದಲ್ಲಿ ಅವರಿಗೆ ಸ್ಥಾನ ಕೊಟ್ಟಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದರೆ ರಾಜ್ಯಾಧ್ಯಕ್ಷ ಆಗಬಹುದು. ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗ್ತಾರೆ ಅಂತಾರೆ. ಕಾಂಗ್ರೆಸ್ ತಮ್ಮಲ್ಲಿರುವ 136 ಶಾಸಕರನ್ನು ಸಮಾಧಾನಪಡಿಸಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
-
Karnataka Breaking News Live: ಸಿಎಂ ಆಗ್ಬೇಕು ಅಂತಾ ಹಗಲುಗನಸು ಕಾಣ್ತಿದ್ದಾರೆ
Karnataka Breaking News Live: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ
ಪದ್ಮನಾಭನಗರದ ನಿವಾಸದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನ್ಯಾ.ಎಂ.ಎನ್.ವೆಂಕಟಾಚಲಯ್ಯರಿಂದ ಪ್ರಶಸ್ತಿ ನೀಡಲಾಗಿದ್ದು, ನಾಡೋಜ ಮಹೇಶ್ ಜೋಶಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
Karnataka Breaking News Live: ಯಡಿಯೂರಪ್ಪ ಅವಮಾನ: ಕಿಡಿಕಾರಿದ ರೇಣುಕಾಚಾರ್ಯ
Karnataka Breaking News Live: ಸಿದ್ರಾಮಯ್ಯ ಸರ್ಕಾರ ಯಾವಾಗ ಬೀಳುತ್ತೆ ಗೋತ್ತಿಲ್ಲ: ಕೆಎಸ್ ಈಶ್ವರಪ್ಪ
Karnataka Breaking News Live: ಸಿಎಂ ಹಾಗೂ ಡಿಸಿಎಂರನ್ನು ಭೇಟಿಯಾದ ಸುಭೋದ್ ಕಾಂತ್ ಸಹಾಯ್
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ರನ್ನು ಕೇಂದ್ರದ ಮಾಜಿ ಸಚಿವ ಸುಭೋದ್ ಕಾಂತ್ ಸಹಾಯ್ ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಸಂಜೆ ಭೇಟಿ ಮಾಡಿ ಸಮಾಲೋಚನೆ ಮಾಡಿದ್ದಾರೆ.
Karnataka Breaking News Live: ಹಾವೇರಿ ಜಿಲ್ಲೆಯ ಹಲವೆಡೆ ಜೋರು ಮಳೆ
ಹಾವೇರಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಮೇತ ಕೆಲಕಾಲ ಧಾರಕಾರ ಮಳೆ ಆಗಿದೆ. ಮಳೆ ಇಲ್ಲದೆ ಕಂಗಾಲಿದ್ದ ಜನರಿಗೆ ಮಳೆ ಖುಷಿ ತಂದಿದೆ. ಕಟಾವಿಗೆ ಬಂದ ಮೆಕ್ಕೆಜೋಳ ಹಾನಿಯಾಗು ಭಯದಲ್ಲಿ ಅನ್ನದಾತರು.
Karnataka Breaking News Live: ಪ್ರಧಾನಿ ಮೋದಿ ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ
ಪ್ರಧಾನಿ ಮೋದಿ ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ. ಮಧ್ಯಪ್ರದೇಶಕ್ಕೆ ಹೋಗಿ ಕರ್ನಾಟಕದ ಬಗ್ಗೆ ಮೋದಿ ಮಾತಾಡಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಎಷ್ಟು ಹಣ ನೀಡಿದೆ? ರಾಜ್ಯ ಸರ್ಕಾರ ಏನು ಮಾಡಿದೆ ಅಂತಾ ಮೋದಿ ಎಂದೂ ಹೇಳಲ್ಲ ಎಂದು ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಸಂತೋಷ್ ಲಾಡ್ ಹೇಳಿದ್ದಾರೆ.
Karnataka Breaking News Live: ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
Karnataka Breaking News Live: ಸಿದ್ರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿ
Karnataka Breaking News Live: ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ನಾಯಕರಿಂದ ಬರ ಅಧ್ಯಯನ
ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ನಾಯಕರಿಂದ ಬರ ಅಧ್ಯಯನ ಮಾಡಲಾಗಿದೆ. ರೈತರ ಜಮೀನಿಗೆ ಭೇಟಿ ನೀಡಿದ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಕೊಡಿಯಾಲ ಗೇಟ್‌ನಲ್ಲಿ ರಾಗಿ ತೆನೆ ಕೈಯಲ್ಲಿ ಹಿಡಿದು ವೀಕ್ಷಿಸಿದ್ದಾರೆ. ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಕೊಡಿಯಾಲ ಗೇಟ್ ಗ್ರಾಮದ ರೈತರಾದ ಬಸವರಾಜ್, ರಾಜಶೇಖರಯ್ಯ ಜಮೀನಿನಲ್ಲಿ ಬರ ವೀಕ್ಷಣೆ ಮಾಡಿದ್ದಾರೆ.
Karnataka Breaking News Live: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ
ದರಿದ್ರ ಸರ್ಕಾರದಿಂದಾಗಿ ನಾವೆಲ್ಲಾ ಪೇಪರ್ ಎಂಎಲ್‌ಎಗಳಾಗಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ. ತುಮಕೂರು ತಾಲೂಕಿನ ಬೆಳ್ಳಾವಿಯಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
Karnataka Breaking News Live: ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ
ಬ್ರೇಕ್‌ಫಾಸ್ಟ್ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆಯೇ ಆಗಿಲ್ಲ. ಯಾರೆಲ್ಲಾ ಬರ್ತಾರೋ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ತೇವೆ. ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Karnataka Breaking News Live: ರೈತರ ವಿರುದ್ದ ಅಪಾಯಕಾರಿ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ -ಕೋಡಿಹಳ್ಳಿ ಚಂದ್ರಶೇಖರ್
ರೈತರ ವಿರುದ್ಧ ಅಪಾಯಕಾರಿ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ರೈತ ಕಾಯ್ದೆಯನ್ನ ರದ್ದುಪಡಿಸದೆ, ಹಿಂದಿನ ಸರ್ಕಾರ ತಂದ ಕಾಯ್ದೆಗಳನ್ನ ಜಾರಿ ಮಾಡುತ್ತಿದೆ. ಯಾವ ಕಾರ್ಪೋರೇಟ್ ಕಂಪನಿ ನಿಮ್ಮೊಂದಿಗೆ ಇದ್ದಾರೆ? ಇಂತಹ ಅಪಾಯದ ಕೆಲಸಕ್ಕೆ ಕೈ ಹಾಕಬೇಡಿ. ಕಾಯ್ದೆ ರದ್ದಿಪಡಿಸಬೇಕೆಂದು ಚಳುವಳಿ ಮಾಡಿದಾಗ, ಕಾಯ್ದೆ ರೈತರಿಗೆ ವಿರುದ್ದ ಇದೆ ಎಂದು ಹೇಳಿದ್ರಿ. ಆಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಚಳುವಳಿಯಲ್ಲಿ ಭಾಗವಹಿಸಿದ್ರು. ಜಾಹಿರಾತು ನೀಡುವ ಮೂಲಕ ರೈತರನ್ನ ಹರಾಜಿಗೆ ಇಟ್ಟಿದ್ದೀರಿ ಎಂದು ಕೋಲಾರದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
Karnataka Breaking News Live: ಇಂದಿನಿಂದ ಪಂಪ್ಸೆಟ್ಗಳಿಗೆ 7 ತಾಸು ವಿದ್ಯುತ್
ಇಂದಿನಿಂದ ಪಂಪ್ಸೆಟ್ಗಳಿಗೆ 7 ತಾಸು ವಿದ್ಯುತ್ ಕೊಡುತ್ತೇವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರೈತರಿಗೆ ಗುಡ್ ನ್ಯೂಸ್: ಇಂದಿನಿಂದ ಪಂಪ್ಸೆಟ್ಗಳಿಗೆ 7 ತಾಸು ವಿದ್ಯುತ್ ಕೊಡುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ
Karnataka Breaking News Live: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್ -ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್ ಎಂದು ಚಾಮರಾಜನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಅಥವಾ ಅದರಳೊಗೆ ಸಿಎಂ ಬದಲಾವಣೆ ಆಗುತ್ತೆ. ಸಿದ್ದರಾಮಯ್ಯಗೆ ಖುರ್ಚಿ ಉಳಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ ಎಂದರು.
Karnataka Breaking News Live: ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಈಶ್ವರಪ್ಪ ವಾಗ್ದಾಳಿ
ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಲ್ಲ ಮುಖ್ಯಮಂತ್ರಿ ಆಗುವವರೇ? ನಾನು ಸಿಎಂ, ನಾನು ಸಿಎಂ ಎಂದು 224 ಜನರೂ ಹೇಳುತ್ತಿದ್ದಾರೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಡದ ಪ್ರಿಯಾಂಕ್ ಸಿಎಂ ಅಂತಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ತಂದೆ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಮಲ್ಲಿಕಾರ್ಜುನ ಖರ್ಗೆಯನ್ನೇ ಸಿಎಂ ಆಗಲು ಬಿಟ್ಟಿಲ್ಲ, ಇವರನ್ನು ಬಿಡ್ತಾರಾ? ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ ಅಂತಾರೆ. ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ರಾಜಣ್ಣ ಹೇಳ್ತಾರೆ. ಪರಮೇಶ್ವರ್ ದೇವರು ಅನುಗ್ರಹ ಇದ್ರೆ ಸಿಎಂ ಆಗ್ತೇನೆ ಅಂತಾ ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದರು.
Karnataka Breaking News Live: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ ನಡೆಯುತ್ತಿದೆ. ಮಳೆ ಅಭಾವದಿಂದ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ವಿದ್ಯುತ್ ಕೊರತೆ ನೀಗಿಸಲು ಬೇರೆ ರಾಜ್ಯಗಳಿಂದ ಕಲ್ಲಿದ್ದಲು ಖರೀದಿ ಬಗ್ಗೆ ಇಂಧನ ಇಲಾಖೆ ಚಿಂತಿಸಿದ್ದು ಅಲ್ದೇ ಲೋಡ್ ಶೆಡ್ಡಿಂಗ್ ಆಗ್ತಿರುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಚಾರ್ಜ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.
Karnataka Breaking News Live: ಹಾಸನಾಂಬೆ ದರ್ಶನ ಪಡೆದ ಮುಸ್ಲಿಂ ಕುಟುಂಬ
ನಾಲ್ಕನೇ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಮುಸ್ಲಿಂ ಕುಟುಂಬವೊಂದು ಹಾಸನಾಂಬೆ ದರ್ಶನಕ್ಕೆ ಬಂದಿದೆ. ಸರತಿ ಸಾಲಿನಲ್ಲಿ ನಿಂತು ಹಜೀರ ಎಂಬ ಮಹಿಳೆ ಕುಟುಂಬ ತಾಯಿಯ ದರ್ಶನ ಪಡೆದಿದ್ದಾರೆ. ದೇವನೊಬ್ಬ ನಾಮ ಹಲವು ಎಂಬ ಸಂದೇಶ ಸಾರಿದ್ದಾರೆ. ಹಾಸನಾಂಬೆ ಮೇಲೆ ನಮಗೆ ನಂಬಿಕೆ ಇದೆ. ತುಂಬ ವರ್ಷಗಳಿಂದ ದೇವರ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದು ಈ ಬಾರಿ ದರ್ಶನಕ್ಕೆ ಬರುವ ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Karnataka Breaking News Live: ನಾಳೆ ಹಾಸನಾಂಬ ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ನಾಳೆ ಹಾಸನಾಂಬ ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ 11ಕ್ಕೆ ಬೆಂಗಳೂರಿನಿಂದ ಹಾಸನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಸಿದ್ದರಾಮಯ್ಯ ಮಧ್ಯಾಹ್ನ 12.30ಕ್ಕೆ ಹಾಸನಾಂಬೆ ದರ್ಶನ ಪಡೆಯಲಿದ್ದಾರೆ.
Karnataka Breaking News Live: ಪ್ರತಿಮಾ ಕೊಲೆ ಕೇಸ್ನಲ್ಲಿ ಓರ್ವ ಆರೋಪಿ ವಶ -ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್ಗೆ ಸಂಬಂಧಿಸಿ ಪ್ರತಿಮಾ ಕೊಲೆ ಕೇಸ್ನಲ್ಲಿ ಓರ್ವ ಆರೋಪಿ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಡಿಸಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗ್ತಿದೆ. ನಾಲ್ಕು ವರ್ಷದಿಂದ ಪ್ರತಿಮಾ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ. 10 ದಿನದ ಹಿಂದೆ ಕಿರಣ್ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆರೋಪಿ ಕಿರಣ್ನನ್ನ ಮಹದೇಶ್ವರಬೆಟ್ಟದಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದರು.
Karnataka Breaking News Live: ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ ಬಂಧನ
ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ನನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಹೆಚ್ಸಿ ಸಿದ್ದರಾಮರೆಡ್ಡಿ ಅರೆಸ್ಟ್ ಆಗಿದ್ದಾರೆ. ಬೆಳಗ್ಗೆ ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ ಮಾಡ್ತಿದ್ದ ಸಿದ್ದರಾಮರೆಡ್ಡಿ ಅವರು ಕೇರಳ, ತಮಿಳುನಾಡು ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಸದ್ಯ ಅರೆಸ್ಟ್ ಆಗಿದ್ದು ಸಿದ್ದರಾಮರೆಡ್ಡಿ ಅಮಾನತು ಮಾಡಿ ತನಿಖೆ ನಡೆಸಲಾಗುತ್ತಿದೆ.
Karnataka Breaking News Live: ಚಿತ್ರದುರ್ಗದಲ್ಲಿ ತಂದೆಯನ್ನೇ ಕೊಂದ ಮಗ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ವರವುಕಾವಲು ಗ್ರಾಮದ ಬಳಿ ಪುತ್ರನಿಂದಲೇ ತಂದೆಯ ಹತ್ಯೆಯಾಗಿದೆ. ತಲೆಮೇಲೆ ಕಲ್ಲು ಎತ್ತಿಹಾಕಿ ಹಾಕಿ ಸೂರಯ್ಯ(55) ಹತ್ಯೆಗೈಯಲಾಗಿದೆ. ಕುಡಿದ ಅಮಲಿನಲ್ಲಿ ಪುತ್ರ ಮೋಹನ್ ತಂದೆಯನ್ನೇ ಹತ್ಯೆ ಮಾಡಿದ್ದಾನೆ.
Karnataka Breaking News Live: ಯಾದಗಿರಿಯಲ್ಲಿ ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಸ್ಫೋಟಕ ಮಾಹಿತಿ ಬಹಿರಂಗ
ಯಾದಗಿರಿಯಲ್ಲಿ ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. 16 ಆರೋಪಿಗಳ ವಿಚಾರಣೆ ವೇಳೆ ಆರೋಪಿಗಳ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ಮಾಡಲಾಗಿದ್ದು ಸರ್ಕಾರ ಎಂಬ ಹೆಸರಲ್ಲಿ ಸೇವ್ ಆಗಿದ್ದ ನಂಬರ್ನಿಂದ ವಾಟ್ಸಾಪ್ ಕಾಲ್ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಂಧನಕ್ಕೊಳಗಾದ ಆರೋಪಿ ನಂಬರ್ಗೆ ಪರೀಕ್ಷೆಯ ಹಿಂದಿನ ದಿನ ವಾಟ್ಸಾಪ್ ಆಡಿಯೋ ಕಾಲ್ ಬಂದಿದೆ. ಆಡಿಯೋ ಕಾಲ್ ಮಾಡಿ ಮಾಹಿತಿ ನೀಡ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
Karnataka Breaking News Live: ದೂರದ ದುಬೈನಲ್ಲಿ ಮೈಸೂರು ಯುವಕನ ಸಾಧನೆ
ಮೈಸೂರಿನ ನಾಯ್ಡು ನಗರದ ವಿನೋದ್ ಗೌಡ ಎಂಬುವವರು ದುಬೈನಲ್ಲಿ ಫಿಟ್ನೆಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ದುಬೈನ UAEನಲ್ಲಿ ನಡೆದ ವಿಶ್ವ ದರ್ಜೆಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದಾರೆ. IFBB ಫೆಡರೇಶನ್ ಆಯೋಜಿಸಿದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ವಿಶ್ವದ ಮೂಲೆ ಮೂಲೆಗಳಿಂದ ಫಿಟ್ನೆಸ್ ಮಾಡೆಲ್ ಬಂದಿದ್ದರು. ಫಿಟ್ನೆಸ್ ಮಾಡೆಲ್ ವಿಭಾಗದಲ್ಲಿ ಮೊದಲನೆ ಸ್ಥಾನ, ಬಾಡಿ ಸ್ಟೈಲ್ ಪೋಸಿಂಗ್ ಮೂರನೆಯ ಸ್ಥಾನ, ಮೆನ್ಸ್ ಫಿಸಿಕ್ಸ್ ನಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
Karnataka Breaking News Live: ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚನೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ಬೆಂಗಳೂರಿನಲ್ಲಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ನಗರಕ್ಕೆ ಪ್ರತ್ಯೇಕ ಸಮರ್ಪಿತ ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ವನ್ಯಮೃಗಗಳು ನಾಡಿಗೆ ಬಂದರೆ ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸೂಚಿಸಿದ್ದಾರೆ.
ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚನೆ
Karnataka Breaking News Live: ಬೆಳ್ಳಂಬೆಳಗ್ಗೆ ಕೃಷಿ ಮಾರುಕಟ್ಟೆ ನೂತನ ಪ್ರಾಂಗಣ ಉದ್ಘಾಟಿಸಿದ ಶಾಸಕ ಶಿವಲಿಂಗೇಗೌಡ
ಅರಸೀಕೆರೆ ನಗರದ ಹೊರ ವಲಯದಲ್ಲಿರೊ ಗೀಜಿಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಶಾಸಕ ಶಿವಲಿಂಗೇಗೌಡ ಉದ್ಘಾಟನೆ ಮಾಡಿದರು. ಬಳಿಕ ರೈತರಿಗೆ ಉತ್ತೇಜನ ನೀಡೋ ಸಲುವಾಗಿ ತಾವೇ ಖುದ್ದು ತರಕಾರಿ ಹರಾಜಿನಲ್ಲಿ ಭಾಗಿಯಾದ್ರು. ನೂರು, ನೂರೈವತ್ತು, ನೂರೆಂಬತ್ತು ಎಂದು ಹರಾಜು ಕೂಗಿ ಟೊಮ್ಯಾಟೊ ಮಾರಾಟ ಮಾಡಿದರು. ರೈತರಾಗಿ ತರಕಾರಿ ಮಾರಿ ಜನರ ಮೆಚ್ಚುಗೆ ಗಳಿಸಿದರು.
Karnataka Breaking News Live: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್, ಕಾರು ಚಾಲಕ ವಶಕ್ಕೆ
ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್ ಸಂಬಂಧ 5 ವರ್ಷದಿಂದ ಪ್ರತಿಮಾ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ ಕಿರಣ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಕಿರಣ್ ಗುತ್ತಿಗೆ ಆಧಾರದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಿರಣ್ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಚಾಲಕರಾಗಿದ್ದರು. ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಬಳಿಕ ಕಿರಣ್ ಎಸ್ಕೇಪ್ ಆಗಿದ್ದ.
Karnataka Breaking News Live: ಇಂದಿನಿಂದ 2 ದಿನ ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಬರ ಅಧ್ಯಯನ
ಇಂದಿನಿಂದ 2 ದಿನಗಳ ಕಾಲ ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಬರ ಅಧ್ಯಯನ ನಡೆಸಲಿದೆ. ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಗುಬ್ಬಿ, ಶಿರಾ, ಮಧುಗಿರಿ, ಕೊರಟಗೆರೆ ತಾಲೂಕಿನಲ್ಲಿ ಬರ ಅಧ್ಯಯನ ನಡೆಯಲಿದೆ. ತುಮಕೂರಿನ ಕೆಎಸ್ಎಫ್ಸಿ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಕೈಗಾರಿಕೋದ್ಯಮಿಗಳ ಜೊತೆ ಬಿಎಸ್ವೈ ಸಂವಾದ ನಡೆಸಲಿದ್ದಾರೆ.
Karnataka Breaking News Live: ಕೋಲಾರದಲ್ಲಿ ಅಪ್ರಾಪ್ತ ಬಾಲಕನ ಕೊಲೆ ಖಂಡಿಸಿ ಅಭಿಯಾನ
ಕೋಲಾರದಲ್ಲಿ ಅಪ್ರಾಪ್ತ ಬಾಲಕನ ಕೊಲೆ ಖಂಡಿಸಿ ಅಭಿಯಾನ ಮಾಡಲಾಗುತ್ತಿದೆ. ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೋಲಾರ ರಕ್ಷಿಸಿ, ಯುವಕರನ್ನು ರಕ್ಷಿಸುವಂತೆ ಆಗ್ರಹಿಸಿ ಅಭಿಯಾನ ಮಾಡಲಾಗುತ್ತಿದೆ.
Karnataka Breaking News Live: ಕೋಳಿ ವಾಹನ ಪಲ್ಟಿ ಕೋಳಿಗೆ ಮುಗಿ ಬಿದ್ದ ಜನ
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕು ಉದ್ಬೂರು ಕಾಲೋನಿ ಬಳಿ ಕೋಳಿ ವಾಹನ ಪಲ್ಟಿಯಾಗಿದ್ದು ಕೋಳಿಗೆ ಜನ ಮುಗಿ ಬಿದ್ದ ಘಟನೆ ನಡೆದಿದೆ. ಇನ್ನು ವಾಹನದ ಕೆಳಗೆ ಸಿಲುಕಿ 600ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಮೃತ ಕೋಳಿ ತೆಗೆದುಕೊಂಡು ಹೋಗಲು ಜನರು ಮುಗಿಬಿದ್ದಿದ್ದರು. ಕಿರಿದಾದ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆ ಅಪಘಾತ ಸಂಭವಿಸಿದೆ. ರಾಮಕೃಷ್ಣ ನಾಯ್ಡು ಕೋಳಿ ಫಾರಂಗೆ ಸೇರಿದ ಕೋಳಿಗಳ ಮಾರಣಹೋಮದಿಂದ ಸುಮಾರು 1 ಲಕ್ಷ ನಷ್ಟ ಸಂಭವಿಸಿದೆ.
Karnataka Breaking News Live: ಮಹಾರಾಣಿ ಕಾಲೇಜು ಕ್ಯಾಂಪಸ್ ಅಪಘಾತ, ಚಿಕಿತ್ಸೆ ವೆಚ್ಚ ಭರಿಸಲು ಪರದಾಟ
ಮಹಾರಾಣಿ ಕಾಲೇಜು ಕ್ಯಾಂಪಸ್ನಲ್ಲಿ ಅಕ್ಟೋಬರ್ 7ರಂದು ಭೀಕರ ಅಪಘಾತ ಸಂಭವಿಸಿತ್ತು. ಗಂಗಾವತಿ ಮೂಲದ ವಿದ್ಯಾರ್ಥಿನಿ ಅಶ್ವನಿ 25 ದಿನ ಐಸಿಯೂನಲ್ಲಿ ಚಿಕಿತ್ಸೆ ಪಡೆದು ಬದುಕಿ ಬಂದಿದ್ದಾಳೆ. ಚಿಕಿತ್ಸೆಗೆ 11 ಲಕ್ಷ ಖರ್ಚಾಗಿದ್ದು ವಿವಿ 8 ಲಕ್ಷದ ಚೆಕ್ ನೀಡಿದೆ. ಉಳಿದ ಹಣ ಅಪಘಾತ ಮಾಡಿದ ಉಪನ್ಯಾಸಕ ನಾಗರಾಜ್ ಭರಿಸಬೇಕು. ಆದ್ರೆ ನಾಗರಾಜ್ ಮಾತ್ರ ಕಾಲ್ ರಿಸೀವ್ ಮಾಡ್ತಿಲ್ಲ. ಕೇಳಿದ್ರೆ ದುಡ್ಡಿಲ್ಲ ಅಂತಿದ್ದಾರೆ ಅಂತ ವಿದ್ಯಾರ್ಥಿನಿ ಕುಟುಂಬ ಅಳಲು ತೋಡಿಕೊಂಡಿದೆ.
Karnataka Breaking News Live: ಹಾಸನಾಂಬೆ ದೇವಿ ದರ್ಶನ ಪಡೆಯಲು 4ನೇ ದಿನವೂ ಭಕ್ತಸಾಗರ
ಹಾಸನಾಂಬೆ ದೇವಿ ದರ್ಶನ ಪಡೆಯಲು 4ನೇ ದಿನವೂ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಮುಂಜಾನೆ 5 ಗಂಟೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಇಂದು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 15ರಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಿದೆ.
Published On - Nov 06,2023 8:40 AM