ವಂಚನೆ ಪ್ರಕರಣ: ಮಲೈಕಾ ಸೊಸೈಟಿಗೆ ಸೇರಿದ 60 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಮಾಡಿದ ಇಡಿ

|

Updated on: Jun 09, 2023 | 2:39 PM

ಮಲೈಕಾ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋಪ್ ಸೊಸೈಟಿಯಲ್ಲಿ ನಡೆದ ಹಣಕಾಸು ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಕಂಪನಿಗೆ ಸೇರಿದ 60.44 ಕೋಟಿ ರೂ.ಗಳ ಮೌಲ್ಯದ 52 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ವಂಚನೆ ಪ್ರಕರಣ: ಮಲೈಕಾ ಸೊಸೈಟಿಗೆ ಸೇರಿದ 60 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಮಾಡಿದ ಇಡಿ
ಹಣಕಾಸು ವಂಚನೆ ಪ್ರಕರಣದಡಿ ಮಲೈಕಾ ಸೊಸೈಟಿಗೆ ಸೇರಿದ 60 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
Follow us on

ಬೆಂಗಳೂರು: ಮಲೈಕಾ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋಪ್ ಸೊಸೈಟಿಯಲ್ಲಿ (Malaika Multi-State Co-operative Credit Society) ನಡೆದ ಹಣಕಾಸು ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (Enforcement Directorate – ED) ಕಂಪನಿಗೆ ಸೇರಿದ 60.44 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಪಿಎಂಎಲ್ಎ 2002 ರ ಅಡಿಯಲ್ಲಿ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಮತ್ತು ಅವರ ಸಹವರ್ತಿಗಳಿಗೆ ಸೇರಿದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿನ ಫ್ಲ್ಯಾಟ್​ಗಳು, ಶಾಪ್​ಗಳು, ಜಮೀನುಗಳು ಒಳಗೊಂಡಂತೆ 60.44 ಕೋಟಿ ರೂ.ಗಳ ಮೌಲ್ಯದ 52 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಗಿಲ್ಬರ್ಟ್ ಬ್ಯಾಪ್ಟಿಸ್ಟ್, ಮಾರ್ಸೆಲಿನ್ ಬ್ಯಾಪ್ಟಿಸ್ಟ್ ಎಂಬವರು ಮಲೈಕಾ ಮಲ್ಟಿ-ಸ್ಟೇಟ್ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ (ಎಂಎಂಸಿಸಿಎಸ್) ಅನ್ನು 2010 ರಲ್ಲಿ ಸ್ಥಾಪಿಸಿದ್ದರು. ಹೂಡಿಕೆದಾರರಿಗೆ ಉತ್ತಮ ಆದಾಯದ ಭರವಸೆ ನೀಡಿ ಉಳಿತಾಯವನ್ನು ಬಹು ಯೋಜನೆಗಳಲ್ಲಿ ಠೇವಣಿ ಮಾಡಲು ವ್ಯವಸ್ಥಿತವಾಗಿ ಆಮಿಷ ಒಡ್ಡಲಾಗಿತ್ತು. ಆದರೆ, ಠೇವಣಿಗಳನ್ನು ಸುರಕ್ಷಿತ ವ್ಯವಹಾರಗಳು ಅಥವಾ ಸಾಧನಗಳಲ್ಲಿ ಹೂಡಿಕೆ ಮಾಡುವ ಬದಲು ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಬಹುಪಾಲು ಹಣವನ್ನು ತನ್ನ ಸ್ವಂತ ವ್ಯಾಪಾರ ಉದ್ಯಮಗಳಿಗೆ ಬಳಕೆ ಮಾಡಿದ್ದರು ಎಂದು ಇಡಿ ಹೇಳಿದೆ. ಈ ವಂಚನೆಯು 350 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ED Raid: ಎಸ್​ಬಿಐಗೆ 113 ಕೋಟಿ ರೂ ಸಾಲ ವಂಚನೆ: ಬೆಂಗಳೂರಿನ ಭಾರತ್ ಇನ್​ಫ್ರಾ ಕಂಪನಿ ಮೇಲೆ ಇಡಿ ರೇಡ್

MMCCS ನಿಂದ ಪಡೆದ ಹೂಡಿಕೆಯಿಂದ ನಡೆಸಲ್ಪಡುವ ಮಲೈಕಾ ಅಪ್ಲೈಯನ್ಸ್ ಪ್ರೈವೇಟ್ ಲಿಮಿಟೆಡ್ (MAPL), ಯಸೋಮಾ ಇಂಡಸ್ಟ್ರೀಸ್, ಯಸೋಮಾ ವೆಡ್ಡಿಂಗ್ ಸೀರೆಗಳು ಮತ್ತು ಮಲೈಕಾ ಸ್ಟಾರ್‌ಸಿಟಿ ಪ್ರಾಜೆಕ್ಟ್ ಇತ್ಯಾದಿಗಳ ಹೆಸರಿನಲ್ಲಿ ವಿವಿಧ ವ್ಯವಹಾರಗಳನ್ನು ತೆರೆಯಲಾಗಿದೆ ಎಂದು ಇಡಿ ಹೇಳಿದೆ. MMCCS ನ ಹಣಕಾಸು ಲೆಕ್ಕ ಪರಿಶೋಧಕರು ವಾರ್ಷಿಕ ಆವರ್ತಕ ಲೆಕ್ಕಪರಿಶೋಧನೆಯ ಸಮಯದಲ್ಲಿ ಹಲವಾರು ಅಕ್ರಮಗಳನ್ನು ಎತ್ತಿ ತೋರಿಸಿದ್ದರು.

ಸೊಸೈಟಿಯು ಮುಂಬೈ, ಗೋವಾ ಮತ್ತು ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಮಂಗಳೂರು ಮತ್ತು ಸುತ್ತಮುತ್ತ ಸುಮಾರು 800 ಕ್ಕೂ ಹೆಚ್ಚು ಹೂಡಿಕೆದಾರರಿದ್ದರು. ಬಿ.ಸಿ.ರೋಡ್, ತೊಕ್ಕುಟ್ಟು, ಮೂಡುಬಿದಿರೆ, ಪುತ್ತೂರು, ಸುಳ್ಯ, ಚಿಲಿಂಬಿ, ಬೆಂದೂರಿನಂತಹ ಮಲೈಕಾ ಶಾಪ್​ಗಳಿದ್ದವು. ಸುಮಾರು 40 ಕೋಟಿ ರೂಪಾಯಿಗಳಷ್ಟು ಹೂಡಿಕೆದಾರರಿಗೆ ವಂಚಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹೂಡಿಕೆದಾರರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದಾರೆ. ತಮ್ಮ ನಿವೃತ್ತಿ ಉದ್ದೇಶಗಳಿಗಾಗಿ ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಹೂಡಿಕೆ ಮಾಡಿದ್ದರು.

ವಂಚನೆಗೊಳಗಾದ ಮಂಗಳೂರಿನ ಹೂಡಿಕೆದಾರರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಅಪರಾಧ ವಿಭಾಗದಲ್ಲಿ ಎಫ್ಐಆರ್ ದಾಖಲಿಸಿದ್ದರು. ಮಹಾರಾಷ್ಟ್ರದ ಮೀರಾ ರೋಡ್ ಪೊಲೀಸ್ ಠಾಣೆ ದಾಖಲಾದ ಎಫ್‌ಐಆರ್ ಮತ್ತು ಎರಡು ಚಾರ್ಜ್ ಶೀಟ್‌ಗಳನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಪಿಎಂಎಲ್‌ಎ ಅಡಿ ತನಿಖೆಯನ್ನು ಪ್ರಾರಂಭಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ