ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಬಿಗ್ ಗಿಫ್ಟ್: ಕರಾವಳಿ-ಮಲೆನಾಡಿನ ಪ್ರಸಿದ್ಧ ಕ್ಷೇತ್ರಗಳಿಗೆ ವಿಶೇಷ ‘ದಸರಾ ಪ್ಯಾಕೇಜ್ ಟೂರ್’ ಆರಂಭ

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ನಾಡಹಬ್ಬ ದಸರಾ ಪ್ರಯುಕ್ತ ಭಕ್ತಾದಿಗಳಿಗೆ ವಿಶೇಷ ಪ್ಯಾಕೇಜ್ ಟೂರ್ ಸೇವೆಗಳನ್ನು ಪ್ರಕಟಿಸಿದೆ. ಅಕ್ಟೋಬರ್ 11 ರಿಂದ 20 ರವರೆಗೆ ಕರಾವಳಿ, ಮಲೆನಾಡು ಮತ್ತು ಕೊಡಗು ಪ್ರದೇಶಗಳ ಪ್ರಸಿದ್ಧ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಈ ಪ್ಯಾಕೇಜ್‌ಗಳು ಅವಕಾಶ ಕಲ್ಪಿಸಿವೆ. ನವದುರ್ಗಾ, ತಲಕಾವೇರಿ, ಕೊಲ್ಲೂರು, ಸಿಗಂದೂರು ಮತ್ತು ಶೃಂಗೇರಿ ಪ್ಯಾಕೇಜ್‌ಗಳು ಲಭ್ಯವಿದ್ದು, ksrtc.in ಮೂಲಕ ಮುಂಗಡ ಬುಕಿಂಗ್ ಮಾಡಬಹುದು.

ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಬಿಗ್ ಗಿಫ್ಟ್: ಕರಾವಳಿ-ಮಲೆನಾಡಿನ ಪ್ರಸಿದ್ಧ ಕ್ಷೇತ್ರಗಳಿಗೆ ವಿಶೇಷ ದಸರಾ ಪ್ಯಾಕೇಜ್ ಟೂರ್ ಆರಂಭ
ಸಾಂದರ್ಭಿಕ ಚಿತ್ರ
Image Credit source: Google

Updated on: Oct 02, 2026 | 10:35 AM

ಮಂಗಳೂರು, ಅ.2: ನಾಡಹಬ್ಬ ನವರಾತ್ರಿ ಹಾಗೂ ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಮಂಗಳೂರು ವಿಭಾಗವು ಬಿಗ್ ಆಫರ್ ನೀಡಿದೆ. ಕರಾವಳಿ ಹಾಗೂ ಮಲೆನಾಡಿನ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳನ್ನು ಒಳಗೊಂಡ ‘ದಸರಾ ವಿಶೇಷ ಪ್ಯಾಕೇಜ್ ಟೂರ್’ ಸೇವೆಗಳನ್ನು ಪ್ರಕಟಿಸಲಾಗಿದೆ.

ಈ ವಿಶೇಷ ಬಸ್ ಸೇವೆಗಳು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಪ್ರತಿದಿನ ಕಾರ್ಯಾಚರಣೆ ನಡೆಸಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ ಸೀಟು ಕಾಯ್ದಿರಿಸುವಿಕೆಗೆಅವಕಾಶ ಕಲ್ಪಿಸಲಾಗಿದೆ.

ವಿಶೇಷ ಪ್ಯಾಕೇಜ್ ಟೂರ್‌ಗಳ ಸಂಪೂರ್ಣ ವಿವರ ಮತ್ತು ಪ್ರಯಾಣ ದರ:

1. ಮಂಗಳೂರು ದಸರಾ ನವದುರ್ಗಾ ದರ್ಶನ ಪ್ಯಾಕೇಜ್

ಸಂಚಾರ ಸಮಯ: ಬೆಳಿಗ್ಗೆ 8:00 ರಿಂದ ರಾತ್ರಿ 8:30 ರವರೆಗೆ (ಮಂಗಳೂರು ಬಸ್ ನಿಲ್ದಾಣದಿಂದ ಆರಂಭ).

ದರ್ಶನ ಪಡೆಯುವ ದೇವಾಲಯಗಳು: ಮರೋಳಿ ಸೂರ್ಯನಾರಾಯಣ ದೇವಾಲಯ, ಬೋಳಾರ ಶ್ರೀ ಮಾರಿಯಮ್ಮ ದೇವಾಲಯ, ಶ್ರೀ ಮಂಗಳಾದೇವಿ ದೇವಾಲಯ, ಪೊಲಲಿ ಶ್ರೀ ರಾಜರಾಜೇಶ್ವರಿ ದೇವಾಲಯ, ಹೊಸನಾಡು ಕೊಡಿಯಾಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ (ಮಧ್ಯಾಹ್ನದ ಊಟ), ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಾಲಯ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯ (ಮುಲ್ಕಿ), ಸಸಿಹಿತ್ಲು ಶ್ರೀ ಭಗವತಿ ದೇವಾಲಯ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಶ್ರೀ ಉರ್ವ ಮಾರಿಯಮ್ಮ ದೇವಾಲಯ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ (ನವದುರ್ಗಾ ದರ್ಶನ).

ಪ್ರಯಾಣ ದರ: ಹಿರಿಯರಿಗೆ/ಹಿರಿಯ ನಾಗರಿಕರಿಗೆ 500, ಮಕ್ಕಳಿಗೆ 400 ರೂ.

2. ಮಂಗಳೂರು – ತಲಕಾವೇರಿ – ಭಾಗಮಂಡಲ ಪ್ಯಾಕೇಜ್

ಸಂಚಾರ ಸಮಯ: ಬೆಳಿಗ್ಗೆ 7:00 ರಿಂದ ರಾತ್ರಿ 9:30 ರವರೆಗೆ.

ಪ್ರಮುಖ ತಾಣಗಳು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ತಲಕಾವೇರಿ ದೇವಾಲಯ, ಶ್ರೀ ಭಾಗಂಡೇಶ್ವರ ಸ್ವಾಮಿ ದೇವಾಲಯ, ತ್ರಿವೇಣಿ ಸಂಗಮ (ಭಾಗಮಂಡಲ), ಅಬ್ಬಿ ಜಲಪಾತ ಹಾಗೂ ರಾಜಾಸೀಟ್ (ಮಡಿಕೇರಿ).

ಪ್ರಯಾಣ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.

ಇದನ್ನೂ ಓದಿ: ಗಾಂಧೀಜಿ, ಶಾಸ್ತ್ರಿಯವರಿಗೆ ಮೋದಿ ನಮನ: ‘ವಿಕಸಿತ ಭಾರತ’ ನಿರ್ಮಾಣಕ್ಕೆ ಬಾಪು ಸಂದೇಶ ದಾರಿ

3. ಮಂಗಳೂರು – ಕೊಲ್ಲೂರು ಪ್ಯಾಕೇಜ್

ಸಂಚಾರ ಸಮಯ: ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ.

ಪ್ರಮುಖ ತಾಣಗಳು: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಾಲಯ, ಕಾಪು ಮಾರಿಯಮ್ಮ ದೇವಾಲಯ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯ, ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯ (ಮಧ್ಯಾಹ್ನದ ಊಟ), ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ಮತ್ತು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯ.

ಪ್ರಯಾಣ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.

4. ಮಂಗಳೂರು – ಸಿಗಂದೂರು ಪ್ಯಾಕೇಜ್

ಸಂಚಾರ ಸಮಯ: ಬೆಳಿಗ್ಗೆ 7:00 ರಿಂದ ರಾತ್ರಿ 7:30 ರವರೆಗೆ.

ಪ್ರಮುಖ ತಾಣಗಳು: ಕುಂದಾಪುರ, ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯ (ಲಾಂಚ್ ಪ್ರಯಾಣ) ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ.

ಪ್ರಯಾಣ ದರ: ಹಿರಿಯರಿಗೆ 700, ಮಕ್ಕಳಿಗೆ 600 ರೂ.

5. ಮಂಗಳೂರು – ಶೃಂಗೇರಿ ಪ್ಯಾಕೇಜ್

ಸಂಚಾರ ಸಮಯ: ಬೆಳಿಗ್ಗೆ 8:00 ರಿಂದ ರಾತ್ರಿ 7:30 ರವರೆಗೆ.

ಪ್ರಮುಖ ತಾಣಗಳು: ಕೊಡಿಯಾಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ, ಹರಿಹರಪುರ ಮಠ (ಮಧ್ಯಾಹ್ನದ ಊಟ), ಕಿಗ್ಗಾದ ಶ್ರೀ ಋಷ್ಯಶೃಂಗೇಶ್ವರ ದೇವಾಲಯ.

ಪ್ರಯಾಣ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.

ಬುಕಿಂಗ್ ಹೇಗೆ?

ದಸರಾ ಹಬ್ಬದ ಸಮಯದಲ್ಲಿ ಕರಾವಳಿ ಹಾಗೂ ಕೊಡಗು, ಮಲೆನಾಡಿನ ದೇವಸ್ಥಾನಗಳಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ, ಸಾರ್ವಜನಿಕರು ksrtc.in ಅಧಿಕೃತ ವೆಬ್‌ಸೈಟ್ ಅಥವಾ ಕೆಎಸ್‌ಆರ್‌ಟಿಸಿ ಕೌಂಟರ್‌ಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದು ಸಂಸ್ಥೆಯ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 am, Fri, 2 October 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us