ದಕ್ಷಿಣ ಕನ್ನಡ: ಮುಲ್ಕಿ ಬಳಿ ನಿಯಂತ್ರಣ ಕಳೆದುಕೊಂಡು ಫುಟ್​ಪಾತ್​ಗೆ ನುಗ್ಗಿದ ಲಾರಿ; ಆಟೋ, ಬೈಕ್​ಗೆ ಡಿಕ್ಕಿ

| Updated By: Rakesh Nayak Manchi

Updated on: Dec 07, 2023 | 2:48 PM

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಜಿಲ್ಲೆಯ ಮುಲ್ಕಿ ತಾಲೂಕಿನಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಬೈಕ್ ಹಾಗೂ ಆಟೋಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ಪಲ್ಟಿಯಾಗಿದ್ದು, ಬೈಕ್ ಸವಾರನಿಗೆ ಹಾಗೂ ಟ್ರಾಫಿಕ್​​ ಡ್ಯೂಟಿ ಮೇಲಿದ್ದ ಮಹಿಳಾ ಪೊಲೀಸ್ ಪೇದೆಗೆ ಗಾಯಗಳಾಗಿವೆ.

ದಕ್ಷಿಣ ಕನ್ನಡ: ಮುಲ್ಕಿ ಬಳಿ ನಿಯಂತ್ರಣ ಕಳೆದುಕೊಂಡು ಫುಟ್​ಪಾತ್​ಗೆ ನುಗ್ಗಿದ ಲಾರಿ; ಆಟೋ, ಬೈಕ್​ಗೆ ಡಿಕ್ಕಿ
ಮುಲ್ಕಿಯಲ್ಲಿ ನಡೆದ ಸರಣಿ ಅಪಘಾತ
Follow us on

ಮಂಗಳೂರು, ಡಿ.7: ನಿಯಂತ್ರಣ ಕಳೆದುಕೊಂಡ ಲಾರಿಯೊಂದು ರಸ್ತೆ ವಿಭಜಕದ ಮೇಲೆ ಹತ್ತಿ ಆಟೋ, ಬೈಕ್​ಗೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮುಲ್ಕಿ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಟ್ರಾಫಿಕ್​​ ಡ್ಯೂಟಿ ಮೇಲಿದ್ದ ಮಹಿಳಾ ಪೊಲೀಸ್​​ ಗೀತಾ ಸತೀಶ್ ಎಂಬವರ ಕೈಗೆ, ಬೈಕ್ ಸವಾರ, ಆಟೋ ಚಾಲಕ, ಆಟೋದಲ್ಲಿದ್ದ ಜನರಿಗೆ ಗಾಯಗಳಾಗಿವೆ.

ಲಾರಿ ಹೊಡೆತಕ್ಕೆ ಲಾಡ್ಜ್​​​ ಒಂದರಲ್ಲಿ ವಾಚ್​ಮೇನ್​​ ಆಗಿ ಕೆಲಸ ನಿರ್ವಹಿಸುತ್ತಿದ್ದ ಬೈಕ್ ಸವಾರ ಸಂಗಪ್ಪ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಮಗಳನ್ನು ಬಸ್​​ ನಿಲ್ದಾಣಕ್ಕೆ ಬಿಡಲು ಹೋಗಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಸಂಗಪ್ಪ ಅವರ ಮಗಳು ಸವಿತಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮುಂದುವರಿದ ಧರ್ಮ ದಂಗಲ್: ಕುಡುಪು ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಸ್ಥಳ ನಿರಾಕರಣೆ

ನಿಯಂತ್ರಣ ಕಳೆದುಕೊಂಡಿದ್ದ ಲಾರಿ ಡಿವೈಡರ್​ ಮೇಲೆ ಹತ್ತಿ ಪಕ್ಕದ ರಸ್ತೆಗೆ ಬಂದು ಫುಟ್​ಪಾತ್​ ಮೇಲೆ ಕುಳಿತಿದ್ದ ಕಾರ್ಮಿಕರತ್ತ ನುಗ್ಗಿ ಆಟೋ ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಮುಲ್ಕಿ ಪೊಲೀಸರು ಲಾರಿ ಚಾಲಕ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಖಾಸಗಿ ಬಸ್ ಪಲ್ಟಿ, ಇಬ್ಬರು ಸಾವು, ಹಲವರು ಚಿಂತಾಜನಕ

ಚಿಕ್ಕಬಳ್ಳಾಪುರ: ಮರಕ್ಕೆ ಡಿಕ್ಕಿ ಹೊಡೆದು ಖಾಸಗಿ ಬಸ್ ಉರುಳಿ ಬಿದ್ದ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಕಾಲಕ್ಕೆ ಌಂಬುಲೆನ್ಸ್​​ ಬಾರದ ಹಿನ್ನೆಲೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಗಾಯಾಳುಗಳು ಕೆಲ ಗಂಟೆಗಳ ಕಾಲ ರಸ್ತೆಯಲ್ಲೇ ನರಳಾಡಿದರು. ಬೈಕ್, ಆಟೋ, ಕಾರುಗಳ ಮೂಲಕ ಗಾಯಾಳುಗಳನ್ನು ಬಾಗೇಪಲ್ಲಿ ಆಸ್ಪತ್ರಗೆ ಕೊಂಡೊಯ್ಯಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ