Mangaluru News: ಚೀನಾದ ಆ್ಯಪ್‌ಗಳಿಂದ ಸಾಲ ಪಡೆಯಬೇಡಿ; ಮಂಗಳೂರು ಪೊಲೀಸ್ ಆಯುಕ್ತರಿಂದ ಎಚ್ಚರಿಕೆ

| Updated By: ಗಣಪತಿ ಶರ್ಮ

Updated on: Jul 22, 2023 | 7:00 PM

ಸಂತ್ರಸ್ತರು ಸರಿಯಾಗಿ ವಿವರ ತಿಳಿಯದೇ ಇಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ತೊಂದರೆಗೆ ಸಿಲುಕುತ್ತಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಬೇಕು ಎಂದು ಜೈನ್ ಹೇಳಿದ್ದಾರೆ.

Mangaluru News: ಚೀನಾದ ಆ್ಯಪ್‌ಗಳಿಂದ ಸಾಲ ಪಡೆಯಬೇಡಿ; ಮಂಗಳೂರು ಪೊಲೀಸ್ ಆಯುಕ್ತರಿಂದ ಎಚ್ಚರಿಕೆ
ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್
Follow us on

ಮಂಗಳೂರು: ಸಾಲ ನೀಡುವ ಚೀನಾ ಮೊಬೈಲ್ ಅಪ್ಲಿಕೇಶನ್‌ಗಳ (Chinese Lending Apps) ಬಗ್ಗೆ ಜಾಗರೂಕರಾಗಿರಿ ಎಂದು ಮಂಗಳೂರು ಪೊಲೀಸ್ ಆಯುಕ್ತ (Mangaluru Police Commissioner) ಕುಲದೀಪ್ ಕುಮಾರ್ ಜೈನ್ (Kuldeep Kumar Jain) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜಾಹೀರಾತು ನೀಡುವ ಸಾಲದ ಆ್ಯಪ್​​ಗಳಿಂದ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ. ಸಂತ್ರಸ್ತರು ಸರಿಯಾಗಿ ವಿವರ ತಿಳಿಯದೇ ಇಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ ಎಂದು ಜೈನ್ ಹೇಳಿದ್ದಾರೆ.

ಚೀನೀ ಆ್ಯಪ್​ಗಳು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮತ್ತು ಆಕರ್ಷಕ ಮರುಪಾವತಿ ಆಯ್ಕೆಗಳಲ್ಲಿ ಸಾಲಗಳನ್ನು ನೀಡುವುದಾಗಿ ಜಾಹೀರಾತು ನೀಡುತ್ತಿವೆ. ನಂತರ ಜನರನ್ನು ಪತ್ತೆಹಚ್ಚಲಾಗದ ಮೂಲಗಳಿಂದ ಮಾಡಿದ ವೀಡಿಯೊ ಕರೆಗಳು ಮತ್ತು ಇಂಟರ್ನೆಟ್ ಕರೆಗಳ ಮೂಲಕ ಸಾಲದ ಬಲೆಗೆ ಬೀಳಿಸಲಾಗುತ್ತದೆ. ಅವರು ಮಾನ್ಯತೆ ಪಡೆದ ಹಣಕಾಸು ಏಜೆನ್ಸಿಗಳಿಂದ ಸಂವಹನ ನಡೆಸುತ್ತಿದ್ದಾರೆ ಎಂದು ನಂಬಿಸುತ್ತಾರೆ. ನಂತರ ವಂಚಕರು ಸಾಲವನ್ನು ನೀಡುವ ಪ್ರಕ್ರಿಯೆಯ ನೆಪದಲ್ಲಿ ಬ್ಯಾಂಕ್ ಸಂಖ್ಯೆಗಳು, ಭಾವಚಿತ್ರಗಳು ಸೇರಿದಂತೆ ವೈಯಕ್ತಿಕ ವಿವರಗಳನ್ನು ಪಡೆಯುತ್ತಾರೆ. ಅಗತ್ಯವಾದ ಸಾಲದ ಮೊತ್ತವನ್ನು ಬ್ಯಾಂಕ್ ಖಾತೆ ಸಂಖ್ಯೆಗಳಿಗೆ ಜಮಾ ಮಾಡಲಾಗುತ್ತದೆ. ಮೊತ್ತವನ್ನು ಜಮಾ ಮಾಡಿದ ಕ್ಷಣದಿಂದಲೇ ಟ್ರ್ಯಾಪ್ ಮಾಡಲು ಆರಂಭಿಸುತ್ತಾರೆ ಎಂದು ಜೈನ್ ಹೇಳಿದ್ದಾರೆ.

ಸೈಬರ್ ಥಗ್‌ಗಳು ಅಂತಹ ಡಾರ್ಕ್ ನೆಟ್ ಅನ್ನು ನಿರ್ವಹಿಸುತ್ತಾರೆ, ನಂತರ ಸಾಲ ವಸೂಲಾತಿಗಾಗಿ ಸಂತ್ರಸ್ತರ ಕುಟುಂಬಗಳಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸುತ್ತಾರೆ. ಸಾಲದ ಅಪ್ಲಿಕೇಶನ್ ಸಂಸ್ಥೆಗಳು ಜನರ ವೈಯಕ್ತಿಕ ವಿವರಗಳನ್ನು ಪಡೆಯುವ ಮೂಲಕ ಸಾಲವನ್ನು ವಸೂಲಿ ಮಾಡಲು ಮುಂದಾಗುತ್ತವೆ. ಸಂತ್ರಸ್ತರಿಗೆ ಬೆದರಿಕೆ ಹಾಕುತ್ತವೆ. ಅಂತಿಮವಾಗಿ ಸಂತ್ರಸ್ತರು ಸಾಲವಾಗಿ ಪಡೆದಿದ್ದಕ್ಕಿಂತ ಹೆಚ್ಚಿನದನ್ನು ಪಾವತಿಸುತ್ತಾರೆ ಎಂದು ಜೈನ್ ಹೇಳಿದ್ದಾರೆ.

ರುಪೀ ಹಿಯರ್, ಕ್ಯಾಶ್ಮೋ, ಲೆಂಡ್ಕರ್, ಹೋಪೆಲೋನ್, ಪಂಚ್ಲೋನ್, ರಾಕನ್, ಲೋನು ಮತ್ತು ಕ್ಯಾಶ್‌ಫುಲ್ ಚೀನಾ ಸಾಲದ ಆ್ಯಪ್​ಗಳಾಗಿವೆ.

ಇದನ್ನೂ ಓದಿ: ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಚರಣೆ, ಮಾದಕ ವಸ್ತು ಸಹಿತ ಪಿಸ್ತೂಲ್ ಹೊಂದಿದ್ದ ಡ್ರಗ್ ಪೆಡ್ಲರ್​ಗಳ ಬಂಧನ

ಕೇಂದ್ರ ಸರ್ಕಾರವಿ ಈಗಾಗಲೇ ಅಂತಹ ಸುಮಾರು 600 ಸಾಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಆದಾಗ್ಯೂ ಪ್ರತಿದಿನ ಹೊಸ ಹೊಸ ವಂಚನೆಯ ಸಾಲದ ಅಪ್ಲಿಕೇಶನ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ವಂಚನೆಯ ದಾರಿಯನ್ನು ಕಂಡುಕೊಳ್ಳುತ್ತದೆ. ನಾಗರಿಕರು ಅಂತಹ ಅಪ್ಲಿಕೇಶನ್‌ಗಳನ್ನು ತಮ್ಮ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಬದಲಿಗೆ ಮಾನ್ಯತೆ ಪಡೆದ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾತ್ರ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಆ್ಯಪ್‌ಗಳು ಕಂಡುಬಂದರೆ ದಯವಿಟ್ಟು ಪೊಲೀಸರ ಗಮನಕ್ಕೆ ತನ್ನಿ. ನಿಮ್ಮ ಅರಿವು ಇತರರಿಗೆ ಪ್ರಯೋಜನಕಾರಿಯಾಗಬಹುದು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ