Moral Policing: ಮಂಗಳೂರಿನಲ್ಲಿ ನೈತಿಕ ಪೊಲೀಸ್ ​ಗಿರಿ: ಇಬ್ಬರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2023 | 9:16 PM

ಭಿನ್ನ ಕೋಮಿನ ವಿದ್ಯಾರ್ಥಿಗಳೊಂದಿಗೆ 4 ವಿದ್ಯಾರ್ಥಿನಿಯರು ಪಣಂಬೂರು ಬೀಚ್​ಗೆ ಒಟ್ಟಿಗೆ ವಿಹಾರಕ್ಕೆ ತೆರಳಿದ್ದಾಗ ಬೈಕ್​ನಲ್ಲಿ ಹಿಂಬಾಲಿಸಿ ಬಂದ ತಂಡ ಹಲ್ಲೆ ನಡೆಸಿರುವಂತಹ ಘಟನೆ ಶನಿವಾರ ನಗರದ ಬಿಜೈ ಕಾಪಿಕಾಡ್ ಎಂಬಲ್ಲಿ ನಡೆದಿದೆ. ಬಳಿಕ ಓರ್ವ ವಿದ್ಯಾರ್ಥಿಯ ದೂರಿನ ಅನ್ವಯ ಇಬ್ಬರನ್ನು ಬಂಧಿಸಲಾಗಿದೆ.

Moral Policing: ಮಂಗಳೂರಿನಲ್ಲಿ ನೈತಿಕ ಪೊಲೀಸ್ ​ಗಿರಿ: ಇಬ್ಬರ ಬಂಧನ
ಬಂಧಿತರು
Follow us on

ಮಂಗಳೂರು, ಜುಲೈ 22: ಪಣಂಬೂರು ಬೀಚ್​ಗೆ ತೆರಳಿದ್ದ ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಹಲ್ಲೆ ಮಾಡಿ ನೈತಿಕ ಪೊಲೀಸ್​ ಗಿರಿ (Moral Policing) ಪ್ರದರ್ಶಿಸಿದ ಆರೋಪದಡಿ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಳಪೆ ನಿವಾಸಿ ದೀಕ್ಷಿತ್(32), ಲಾಯ್ಡ್ ಪಿಂಟೋ(32) ಬಂಧಿತರು. ಆರೋಪಿಗಳಿಂದ ಮೊಬೈಲ್, ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಎಜೆ ಕಾಲೇಜಿನ ಹಾಸ್ಪಿಟಲ್ ಮ್ಯಾನೇಜ್ಮೆಂಟ್​ ಕೋರ್ಸ್​ನ 6 ವಿದ್ಯಾರ್ಥಿಗಳು ಪಣಂಬೂರು ಬೀಚ್​ಗೆ ಒಟ್ಟಿಗೆ ವಿಹಾರಕ್ಕೆ ತೆರಳಿದ್ದಾರೆ. ಇದರಲ್ಲಿ ಭಿನ್ನ ಕೋಮಿನ ವಿದ್ಯಾರ್ಥಿಗಳ ಜೊತೆ ನಾಲ್ವರು ವಿದ್ಯಾರ್ಥಿನಿಯರು ಇದ್ದರು.

ಇದನ್ನೂ ಓದಿ: Mangaluru News: ಚೀನಾದ ಆ್ಯಪ್‌ಗಳಿಂದ ಸಾಲ ಪಡೆಯಬೇಡಿ; ಮಂಗಳೂರು ಪೊಲೀಸ್ ಆಯುಕ್ತರಿಂದ ಎಚ್ಚರಿಕೆ

ಈ ವೇಳೆ ಭಿನ್ನ ಕೋಮಿನ ವಿದ್ಯಾರ್ಥಿಗಳನ್ನು ಹಿಂಬಾಲಿಸಿಕೊಂಡು ಬಂದ ಬಂಧಿತರು ಬಿಜೈ ಕಾಪಿಪಾಡ್​ನಲ್ಲಿ ಮೊಹಮ್ಮದ್ ಹಫೀಜ್​ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಗಾಯಾಳು ವಿದ್ಯಾರ್ಥಿ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಇಬ್ಬರು ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ.

ಬೆಣ್ಣೆ ನಗರಿಯಲ್ಲಿ ನೈತಿಕ ಪೊಲೀಸ್ ಗಿರಿ: ನಟ ದುನಿಯಾ ವಿಜಿ ಅಭಿಮಾನಿ ಸಂಘದ ಮಾಜಿ ಅಧ್ಯಕ್ಷ ಬಂಧನ

ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಇತ್ತೀಚಿಗೆ ನೈತಿಕ ಪೊಲೀಸ್ ಗಿರಿ ಹೆಚ್ಚಾಗುತ್ತಿದೆ. ಇದೇ ನೈತಿಕ ಪೊಲೀಸ್ ಗಿರಿ ಮಾಡಿದ್ದಕ್ಕಾಗಿ ನಟ ದುನಿಯಾ ವಿಜಿ ಅಭಿಮಾನಿ ಸಂಘದ ಮಾಜಿ ಅಧ್ಯಕ್ಷ ದೊಡ್ಡೇಶ್ ಹಾಗೂ ಆತನ ಸ್ನೇಹಿತ ನಾಗರಾಜನನ್ನ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಪ್ರತಿಕೂಲ ಹವಾಮಾನ; ಸಚಿವ ದಿನೇಶ್ ಗುಂಡೂರಾವ್ ಪ್ರಯಾಣಿಸುತ್ತಿದ್ದ ವಿಮಾನ ಮಂಗಳೂರಿನ ಬದಲು ಕಣ್ಣೂರಲ್ಲಿ ಲ್ಯಾಂಡಿಂಗ್

ಭಿನ್ನ ಕೋಮಿನ ಯುವಕರ ಜೊತೆ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಕ್ಕೆ ದಲಿತ ಯುವತಿ ಬಂದಿದ್ದಳು. ಇದನ್ನು ಕಂಡ ದೊಡ್ಡೇಶ್ ಹಾಗೂ ಆತನ ಸ್ನೇಹಿತರಿಂದ ಯುವಕರಿಗೆ ಥಳಿಸಿದ್ದರು. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೊಡ್ಡೇಶ್​ ಸೇರಿದಂತೆ ಇಬ್ಬರ ವಿರುದ್ದ ನೈತಿಕ ಪೊಲೀಸ್ ಗಿರಿ ಹಾಗೂ ಜಾತಿ ನಿಂದನೆ ದೂರು ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:52 pm, Sat, 22 July 23