RSS ಮುಖಂಡ ಶರತ್ ಮಡಿವಾಳ ಹತ್ಯೆಗೈದಿದ್ದ ಹಂತಕರಿಗೆ ಆಶ್ರಯ ನೀಡಿದ್ದ ನೆಟ್ಟಾರು ಕೊಲೆ ಆರೋಪಿ ತುಫೈಲ್: ಸ್ಪೋಟಕ ಮಾಹಿತಿ ಬಹಿರಂಗ

|

Updated on: Mar 06, 2023 | 3:10 PM

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಎಮ್.ಹೆಚ್ ತುಫೈಲ್​​​​ನ್ನು ಎನ್​​ಐಎ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದು, ವಿಚಾರಣೆ ವೇಳೆ ಸ್ಪೋಟಕ ಅಂಶಗಳನ್ನು ಬಾಯಿ ಬಿಟ್ಟಿದ್ದಾನೆ.

RSS ಮುಖಂಡ ಶರತ್ ಮಡಿವಾಳ ಹತ್ಯೆಗೈದಿದ್ದ ಹಂತಕರಿಗೆ ಆಶ್ರಯ ನೀಡಿದ್ದ ನೆಟ್ಟಾರು ಕೊಲೆ ಆರೋಪಿ ತುಫೈಲ್: ಸ್ಪೋಟಕ ಮಾಹಿತಿ ಬಹಿರಂಗ
ಶರತ್​ ಮಸಿವಾಳ (ಎಡಚಿತ್ರ) ಆರೋಪಿ ಎಮ್.ಹೆಚ್ ತುಫೈಲ್​​​​ (ಬಲಚಿತ್ರ)
Follow us on

ಮಂಗಳೂರು: ಪ್ರವೀಣ್ ನೆಟ್ಟಾರು (Praveen Nettaru) ಕೊಲೆ ಪ್ರಕರಣದ ಆರೋಪಿ ಎಮ್.ಹೆಚ್ ತುಫೈಲ್​​​​ನ್ನು ಎನ್​​ಐಎ (NIA) ಅಧಿಕಾರಿಗಳು ಈಗಾಗಲೇ ಬಂಧಿಸಿದ್ದು, ವಿಚಾರಣೆ ವೇಳೆ ಸ್ಪೋಟಕ ಅಂಶಗಳನ್ನು ಬಾಯಿ ಬಿಟ್ಟಿದ್ದಾನೆ. ವಿಚಾರಣೆಯ ಪ್ರಮುಖ ಅಂಶಗಳು ಟಿವಿ9ಗೆ NIA ಮೂಲಗಳಿಂದ ಮಾಹಿತಿ ದೊರೆತಿದೆ. 2017 ರ ಜುಲೈ 4 ರಂದು ಆರ್.ಎಸ್.ಎಸ್ ಮುಖಂಡ ಶರತ್ ಮಡಿವಾಳನನ್ನು (Sharath Madiwala) ಹತ್ಯೆ ಮಾಡಿದ್ದ, ಹತಂಕರಿಗೆ ತುಫೈಲ್ ಆಶ್ರಯ ನೀಡದ್ದನಂತೆ. ಈ ಬಗ್ಗೆ ಅಲ್ಲದೆ ತುಫೈಲ್ ಕೊಡಗಿನ ಕುಟ್ಟಪ್ಪ, ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈಗ ಸಿಕ್ಕಿ ಬಿದ್ದಿದ್ದಾನೆ.

ತುಫೈಲ್​ಗೆ ಪಿಎಫ್ಐನ ಅಂಗ ಸಂಘಟನೆ ಅಸಲ್ಟ್​​ನಲ್ಲಿ ಹಾರ್ಡ್ ಕೋರ್ ಜವಾಬ್ದಾರಿ ಇದೆ. ಈತ ಅಸಲ್ಟ್ ಗ್ರೂಪ್​ನ ಅಲ್ ಇಂಡಿಯಾ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದನು. ಈ ಹಿನ್ನೆಲೆ ಈತ ದೇಶಾದ್ಯಂತ ತಿರುಗಿ ಹಲ್ಲೆ, ಹತ್ಯೆ, ಕತ್ತಿವರಸೆ ಮತ್ತು ಬಂದೂಕು ತರಬೇತಿ ನೀಡುತ್ತಿದ್ದನು. ಅಪರಾಧ ನಡೆಯುವ ಮುನ್ನ, ನಡೆದ ನಂತರ ಮತ್ತು ಬಳಿಕ ಹೇಗೆ ಇರಬೇಕು ಎನ್ನುವುದರ ಕುರಿತು ತರಬೇತಿ ನೀಡುತ್ತಿದ್ದನು.

NIA ಮೋಸ್ಟ್ ವಾಂಟೆಡ್ ಆಗಿದ್ದ ಬಂಧಿತ ತುಫೈಲ್ ಹಿಸ್ಟರಿ ಇಲ್ಲಿದೆ

ಆರೋಪಿ ತುಫೈಲ್, ಎನ್​ಐಎ ಮೋಸ್ಟ್ ವಾಂಟೆಡ್ ಆಗಿದ್ದದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗೆ ಕೊಪ್ಪದ ಮನೆಯಲ್ಲಿ ಆಶ್ರಯ ನೀಡಿದ್ದ. ಜೊತೆಗೆ 2016ರ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ ಹಾಗೂ 2012 ರಲ್ಲಿ ನಡೆದಿದ್ದ ವಿಹೆಚ್​ಪಿ ಮುಖಂಡ ಗಣೇಶ್ ಹತ್ಯೆ ಯತ್ನ ಪ್ರಕರಣದ ಆರೋಪಿಯೂ ಆಗಿದ್ದಾನೆ. ನಿಷೇಧಿತ ಪಿಎಫ್​ಐನ ಹಿಟ್ ಟೀಮ್​ನಲ್ಲಿ ಬಹಳ ಪ್ರಮುಖವಾದ ಪಾತ್ರವಹಿಸುತ್ತಿದ್ದನು. ಬೇರೆ ಧರ್ಮದ ಮುಖಂಡರನ್ನ ಗುರುತಿಸಿ ಹತ್ಯೆ ಮಾಡುವ ತಂಡವೇ ಈ ಹಿಟ್ ಟೀಮ್. ಹೀಗಾಗಿಯೇ ಎನ್​ಐಎ ಮೋಸ್ಟ್ ವಾಂಟೆಡ್ ಲಿಸ್ಟ್​ನಲ್ಲಿದ್ದ ತುಫೈಲ್​ನ ಸುಳಿವು ನೀಡಿದವರಿಗೆ 5 ಲಕ್ಷ ಘೋಷಣೆ ಮಾಡಿತ್ತು. ಸದ್ಯ ಅರೆಸ್ಟ್ ಆಗಿರುವ ಈತನ ವಿಚಾರಣೆ ತೀವ್ರಗೊಂಡಿದೆ.

ನ್ಐಎ ಅಧಿಕಾರಿಗಳು ನಿನ್ನೆ (ಮಾ.4) ರಂದು ರಾತ್ರಿ 9.30 ಕ್ಕೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿ ಬಳಿ ತುಫೈಲ್​ನನ್ನು ಬಂಧಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸುಮಾರು 10ಕ್ಕೂ ಹೆಚ್ಚು ಎನ್​ಐಎ ಅಧಿಕಾರಿಗಳು ತುಫೈಲ್ ಮನೆ ಬಳಿಗೆ ಹೋಗಿದ್ದಾರೆ. ನಂತರ ಮೊದಲಿಗೆ ಇಬ್ಬರು ಅಧಿಕಾರಿಗಳು ಫ್ಲಂಬರ್ ಅಂತ ಕೈಯಲ್ಲಿ ರಿಂಚ್ ಹಿಡಿದು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ತುಫೈಲ್ ಮಟನ್​ ಕತ್ತರಿಸುತ್ತಿದ್ದನು. ಇಬ್ಬರು ಅಧಿಕಾರಿಗಳು ಒಳಗಡೆ ಬಂದದ್ದನ್ನು ನೋಡಿದ ತುಫೈಲ್ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದನು. ಈ ವೇಳೆ ಉಳಿದ ಅಧಿಕಾರಿಗಳೂ ಮನೆಯೊಳಗೆ ದಾಳಿ ನಡೆಸಿ ತುಫೈಲ್​ನನ್ನು ಲಾಕ್ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ