ಮಂಗಳೂರು ದಸರಾ ಮೆರವಣಿಗೆಯಲ್ಲಿ ದೈವ ಕೋಲಗಳ ಸ್ತಬ್ಧಚಿತ್ರಕ್ಕೆ ಅವಕಾಶ ಇಲ್ಲ

|

Updated on: Oct 13, 2023 | 11:03 AM

Mangaluru Dussehra: ಹಬ್ಬದಂದು ಸಾರ್ವಜನಿಕವಾಗಿ ಹೋಗುವ ಮರೆವಣಿಗಳಲ್ಲಿ ದೈವದ ಕೋಲ ದೃಶ್ಯರೂಪಕ ಟ್ಯಾಬ್ಲೋಗಳನ್ನು ಬಳಸದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಿತಿಯು ತಿಳಿಸಿದೆ. ಅನೇಕ ಸಂಘಟನೆಗಳ ವಿರೋಧದ ಹಿನ್ನಲೆಯಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಮಿತಿಯು ಮಂಗಳೂರು ದಸರಾದ ಮೆರವಣಿಗಳಲ್ಲಿ ತುಳುನಾಡಿನ ದೈವಗಳ ದೃಶ್ಯರೂಪಕ ಟ್ಯಾಬ್ಲೋಗಳನ್ನು ಪ್ರದರ್ಶಿಸಿದಂತೆ ತಿರ್ಮಾನಿಸಿದೆ.

ಮಂಗಳೂರು ದಸರಾ ಮೆರವಣಿಗೆಯಲ್ಲಿ ದೈವ ಕೋಲಗಳ ಸ್ತಬ್ಧಚಿತ್ರಕ್ಕೆ ಅವಕಾಶ ಇಲ್ಲ
Follow us on

ಮಂಗಳೂರು, ಅ.13: ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಹಬ್ಬದ ಮೆರವಣಿಗಳಲ್ಲಿ ದೈವದ ಕೋಲ ದೃಶ್ಯರೂಪಕ ಮಾಡಿ ವಿವಾದಕ್ಕೆ ಒಳಲಾಗುತ್ತಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಹಬ್ಬದಂದು ಸಾರ್ವಜನಿಕವಾಗಿ ಹೋಗುವ ಮರೆವಣಿಗಳಲ್ಲಿ ದೈವದ ಕೋಲ ದೃಶ್ಯರೂಪಕ ಟ್ಯಾಬ್ಲೋಗಳನ್ನು ಬಳಸದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಿತಿಯು ತಿಳಿಸಿದೆ. ಅನೇಕ ಸಂಘಟನೆಗಳ ವಿರೋಧದ ಹಿನ್ನಲೆಯಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಮಿತಿಯು ಮಂಗಳೂರು ದಸರಾದ ಮೆರವಣಿಗಳಲ್ಲಿ ತುಳುನಾಡಿನ ದೈವಗಳ ದೃಶ್ಯರೂಪಕ ಟ್ಯಾಬ್ಲೋಗಳನ್ನು ಪ್ರದರ್ಶಿಸಿದಂತೆ ತಿರ್ಮಾನಿಸಿದೆ.

ಕುದ್ರೋಳಿ ಗೋಕರ್ಣನಾಥ 34ನೇ ವರ್ಷದ ದಸರಾ ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದೆ. 9 ದಿನಗಳ ನವರಾತ್ರಿ ಉತ್ಸವ ಅಕ್ಟೋಬರ್​​ 15ರಿಂದ ಆರಂಭವಾಗಲಿದ್ದು, ಅಕ್ಟೋಬರ್​​ 24ಕ್ಕೆ ದಸರಾಕ್ಕೆ ತೆರೆಬೀಳಲಿದೆ. ಈ ದಿನದಂದು ಬೃಹತ್​​ ಶೋಭಾಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಬೇರೆ ಬೇರೆ ಸಂಘಟನೆಗಳ ಟ್ಯಾಬ್ಲೋಗಳ ಪ್ರದರ್ಶನಗೊಳ್ಳಲಿದೆ.

ಇನ್ನು ದಕ್ಷಿಣ ಕನ್ನಡದ ಅನೇಕ ಕಡೆ ದೈವದ ಕೋಲದ ರೂಪಕಗಳು ಪ್ರದರ್ಶನಗೊಳ್ಳುತ್ತಿದೆ. ಇನ್ನು ಮುಂದೆ ಇದು ನಡೆಬಾರದು ಹಾಗೂ ಈ ಬಾರಿ ದಸರಾದಲ್ಲೂ ಇದಕ್ಕೆ ಅವಕಾಶ ನೀಡಬಾರದು ಎಂದು ದೂರು ಬಂದಿದೆ ಎಂದು ದೇವಸ್ಥಾನ ಸಮಿತಿ ಕೋಶಾಧಿಕಾರಿ ಆರ್.ಪದ್ಮರಾಜ್ ತಿಳಿಸಿದ್ದಾರೆ.

ದೈವಗಳ ಇಂತಹ ಪ್ರದರ್ಶನಗಳು ಹಿಂದೂ ಮತ್ತು ತುಳುವರ ಧಾರ್ಮಿಕ ನಂಬಿಕೆಗೆ ಅಪಮಾನ ಮಾಡಿದಂತೆ ಎಂದು ಸಂಘಟನೆಗಳು ಹೇಳಿದೆ. ಹೀಗಾಗಿ ಮಂಗಳೂರು ದಸರಾದ ಮೆರವಣಿಗಳ ಸ್ತಬ್ದಚಿತ್ರಗಳಲ್ಲಿ ದೈವದ ಕೋಲದ ರೂಪಕಗಳನ್ನು ಬಳಸದಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಸಮಿತಿ ಯಾರ ಭಾವನೆಗೂ ದಕ್ಕೆ ಬರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಹಾಗಾಗಿ ಧಾರ್ಮಿಕ ಭಾವನೆಗೆ ದಕ್ಕೆ ಬರುವ ಸ್ತಬ್ದಚಿತ್ರಗಳಿಗೆ ಅವಕಾಶ ಇಲ್ಲ ಎಂದು ಹೇಳಿದೆ.

ಇದನ್ನೂ ಓದಿ:ಮಂಗಳೂರು ದಸರಾದ ಗರಿಮೆ ಹುಲಿ ವೇಷ, ಇದರ ಆಚರಣೆ, ವೇಷ -ಭೂಷಣದ ಪದ್ಧತಿ ಹೇಗೆ?

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ದೇವತೆಗಳು ಹಾಗೂ ದೈವಗಳ ಟ್ಯಾಬ್ಲೋಗಳಿಗೆ ಅವಕಾಶ ಇಲ್ಲ ಎಂದು ನಿರ್ಧಾರಿಸಲಾಗಿದೆ. ಈ ಬಗ್ಗೆ ಎಲ್ಲ ಟ್ಯಾಬ್ಲೋ ಪ್ರದರ್ಶಕರಿಗೆ ತಿಳಿಸಲಾಗಿದೆ ಎಂದು ಆರ್.ಪದ್ಮರಾಜ್ ಹೇಳಿದ್ದಾರೆ. ಇನ್ನು ದಸರಾ ಮೆರವಣಿಗಳಲ್ಲಿ ಡಿಜೆ ಸಂಗೀತ ಮತ್ತು ನೃತ್ಯವನ್ನು ನಿಷೇಧಿಸುವ ಬಗ್ಗೆಯೂ ಸಮಿತಿಯು ಚಿಂತಿಸುತ್ತಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಎಲ್ಲ ಸಂಘಟಕರ ಸಭೆ ಕರೆದಿದ್ದೇವೆ. ಈ ಡಿಜೆ ಸಂಗೀತ ಮತ್ತು ನೃತ್ಯ ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತಿದೆ. ಧಾರ್ಮಿಕ ಆಚರಣೆಗಳಲ್ಲಿ ಈ ಇಂತಹ ವ್ಯವಸ್ಥೆಗಳು ಸರಿಯಲ್ಲ, ಹಾಗಾಗಿ ಸಂಘಟಕರ ಸಭೆಯ ಕರೆದು ತಿರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ