ಮಂಗಳೂರು: ವಿದ್ಯಾರ್ಥಿನಿ ಜೊತೆ ನಿಂತಿದ್ದ ಇಬ್ಬರು ಅನ್ಯಕೋಮಿನ ಯುವಕರ ಮೇಲೆ ನೈತಿಕ ಪೊಲೀಸ್​ ಗಿರಿ

ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಸ್ ಸ್ಟ್ಯಾಂಡ್​ನಲ್ಲಿ ವಿದ್ಯಾರ್ಥಿನಿ ಜೊತೆ ನಿಂತಿದ್ದ ಅನ್ಯಕೋಮಿನ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದೆ.

ಮಂಗಳೂರು: ವಿದ್ಯಾರ್ಥಿನಿ ಜೊತೆ ನಿಂತಿದ್ದ ಇಬ್ಬರು ಅನ್ಯಕೋಮಿನ ಯುವಕರ ಮೇಲೆ ನೈತಿಕ ಪೊಲೀಸ್​ ಗಿರಿ
ವಿದ್ಯಾರ್ಥಿನಿ ಜೊತೆ ನಿಂತಿದ್ದ ಅನ್ಯಕೋಮಿನ ಇಬ್ಬರು ಯುವಕರು
Follow us
| Updated By: ವಿವೇಕ ಬಿರಾದಾರ

Updated on: Oct 13, 2023 | 7:57 AM

ಮಂಗಳೂರು ಅ.13: ಇನ್ಮುಂದೆ ನೈತಿಕ ಪೊಲೀಸ್​​ ಗಿರಿ (Moral police giri) ಇರಲ್ಲ, ಇದಕ್ಕೆ ನಾವು ಅಂತ್ಯ ಹಾಡುತ್ತೇವೆ ಎಂದು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಖಡಕ್​ ಸಂದೇಶ ರವಾನಿಸಿದ್ದರು. ಆದರೂ ಕರವಾಳಿ ಭಾಗದಲ್ಲಿ ಪದೇ ಪದೇ ನೈತಿಕ ಪೊಲೀಸ್​ ಗಿರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಪ್ರಕರಣ ವರದಿಯಾಗಿದೆ. ದ‌ಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwala) ತಾಲೂಕಿನ ಪೆರುವಾಯಿ ಬಸ್ ಸ್ಟ್ಯಾಂಡ್​ನಲ್ಲಿ ವಿದ್ಯಾರ್ಥಿನಿ ಜೊತೆ ನಿಂತಿದ್ದ ಅನ್ಯಕೋಮಿನ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದೆ.

ಓರ್ವ ವಿದ್ಯಾರ್ಥಿನಿ ಮತ್ತು ಇಬ್ಬರು ಅನ್ಯಕೋಮಿನ ಯುವಕರು ಕುದ್ದುಪದವುನಿಂದ ಬಸ್​​ನಲ್ಲಿ ಬಂದು ಪೆರುವಾಯಿ ಬಸ್​​ ನಿಲ್ದಾಣದಲ್ಲಿ ಇಳಿದಿದ್ದಾರೆ. ಮೂವರು ಬಸ್​​ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ವರ್ತಿಸಿದ್ದಾರೆ. ಇದನ್ನು ಕಂಡ ಸ್ಥಳೀಯ ಯುವಕರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಮೂವರು ಕಾಸರಗೋಡಿನ ಉಪ್ಪಳಗೆ ತೆರಳಲು ಬಸ್​​ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ನೈತಿಕ ಪೊಲೀಸ್​ ಗಿರಿ ಕೇಸ್: ಐವರ ಬಂಧನ, ಠಾಣೆಗೆ ಬಿಜೆಪಿ, ಹಿಂದೂ ಸಂಘಟನೆ ಮುಂಖಂಡರು ದೌಡು

ಮೂವರೂ ವಿದ್ಯಾರ್ಥಿಗಳಾಗಿದ್ದು, ಕಾಸರಗೋಡಿನ ಪೆರ್ಲ ಆಸುಪಾಸಿನವರೆಂಬ ಮಾಹಿತಿ ದೊರೆತಿದೆ. ಇದೇ ವೇಳೆ ಸ್ಥಳೀಯ ಯುವಕರು ವಿದ್ಯಾರ್ಥಿಗಳ ವಿಡಿಯೋ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ