ಮಂಗಳೂರು ರೌಡಿಗಳಿಗೆ ನೂತನ ಪೊಲೀಸ್ ಕಮೀಶನರ್ ಅನುಪಮ್ ಅಗರವಾಲ್ ಖಡಕ್ ಎಚ್ಚರಿಕೆ
ಒಬ್ಬ ರೌಡಿಯ ಮೇಲೆ ಹಲವಾರು ಕೇಸ್ ಗಳಿರೋದನ್ನು ಒಬ್ಬ ಅಧಿಕಾರಿ ತಿಳಿಸಿದಾಗ, ಅವನನ್ನು ಯಾಕೆ ಗಡೀಪಾರು ಮಾಡಿಲ್ಲ? ಕೂಡಲೇ ಅ ಕೆಲಸ ಮಾಡಿ ಹೇಳಿದರು. ರೌಡಿಗಳೊಂದಿಗೆ ಮಾತಾಡಿದ ಅವರು, 8-10 ಜನರನ್ನು ಗಡೀಪಾರು ಮಾಡಬೇಕಾದ ಅವಶ್ಯಕತೆಯಿದೆ, ಹೆಸರುಗಳನ್ನು ಅಧಿಕಾರಿಗಳು ತಿಳಸುತ್ತಾರೆ. ಮುಂದಿನ ದಿನಗಳಲ್ಲಿ ನಡತೆ ಮತ್ತು ವರ್ತನೆ ಸರಿ ಹೋಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಎಚ್ಚರಿಸಿದರು.
ಮಂಗಳೂರು: ಕರಾವಳಿ ನಗರದಲ್ಲಿ ಕುಖ್ಯತ ರೌಡಿಗಳಿದ್ದಾರೆ (notorious rowdies) ಅನ್ನೋದು ಗೊತ್ತರುವ ವಿಚಾರವೇ. ಅವರನ್ನು ಹದ್ದುಬಸ್ತಿನಲ್ಲಿಡೋದು ಖಡಕ್ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಇಲ್ಲಿಗೆ ಪೊಲೀಸ್ ಆಯಕ್ತರಾಗಿ ಅನುಪಮ್ ಆಗರವಾಲ್ (Anupam Agarwal) ಬಂದಿದ್ದಾರೆ. ಇವತ್ತು ಮಧ್ಯಾಹ್ನ ನಗರದ ಮತ್ತು ಸುತ್ತಮುತ್ತಲಿನ ರೌಡಿಶೀಟರ್ ಗಳ ಪರೇಡ್ ನಡೆಸಿದ ಅಗರವಾಲ್ ಪ್ರತಿಯೊಬ್ಬ ರೌಡಿಯ ವಿವರವನ್ನು ಆಯಾ ವಿಭಾಗದ ಪೊಲೀಸ್ ಆಧಿಕಾರಿಗಳಿಂದ (police officials) ಪಡೆದರು. ಯಾವ್ಯಾವ ರೌಡಿಯ ವಿರುದ್ಧ ಎಷ್ಟೆಷ್ಟು ಕೇಸ್ ದಾಖಲಾಗಿವೆ, ಅವರು ಎಸಗಿದ ಅಪರಾಧಗಳ ಸ್ವರೂಪ ಎಂಥದ್ದು, ಯಾವ ರೌಡಿಯ ಪ್ರಕರಣ ಕೋರ್ಟ್ ನಲ್ಲಿದೆ ಮೊದಲಾದ ಮಾಹಿತಿಯನ್ನು ಅವರು ಪಡೆದರು. ಒಬ್ಬ ರೌಡಿಯ ಮೇಲೆ ಹಲವಾರು ಕೇಸ್ ಗಳಿರೋದನ್ನು ಒಬ್ಬ ಅಧಿಕಾರಿ ತಿಳಿಸಿದಾಗ, ಅವನನ್ನು ಯಾಕೆ ಗಡೀಪಾರು ಮಾಡಿಲ್ಲ? ಕೂಡಲೇ ಅ ಕೆಲಸ ಮಾಡಿ ಹೇಳಿದರು. ರೌಡಿಗಳೊಂದಿಗೆ ಮಾತಾಡಿದ ಅವರು, 8-10 ಜನರನ್ನು ಗಡೀಪಾರು ಮಾಡಬೇಕಾದ ಅವಶ್ಯಕತೆಯಿದೆ, ಹೆಸರುಗಳನ್ನು ಅಧಿಕಾರಿಗಳು ತಿಳಿಸುತ್ತಾರೆ. ಮುಂದಿನ ದಿನಗಳಲ್ಲಿ ನಡತೆ ಮತ್ತು ವರ್ತನೆ ಸರಿ ಹೋಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಎಚ್ಚರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ