ತೀವ್ರ ಮಳೆ ಅಭಾವದ ಕಾರಣ ಲೋಡ್ ಶೆಡ್ಡಿಂಗ್ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ: ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಶಾಸಕ

ಮಳೆಯ ತೀವ್ರ ಅಭಾವದ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಲೇಬೇಕಿದೆ. ಮಲೆನಾಡು ಭಾಗದಲ್ಲೇ ಶೇಕಡ 40ರಷ್ಟು ಮಾತ್ರ ಮಳೆಯಾಗಿದೆ. ಶರಾವತಿ ಡ್ಯಾಂನಲ್ಲಿ ನೀರಿಲ್ಲ, ವಿದ್ಯುತ್ ಉತ್ಪಾದನೆ ಫೆಬ್ರುವರಿ-ಮಾರ್ಚ್ ವರೆಗೆ ಮಾತ್ರ ಆಗಬಹುದು. ಹಾಗಾಗಿ ಲೋಡ್ ಶೆಡ್ಡಿಂಗ್ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಗೋಪಾಲಕೃಷ್ಣ ಹೇಳಿದರು.

ತೀವ್ರ ಮಳೆ ಅಭಾವದ ಕಾರಣ ಲೋಡ್ ಶೆಡ್ಡಿಂಗ್ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ: ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಶಾಸಕ
|

Updated on: Oct 12, 2023 | 6:59 PM

ಬೆಂಗಳೂರು: ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ನೇರ ಮಾತಿಗೆ ಹೆಸರಾದವರು ಮಾರಾಯ್ರೇ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಲೇವಡಿ ಮಾಡಿದರು. ಡಿಕೆ ಶಿವಕುಮಾರ್ (DK Shivakumar) ಅವರು ಪುನಃ ಜೈಲಿಗೆ ಹೋಗಬೇಕಾಗುತ್ತದೆ ಅಂತ ಕುಮಾರಸ್ವಾಮಿ ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ, ಪಾಪ ಮೊನ್ನೆ ದೆಹಲಿಗೆ ಹೋಗಿ ಬಿಜೆಪಿ ನಾಯಕರ ಜೊತೆ ಜೊತೆ ಮಾತಾಡಿ ಬಂದಂತಿದೆ, ವಾಪಸ್ಸು ಬಂದ ಬಳಿಕ ಏನೇನೋ ಮಾತಾಡುತ್ತಿದ್ದಾರೆ, ಅದ್ಯಾವ ಆಧಾದರಲ್ಲಿ ಜೈಲಿಗೆ ಕಳಿಸ್ತಾರಂತೆ? ಕೋರ್ಟಲ್ಲಿ ಕೇಸ್ ನಡೆಯುತ್ತಿರಬೇಕಾದರೆ ಇವರು ಜೈಲಿಗೆ ಕಳಿಸ್ತಾರಾ? ಎಂದು ಗೋಲಾಲಕೃಷ್ಣ ಹೇಳಿದರು. ಲೋಡ್ ಶೆಡ್ಡಿಂಗ್ ಬಗ್ಗೆ ಮಾತಾಡಿದ ಅವರು, ಮಳೆಯ ತೀವ್ರ ಅಭಾವದ ಹಿನ್ನೆಲೆಯಲ್ಲಿ ಅದನ್ನು ಮಾಡಲೇಬೇಕಿದೆ. ಮಲೆನಾಡು ಭಾಗದಲ್ಲೇ ಶೇಕಡ 40ರಷ್ಟು ಮಾತ್ರ ಮಳೆಯಾಗಿದೆ. ಶರಾವತಿ ಡ್ಯಾಂನಲ್ಲಿ ನೀರಿಲ್ಲ, ವಿದ್ಯುತ್ ಉತ್ಪಾದನೆ ಫೆಬ್ರುವರಿ-ಮಾರ್ಚ್ ವರೆಗೆ ಮಾತ್ರ ಆಗಬಹುದು. ಹಾಗಾಗಿ ಲೋಡ್ ಶೆಡ್ಡಿಂಗ್ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಗೋಪಾಲಕೃಷ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us