ಇಸ್ರೇಲ್ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ, ಭಾರತ ಸರ್ಕಾರ ಅವರನ್ನು ವಾಪಸ್ಸು ಕರೆತರುವ ವ್ಯವಸ್ಥೆ ಮಾಡಿದೆ: ಇಸ್ರೇಲಿಂದ ವಾಪಸ್ಸಾದ ಕನ್ನಡಿಗ
ಕನ್ನಡಿಗರು ಇಸ್ರೇಲ್ ನ ಯಾವ್ಯಾವ ಭಾಗದಲ್ಲಿದ್ದಾರೆ ಎನ್ನುವ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ಹೇಳುವ ಅವರು ಭಾರತೀಯರ ಸುರಕ್ಷತೆ ವಿಷಯದಲ್ಲಿ ಗಾಬರಿಯಾಗಬೇಕಿಲ್ಲ, ಅವರನ್ನು ವಾಪಸ್ಸು ಕರೆತರುವ ಕೆಲಸವನ್ನು ಭಾರತ ಸರ್ಕಾರ ಮಾಡುತ್ತಿದೆ ಎಂದರು. ಜಯೇಷ್, ಗಾಜಾ ಬಾರ್ಡರ್ ನಿಂದ ಸುಮಾರು 70-75 ಕಿಮೀ ದೂರದ ಅರಿಯಲ್ ಎಂಬ ಪ್ರದೇಶದಲ್ಲಿ ವಾಸವಾಗಿದ್ದರಂತೆ.
ದೆಹಲಿ: ಆಪರೇಶನ್ ಅಜಯ್ (Operation Ajay) ಭಾಗವಾಗಿ ಭಾರತೀಯ ವಾಯುಸೇನೆಯ ವಿಮಾನವು ಇಸ್ರೇಲ್ ನಲ್ಲಿದ್ದ ಭಾರತೀಯರನ್ನು ವಾಪಸ್ಸು ಕರೆತರುವ ಕಾರ್ಯಾಚರಣೆ ಆರಂಭವಾಗಿದ್ದು ಮೊದಲ ಬ್ಯಾಚ್ ನಲ್ಲಿ 212 ಜನ ತಾಯ್ನಾಡಿಗೆ (homeland) ವಾಪಸ್ಸಾಗಿದ್ದಾರೆ. ದೆಹಲಿಯಲ್ಲಿ ಬಂದಿಳಿದವರ ಪೈಕಿ ಐವರು ಕನ್ನಡಿಗರಾಗಿದ್ದು (Kannadigas) ಜಯೇಷ್ (Jayesh) ಎನ್ನುವವರು ಟಿವಿ9 ಕನ್ನಡ ವಾಹಿನಿಯ ದೆಹಲಿ ಪ್ರತಿನಿಧಿಯೊಂದಿಗೆ ಮಾತಾಡಿದ್ದರು. ಜಯೇಷ್ ಹೇಳುವ ಪ್ರಕಾರ ಇಸ್ರೇಲ್ ನಲ್ಲಿರುವ ಭಾರತೀಯರಿಗೆ ಆತಂಕಪಡುವ ಸ್ಥಿತಿಯೇನೂ ಇಲ್ಲ, ಅವರೆಲ್ಲ ಸುರಕ್ಷಿತವಾಗಿದ್ದಾರೆ. ಕನ್ನಡಿಗರು ಇಸ್ರೇಲ್ ನ ಯಾವ್ಯಾವ ಭಾಗದಲ್ಲಿದ್ದಾರೆ ಎನ್ನುವ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ಹೇಳುವ ಅವರು ಭಾರತೀಯರ ಸುರಕ್ಷತೆ ವಿಷಯದಲ್ಲಿ ಗಾಬರಿಯಾಗಬೇಕಿಲ್ಲ, ಅವರನ್ನು ವಾಪಸ್ಸು ಕರೆತರುವ ಕೆಲಸವನ್ನು ಭಾರತ ಸರ್ಕಾರ ಮಾಡುತ್ತಿದೆ ಎಂದರು. ಜಯೇಷ್, ಗಾಜಾ ಬಾರ್ಡರ್ ನಿಂದ ಸುಮಾರು 70-75 ಕಿಮೀ ದೂರದ ಅರಿಯಲ್ ಎಂಬ ಪ್ರದೇಶದಲ್ಲಿ ವಾಸವಾಗಿದ್ದರಂತೆ. ಇಸ್ರೇಲ್ ನಲ್ಲಿ ಪರಿಸ್ಥಿತಿ ಸಾಮಾನ್ಯಗೊಂಡ ಬಳಿಕ ವಾಪಸ್ಸು ಹೋಗುವುದಾಗಿ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ