ಮಂಗಳೂರು, ನ.10: ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆಯ ಬೆನ್ನಲ್ಲೇ ಮಂಗಳೂರಿ(Mangalore)ನಲ್ಲಿ ಮತ್ತೆ ತಲ್ವಾರ್ ಝಳಪಳಿಸಿದೆ. ಹೌದು, ಅರುಣ್ ಕುಮಾರ್ ಪುತ್ತಿಲ(Arunkumar Putthila) ಪರಿವಾರ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರ ಮಧ್ಯೆ ಸಂಘರ್ಣೆ ಉಂಟಾಗಿದ್ದು, ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಚೇರಿಗೆ ನುಗ್ಗಲು ಯತ್ನಿಸಿದ ಆರೋಪ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ವಿರುದ್ದ ಕೇಳಿಬಂದಿದೆ. ಅಷ್ಟೇ ಅಲ್ಲ, ಪುತ್ತಿಲ ಪರಿವಾರದ ಮನೀಶ್ ಕುಲಾಲ್ ಎಂಬುವವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪ ಮಾಡಿದ್ದಾರೆ.
ಹೌದು, ಹಿಂದೂ ಜಾಗರಣ ವೇದಿಕೆಯ ದಿನೇಶ್ ಪಂಜಿಗ ತಂಡದಿಂದ ತಲ್ವಾರ್ನಲ್ಲಿ ಹಲ್ಲೆಗೆ ಯತ್ನಿಸಿದ ಆರೋಪದ ಹಿನ್ನಲೆ ಪುತ್ತೂರು ಠಾಣೆ ಎದುರು ಹಿಂದೂ ಜಾಗರಣ ವೇದಿಕೆ ಹಾಗೂ ಪುತ್ತಿಲ ಪರಿವಾರದ ಕಾರ್ಯಕರ್ತರು ಜಮಾಯಿಸಿದ್ದಾರೆ. ಇನ್ನು ತಲ್ವಾರ್ ತೋರಿಸಿದ ದಿನೇಶ್ ಪಂಜಿಗನನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ಹಿಂದೆ ಫೇಸ್ ಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಕಾರಣ ಎಂಬ ಮಾಹಿತಿ ಕೇಳಿಬರುತ್ತಿದೆ. ತನಿಖೆಯ ಬಳಿಕ ಸತ್ಯಾಂಶ ಹೊರಬರಬೇಕಿದೆ.
ಇದನ್ನೂ ಓದಿ:ಕೋಲಾರದಲ್ಲಿ ಸ್ನೇಹಿತರಿಂದಲೇ ಅಪ್ರಾಪ್ತ ಬಾಲಕನ ಹತ್ಯೆ; ಕಾಲೇಜು ಮಕ್ಕಳಿಗೆ ಕಾನೂನು ಜಾಗೃತಿ ಮೂಡಿಸಲು ಮುಂದಾದ ಪೊಲೀಸರು
ಇನ್ನು ಕಳೆದ ಎರಡ್ಮೂರು ದಿನಗಳ ಹಿಂದೆ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರ ಜಂಕ್ಷನ್ನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಕ್ಷಯ್ ಕಲ್ಲೇಗ (26) ಹತ್ಯೆಯಾದ ಯುವಕ. ಇನ್ನು ಕೊಲೆಯ ಬಳಿಕ ಮೂವರು ಆರೋಪಿಗಳ ಪೈಕಿ, ಇಬ್ಬರು ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಬನ್ನೂರು ನಿವಾಸಿ ಮನೀಷ್, ಚೇತು, ಮಂಜ, ಕೇಶವ ಬಂಧಿತ ಆರೋಪಿಗಳು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ತಲ್ವಾರ್ ಸದ್ದು ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Fri, 10 November 23