ದಾವಣಗೆರೆ: ಜ್ವರದಿಂದ 13 ವರ್ಷದ ಬಾಲಕಿ ಸಾವು; ಡೆಂಗ್ಯೂನಿಂದ ಮೃತಪಟ್ಟಿರುವ ಶಂಕೆ

| Updated By: preethi shettigar

Updated on: Sep 22, 2021 | 12:09 PM

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಮುಜಾಹಿದ್ ಎಂಬುವರ ಪುತ್ರಿ ಸುಮಯಾ ಕೌಸರ್ ಮೃತ ದುರ್ದೈವಿ. ಇದು ಡೆಂಗ್ಯೂ ಶಂಕಿತ ಪ್ರಕರಣವಾಗಿದೆ. ಆದರೆ ಡೆಂಗ್ಯೂ ಎಂದು ಇನ್ನೂ ಕೂಡ ಖಚಿತವಾಗಿಲ್ಲ ಎಂದು ಟಿವಿ9 ಡಿಜಿಟಲ್​ಗೆ ದಾವಣಗೆರೆ ಡಿಹೆಚ್‌ಒ ಡಾ.ನಾಗರಾಜ ತಿಳಿಸಿದ್ದಾರೆ.

ದಾವಣಗೆರೆ: ಜ್ವರದಿಂದ 13 ವರ್ಷದ ಬಾಲಕಿ ಸಾವು;  ಡೆಂಗ್ಯೂನಿಂದ ಮೃತಪಟ್ಟಿರುವ ಶಂಕೆ
ಪ್ರಾತಿನಿಧಿಕ ಚಿತ್ರ
Follow us on

ದಾವಣಗೆರೆ: ಜ್ವರದಿಂದ 13 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಸುಮಯಾ ಕೌಸರ್ ಎಂಬ ಬಾಲಕಿ ಜ್ವರದಿಂದ ಬಳಲುತ್ತಿದ್ದಳು. ಹೀಗಾಗಿ ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲಿ ಸುಮಯಾ ಮೃತಪಟ್ಟಿದ್ದಾಳೆ ಎಂದು ಟಿವಿ9 ಡಿಜಿಟಲ್​ಗೆ ದಾವಣಗೆರೆ ಡಿಹೆಚ್‌ಒ ಡಾ.ನಾಗರಾಜ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಮುಜಾಹಿದ್ ಎಂಬುವರ ಪುತ್ರಿ ಸುಮಯಾ ಕೌಸರ್ ಮೃತ ದುರ್ದೈವಿ. ಇದು ಡೆಂಗ್ಯೂ ಶಂಕಿತ ಪ್ರಕರಣವಾಗಿದೆ. ಆದರೆ ಡೆಂಗ್ಯೂ ಎಂದು ಇನ್ನೂ ಕೂಡ ಖಚಿತವಾಗಿಲ್ಲ ಎಂದು ಟಿವಿ9 ಡಿಜಿಟಲ್​ಗೆ ದಾವಣಗೆರೆ ಡಿಹೆಚ್‌ಒ ಡಾ.ನಾಗರಾಜ ತಿಳಿಸಿದ್ದಾರೆ.

ದೇವನಹಳ್ಳಿ: ಬಿಎಸ್ಎಫ್ ಕ್ಯಾಂಪ್​ನಲ್ಲಿ 70 ಯೋಧರಿಗೆ ಕೊರೊನಾ
ಬಿಎಸ್ಎಫ್ ಕ್ಯಾಂಪ್‌ನ 70 ಯೋಧರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿಯ BSF ಕ್ಯಾಂಪ್ನಲ್ಲಿ ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ ತಗುಲಿದೆ.

ಮೊದಲು 34 ಯೋಧರಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಇಂದು ಮತ್ತೆ 36 ಯೋಧರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 2 ದಿನದಲ್ಲಿ 70 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದು ಬಂದಿದೆ. ಇನ್ನು 70 ಸೋಂಕಿತರ ಪೈಕಿ ಒಬ್ಬ ಯೋಧನಿಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ 11 ರಂದು ಮೇಘಾಲಯದಿಂದ ಬೆಂಗಳೂರಿನ ಬಿಎಸ್ಎಪ್ ಕ್ಯಾಂಪ್ಗೆ ಬಂದಿದ್ದ ಯೋಧರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ ಇಂದು 70 ಕ್ಕೆ ಏರಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಳಿಯಿರೂ ಬಿಎಸ್ಎಫ್ ಟ್ರೈನಿಂಗ್ ಕ್ವಾಟರ್ಸ್ ನಲ್ಲಿ ಉಳಿದುಕೊಂಡಿದ್ದ 365 ಜನರಿಗೆ ನೆನ್ನೆ ಆರ್ಟಿಪಿಸಿಆರ್ ಟೆಸ್ಟಿಂಗ್ ಮಾಡಲಾಗಿತ್ತು‌. ಹೀಗಾಗಿ ಇಂದು ಬೆಳಗ್ಗೆ ಟೆಸ್ಟಿಂಗ್ ವರದಿ ಬಂದಿದ್ದು ನೆನ್ನೆ ಆಸ್ವತ್ರೆಗೆ ದಾಖಲಾಗಿದ್ದ 34 ಜನರ ಜೊತೆಗೆ ಇದೀಗ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿರೂ 36 ಜನರನ್ನ ಐಸೋಲೇಷನ್ ಗೆ ಕಳಿಸುವ ಕೆಲಸವನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡ್ತಿದ್ದಾರೆ. ಜತೆಗೆ 34 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 70 ಕ್ಕೆ ಏರಿಕೆಯಾಗಿರೂ ಕಾರಣ ಬಿಎಸ್ಎಫ್ ಯೋಧರಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ:
ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಜ್ವರದಿಂದ 12 ಮಂದಿ ಸಾವು; ಡೆಂಗ್ಯೂ, ಮಲೇರಿಯಾ ಕಾರಣ ಎಂದ ಅಧಿಕಾರಿಗಳು

ಬೆಂಗಳೂರಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಜ್ವರ, ಕೆಮ್ಮು, ನೆಗಡಿ ಸಮಸ್ಯೆ; ಮಕ್ಕಳ ತಜ್ಞರ ಜೊತೆ ಬಿಬಿಎಂಪಿ ಸಭೆ

Published On - 12:02 pm, Wed, 22 September 21