
ದಾವಣಗೆರೆ: ಆಟೋ-ಬೈಕ್ ನಡುವೆ ಡಿಕ್ಕಿಯಾಗಿ ಅಳಿಯ ಹಾಗೂ ಮಾವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಅಣಬೇರು ಗ್ರಾಮದ ಮಹಬಳೇಶಪ್ಪ(50), ನಲ್ಕುಂದ ಗ್ರಾಮದ ಈಶಪ್ಪ(60) ಮೃತ ದುರ್ದೈವಿಗಳು.
ಸ್ವಗ್ರಾಮದಿಂದ ದಾವಣಗೆರೆಗೆ ಬೈಕ್ನಲ್ಲಿ ಅಳಿಯ ಹಾಗೂ ಮಾವ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ಆಟೋ ಡಿಕ್ಕಿಯೊಡೆದಿದೆ. ಹೀಗಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Published On - 2:43 pm, Mon, 1 June 20