ಕೊವಿಡ್ ಆಸ್ಪತ್ರೆಯಲ್ಲಿ ಮೂವರು ವೈದ್ಯರಿಗೆ ಕೊರೊನಾ, ಹೆಚ್ಚಾದ ಆತಂಕ
ದಾವಣಗೆರೆ: ಕೊವಿಡ್ ಆಸ್ಪತ್ರೆಯಲ್ಲಿ ಮೂವರು ವೈದ್ಯರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿರುವ ಹಿನ್ನೆಲೆಯಲ್ಲಿ ಕೊವಿಡ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವವರಿಗೆ ಆತಂಕ ಶುರುವಾಗಿದೆ. ಕೊರೊನಾವನ್ನು ಓಡಿಸಲು ಪಣತೊಟ್ಟು ಕೆಲಸ ಮಾಡುತ್ತಿದ್ದ ವೈದ್ಯರಿಗೆ ಕೊರೊನಾ ಆವರಿಸಿದೆ. ದಾವಣಗೆರೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ32 ವರ್ಷದ ವೈದ್ಯೆ, 27 ವರ್ಷದ (ಪಿಜಿ) ವಿದ್ಯಾರ್ಥಿನಿ ಹಾಗೂ 22ವರ್ಷದ ಯುಜಿ ವಿದ್ಯಾರ್ಥಿಗೆ ಸೋಂಕು ತಗುಲಿದೆ. ಇವರೆಲ್ಲ ತರಳುಬಾಳು ಬಡಾವಣೆ, ಶಿವಕುಮಾರ ಸ್ವಾಮೀ ಬಡಾವಣೆ ಹಾಗೂ ವಿನಾಯಕ ನಗರದಲ್ಲಿ ವಾಸವಾಗಿದ್ದರು. ಹಳೇ ದಾವಣಗೆರೆಯ ಭಾಷಾ […]
ದಾವಣಗೆರೆ: ಕೊವಿಡ್ ಆಸ್ಪತ್ರೆಯಲ್ಲಿ ಮೂವರು ವೈದ್ಯರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿರುವ ಹಿನ್ನೆಲೆಯಲ್ಲಿ ಕೊವಿಡ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವವರಿಗೆ ಆತಂಕ ಶುರುವಾಗಿದೆ.
ಕೊರೊನಾವನ್ನು ಓಡಿಸಲು ಪಣತೊಟ್ಟು ಕೆಲಸ ಮಾಡುತ್ತಿದ್ದ ವೈದ್ಯರಿಗೆ ಕೊರೊನಾ ಆವರಿಸಿದೆ. ದಾವಣಗೆರೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ32 ವರ್ಷದ ವೈದ್ಯೆ, 27 ವರ್ಷದ (ಪಿಜಿ) ವಿದ್ಯಾರ್ಥಿನಿ ಹಾಗೂ 22ವರ್ಷದ ಯುಜಿ ವಿದ್ಯಾರ್ಥಿಗೆ ಸೋಂಕು ತಗುಲಿದೆ. ಇವರೆಲ್ಲ ತರಳುಬಾಳು ಬಡಾವಣೆ, ಶಿವಕುಮಾರ ಸ್ವಾಮೀ ಬಡಾವಣೆ ಹಾಗೂ ವಿನಾಯಕ ನಗರದಲ್ಲಿ ವಾಸವಾಗಿದ್ದರು. ಹಳೇ ದಾವಣಗೆರೆಯ ಭಾಷಾ ನಗರ ಜಾಲಿ ನಗರಕ್ಕೆ ಮೀಸಲಾಗಿದ್ದ ಕೊರೊನಾ ಸೋಂಕು ಈಗ ಹೊಸ ದಾವಣಗೆರೆಗೂ ಕಾಲಿಟ್ಟಿದೆ.
851 ಮಾದರಿಗಳ ವರದಿ ಬರಬೇಕಿದೆ. ಈಗಾಲೇ 8496 ಮಾದರಿ ಸಂಗ್ರಹ ಮಾಡಲಾಗಿದೆ. 156 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. 121ಜನ ಗುಣಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. 31ಜನ ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Published On - 9:11 am, Mon, 1 June 20